newsfirstkannada.com

ಪ್ರತಿಮಾ ಕೊಲೆ ಕೇಸ್​; ಕಾಲಿಂದ ಒದೆಯದೇ ಇದ್ದಿದ್ರೆ ಕೊಲೆ ಮಾಡ್ತಿರಲಿಲ್ಲ.. ಪೊಲೀಸರ ಮುಂದೆ ಆರೋಪಿ ಬಾಯ್ಬಿಟ್ಟಿದ್ದು ಏನೇನು?

Share :

09-11-2023

    ಕೊಲೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾನಾ ಆರೋಪಿ ಕಿರಣ್

    ಕಾಲಿನಿಂದ ಒದ್ದಿದ್ದಕ್ಕೆ ಆರೋಪಿ ಕೋಪ ನೆತ್ತಿಗೇರಿ ಹತ್ಯೆ ಮಾಡಿದ್ನಾ..?

    ಸುರಿಯುವ ಮಳೆ ಲೆಕ್ಕಿಸದೇ ಪ್ರತಿಮಾ ಮನೆಗೆ ಎಂಟ್ರಿ ಕೊಟ್ಟಿದ್ದ ಆರೋಪಿ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಹಂತಕ ಕಿರಣ್​, ಕೊಲೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ಅಷ್ಟಕ್ಕೂ ಕಿರಣ್ ಪ್ರತಿಮಾರನ್ನ ಕೊಲ್ಲುವ ನಿರ್ಧಾರಕ್ಕೆ ಬಂದಿದ್ದು ಏಕೆ? ಕೊಲೆಯಾದ ರಾತ್ರಿ ನಡೆದಿದ್ದೇನು ಅನ್ನೋ ಅಸಲಿ ಸತ್ಯ ಕಿರಣ್ ಬಾಯ್ಬಿಟ್ಟಿದ್ದಾನೆ.

ದಕ್ಷ ಅಧಿಕಾರಿ ಬ್ರಷ್ಟರ ಎದೆಯಲ್ಲಿ ನಡುಕು ಹುಟ್ಟಿಸಿದ್ದ ಖಡಕ್ ಆಫೀಸರ್​ ಪ್ರತಿಮಾ ಕೊಲೆ ಪ್ರಕರಣಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಕೊಲೆಯ ಸುಳಿವೇ ಸಿಗದೇ ಹತ್ಯೆ ಮಾಡಿದ್ದ ಆರೋಪಿ ಕಿರಣ್​ ಮಹದೇಶ್ವರ ಬೆಟ್ಟದಲ್ಲಿ ಪೊಲೀಸರ ಕೈಗೆ ತಗ್ಲಾಕೊಂಡಿದ್ದ. ಆದ್ರೀಗ ವಿಚಾರಣೆಯಲ್ಲಿ ಕೊಲೆಯ ಅಸಲಿ ಸತ್ಯಗಳನ್ನ ಕಿರಣ್ ಬಿಚ್ಚಿಟ್ಟಿದ್ದು ಈ ಕಾರಣಗಳನ್ನು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಕೊಲೆ ಆರೋಪಿ ಕಿರಣ್ ಹೇಳಿದ್ದೇನು ಗೊತ್ತಾ…?

ಸರ್ಕಾರಿ ಅಧಿಕಾರಿಯ ಹತ್ಯೆ ಅದ್ರಲ್ಲೂ ಮಹಿಳಾ ಅಧಿಕಾರಿ ಇದ್ದ ಮನೆಗೇ ನುಗ್ಗಿ ಮಾಡಿರೋ ಹತ್ಯೆ ಪೊಲೀಸರಿಗೂ ಶಾಕ್ ನೀಡಿತ್ತು. ಆದ್ರೆ ಇದನ್ನ ಹೊರಗಿನವರು ಯಾರು ಮಾಡಿರಲು ಸಾಧ್ಯವೇ ಇಲ್ಲ ಅನ್ನೋದು ಪೊಲೀಸರಿಗೂ ಗೊತ್ತಿತ್ತು. ತನಿಖೆ ಶುರು ಮಾಡಿದ ಪೊಲೀಸರು ಕೊನೆಗೆ ಕೊಲೆ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ರು. ಆದ್ರೀಗ ಪ್ರತಿಮಾ ಕೊಲೆಯ ಕಾರಣ ಕೇಳಿ ಪೊಲೀಸರಿಗೂ ಶಾಕ್ ಆಗಿದೆ.

‘ಕೊಲೆ ಮಾಡಿದ್ದು ನಾನೇ’

ಸುಮಾರು ವರ್ಷದಿಂದ ನಾನು ಇವರ ಬಳಿ ಕೆಲಸ ಮಾಡ್ತಿದ್ದೆ. ಮನೆ, ಕುಟುಂಬಸ್ಥರ ಬಳಿ ಸರ್ಕಾರಿ ಕೆಲಸ ಅಂತ ಹೇಳ್ಕೊಂಡಿದ್ದೆ. ಅದನ್ನೇ ಹೇಳ್ಕೊಂಡು ಮದುವೆ ಆಗಿದ್ದೆ. ಆದ್ರೆ ಇವ್ರು ಕೆಲಸದಿಂದ ತೆಗೆದುಹಾಕಿದ್ರು. ನನ್ನ ಹೆಂಡ್ತಿಗೆ ಗೊತ್ತಾಗಿ ನನ್ನ ಬಿಟ್ಟು ಅವರ ಅಪ್ಪನ ಮನೆ ಸೇರ್ಕೊಂಡಿದ್ದಾಳೆ. ಕೆಲಸಾನೂ ಇಲ್ಲ, ಹೆಂಡ್ತೀನೂ ಇಲ್ಲ. ಅದಕ್ಕೆ ಡಿಸೈಡ್​ ಮಾಡಿದ್ದೆ. ಕೆಲಸ ಪಡೀಬೇಕು ಇಲ್ಲ, ಇವರ ಕಥೆ ಮುಗಿಸ್ಬೇಕು ಅಂತ. ಅದಕ್ಕೆ ಹೀಗೆ ಮಾಡಿದ್ದೇನೆ.

– ಕಿರಣ್​, ಕೊಲೆ ಆರೋಪಿ

ಆ ರಾತ್ರಿ ನಡೆದಿದ್ದೇನು.? ಕಿರಣ್ ಕೋಪಕ್ಕೆ ಕಾರಣವಾಗಿದ್ದೇನು?

ಒಂದ್ಕಡೆ ಕೆಲಸ ಇಲ್ಲ, ಇನ್ನೊಂದ್ಕಡೆ ಮಾನಸಿಕ ನೆಮ್ಮದಿ ಕೂಡ ಹಾಳಾಗಿತ್ತು. ಇದು ಪ್ರತಿಮಾ ಮೇಲೆ ಕಿರಣ್​ಗೆ ದ್ವೇಷ ಹುಟ್ಟೋದಕ್ಕೆ ಕಾರಣವಾಗಿತ್ತು. ಆದ್ರೂ ಪ್ರತಿಮಾ ಮೇಲೆ ದ್ವೇಷ ಕಾರ್ತಿದ್ದ ಕಿರಣ್​ ಪ್ರತಿಮಾರನ್ನ ಮುಗಿಸಲೇಬೇಕು ಅಂತ ಬಂದಿರಲಿಲ್ಲ. ಪ್ರತಿಮಾ ಕಾಲು ಕೈ ಹಿಡಿದು ಹೋದ ಕೆಲಸ ವಾಪಸ್ ಪಡೆಯಬೇಕು ಅಂತ ಬಂದಿದ್ದ. ಅದ್ರಂತೆ ಶನಿವಾರ ರಾತ್ರಿ ಚಾಲಕ ಪ್ರತಿಮಾರನ್ನ ಮನೆಯ ಬಳಿ ಡ್ರಾಪ್ ಮಾಡಿ ಹೋಗ್ತಿದ್ದಂತೆ ಕಿರಣ್ ಮನೆಯೊಳಗೆ ನುಗ್ಗಿದ್ದ.

ರಾತ್ರಿ ಮನೆಗೆ ನುಗ್ಗಿದ್ದ ಕಿರಣ್​ ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವಂತೆ ಪ್ರತಿಮಾ ಕಾಲಿಡಿದು ಮನವಿ ಮಾಡಿದ್ದಾನೆ. ಆದ್ರೆ ಈ ವೇಳೆ ಪ್ರತಿಮಾ ಕಾಲಿನಿಂದ ಕಿರಣ್​ಗೆ ಒದ್ದಿದಾರಂತೆ. ಆಗ ಕಿರಣ್ ಕೋಪ ಜಾಸ್ತಿಯಾಗಿದೆ. ಈ ಕೋಪಕ್ಕೆ ಪ್ರತಿಮಾ ಪ್ರಾಣ ಬಲಿಯಾಗಿದೆ.

ಪ್ರತಿಮಾ ಮಾಡಿದ ಆ ತಪ್ಪೇನು?

  • ಸಣ್ಣ ಪುಟ್ಟ ತಪ್ಪುಗಳಿಗೆ ಬಾಯಿಗೆ ಬಂದ ಹಾಗೆ ಬೈತಿದ್ರಂತೆ
  • ಸಣ್ಣ ಆ್ಯಕ್ಸಿಡೆಂಟ್​ನ್ನೇ ದೊಡ್ಡದು ಮಾಡಿ ಕೆಲಸದಿಂದ ತೆಗೆದಿದ್ರು
  • ಕೆಲಸ ಇಲ್ಲದೆ ಕಿರಣ್​ ಕುಟುಂಬದಲ್ಲಿದ್ದ ಸಂತೋಷ ಮರೆಯಾಗಿತ್ತು
  • ಈ ವಿಚಾರಕ್ಕೆ ಗರ್ಭಿಣಿಯಾಗಿದ್ದ ಕಿರಣ್ ಪತ್ನಿ ಮನೆ ಬಿಟ್ಟು ಹೋಗಿದ್ಲು
  • ಹೀಗಾಗಿ ಮೃತ ಪ್ರತಿಮಾ ಕಾಲಿಡಿದು ಕೆಲಸಕ್ಕೆ ಮನೆ ಬಳಿ ಹೋಗಿದ್ದ
  • ಸುರಿಯುವ ಮಳೆಯನ್ನು ಲೆಕ್ಕಿಸದೇ ಪ್ರತಿಮಾ ಮನೆ ಬಳಿ ಹೋಗಿದ್ದ
  • ಪ್ರತಿಮಾ ಬರುತ್ತಿದ್ದಂತೆ ಮತ್ತೆ ಸೇರಿಸಿಕೊಳ್ಳುವಂತೆ ಕಾಲುಹಿಡಿದು ಮನವಿ
  • ಮನವಿಯನ್ನು ತಿರಸ್ಕರಿಸಿ ಕಿರಣ್​ನನ್ನ ಕಾಲಿನಿಂದ ಒದ್ದಿದ್ದ ಪ್ರತಿಮಾ
  • ಯಾವಾಗ ಕಾಲಿನಿಂದ ಒದ್ದಳೋ ಕಿರಣ್ ಕೋಪ ಜಾಸ್ತಿಯಾಗಿತ್ತು
  • ಪ್ರತಿಮಾ ಧರಿಸಿದ್ದ ವೇಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ
  • ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಭೀಕರವಾಗಿ ಹತ್ಯೆಗೈದಿದ್ದಾನೆ
  • ನಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಆರೋಪಿ ಕಿರಣ್​

ಪ್ರತಿಮಾ ಕಾಲಿನಿಂದ ಒದ್ದಿರೋದಕ್ಕೆ ನಾನು ಕೊಲೆ ಮಾಡಿರೋದು ಅಂತ ಕಿರಣ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ. ಕೆಲವೊಂದು ಸಾರಿ ಮನುಷ್ಯ ಪರಿಸ್ಥಿತಿ ಕೈಗೊಂಬೆಯಾದಗ ಏನ್ ಮಾಡ್ತಾನೋ ಅನ್ನೋದನ್ನ ಹೇಳೋದಿಕ್ಕ ಆಗಲ್ಲ. ಈ ಸ್ಟೋರಿಯಲ್ಲೂ ಕೋಪದ ಕೈಗೆ ಬುದ್ದಿ ಕೊಟ್ಟಿರುವ ಕಿರಣ್ ಒಂದು ಜೀವವನ್ನೆ ಬಲಿ ಪಡೆದಿದ್ದಾನೆ. ಆದ್ರೀಗ ಮಾಡಿದ ತಪ್ಪಿಗೆ ಜೈಲು ಸೇರಿ ಜೀವನ ಪರ್ಯಾಂತ ಪಶ್ಚಾತ್ತಾಪ ಪಡುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಿಮಾ ಕೊಲೆ ಕೇಸ್​; ಕಾಲಿಂದ ಒದೆಯದೇ ಇದ್ದಿದ್ರೆ ಕೊಲೆ ಮಾಡ್ತಿರಲಿಲ್ಲ.. ಪೊಲೀಸರ ಮುಂದೆ ಆರೋಪಿ ಬಾಯ್ಬಿಟ್ಟಿದ್ದು ಏನೇನು?

https://newsfirstlive.com/wp-content/uploads/2023/11/Pratima-Murder-Case.jpg

Load More