newsfirstkannada.com

ಸರ್ಕಾರಕ್ಕೆ ಹೊಸ ಬೇಡಿಕೆಯಿಟ್ಟ ಅನುದಾನಿತ ಸರ್ಕಾರಿ ಶಾಲೆ.. ಗ್ರೀನ್ ಸಿಗ್ನಲ್ ಕೊಡ್ತಾರಾ ಸಿದ್ದರಾಮಯ್ಯ..?

Share :

13-07-2023

    ಕಾಂಗ್ರೆಸ್​ ಸರ್ಕಾರದ ಮಹತ್ವದ ಯೋಜನೆ ಗೃಹ ಜ್ಯೋತಿ..!

    2೦೦ ಯೂನಿಟ್ ಫ್ರೀ ವಿದ್ಯುತ್‌ ಘೋಷಣೆ ಬೆನ್ನಲ್ಲೇ ಮತ್ತೊಂದು ಬೇಡಿಕೆ

    ಅನುದಾನಿತ ಖಾಸಗಿ ಶಾಲೆಗಳಿಂದ ರಾಜ್ಯ ಸರ್ಕಾರಕ್ಕೆ ಹೊಸ ಮನವಿ

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಗೃಹ ಜ್ಯೋತಿ.. ಆದರೆ ಈ ಗ್ಯಾರಂಟಿ ಭಾಗ್ಯಗಳು ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಕೇವಲ ಗೃಹ ಬಳಕೆಗೆ ಮಾತ್ರ 200 ಯೂನಿಟ್​​ವರೆಗೂ ಫ್ರೀ ಘೋಷಣೆ ಮಾಡಿದ್ದ ಸರ್ಕಾರಕ್ಕೆ ಹೊಸ ಮನವಿಯೊಂದು ಬಂದಿದೆ. ಅದುವೇ ಸರ್ಕಾರಿ ಶಾಲೆಗಳಿಂದ.

ಸರ್ಕಾರ ಮನೆ ಮನೆಗಳಿಗೂ 200 ಯೂನಿಟ್ ಉಚಿತ್ ವಿದ್ಯುತ್ ಭಾಗ್ಯ ಘೋಷಣೆ ಮಾಡಿದೆ. ಇದರ ಲಾಭವನ್ನ ರಾಜ್ಯದ ಕೋಟ್ಯಾಂತರ ಜನರು ಪಡೆಯಲು ಮುಂದಾಗಿದ್ದಾರೆ. ಈ ನಡುವೆ ರಾಜ್ಯದ ಸರ್ಕಾರ ಹಾಗೂ ಅನುದಾನಿತ ಖಾಸಗಿ ಶಾಲೆಗಳು ಹೊಸ ಮನವಿಯನ್ನ ಸರ್ಕಾರಕ್ಕೆ ಮಾಡಿದ್ದಾರೆ. ಸದ್ಯ ಶಾಲೆಗಳಿಗೆ ಬರುತ್ತಿರೋ ಕರೆಂಟ್ ಬಿಲ್ ಹಾಗೂ ವಾಟರ್ ಬಿಲ್ ಕಟ್ಟಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಇದೆ. ಬೆಂಗಳೂರಿನ ಸಿಟಿಯಲ್ಲಿ ಎರಡರಿಂದ ಮೂರು ಸಾವಿರದವರೆಗೂ ಕರೆಂಟ್ ಬಿಲ್ ಬರುತ್ತೆ.

ಜೊತೆಗೆ ವಾಟರ್ ಬಿಲ್ ಕೂಡಾ ಸಾಕಷ್ಟು ಹೊರೆಯಾಗ್ತಿದೆ. ಸರ್ಕಾರಿ ಶಾಲೆಗಳಿಗೆ ನೀಡುವ ಅಭಿವೃದ್ಧಿ ನಿರ್ವಹಣೆಯ ಅನುದಾನ ಯಾವುದಕ್ಕೂ ಸಾಕಾಗೋದಿಲ್ಲ. ಹೀಗಾಗಿ ಗೃಹ ಜ್ಯೊತಿ ಯೋಜನೆಯನ್ನು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೂ ವಿಸ್ತರಿಸುವಂತೆ ಡಿಮ್ಯಾಂಡ್ ಮಾಡುತ್ತಿವೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಲೆಗಳಿಗೆ ಎಷ್ಟು ವಿದ್ಯುತ್ ಬಿಲ್ ಬರ್ತಿದೆ? ಎಷ್ಟು ಕೋಟಿ ಬೇಕಿದೆ ಈ ಎಲ್ಲ ಮಾಹಿತಿ ಪಡೆದು ಸಿಎಂ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಹೊಸ ಗ್ಯಾರಂಟಿಗಳ ಆರ್ಥಿಕ ಹಣ ಕ್ರೂಢೀಕರಣದ ತಲೆ ಬಿಸಿ ಒಂದು ಕಡೆಯಾದರೆ, ಇತ್ತ ಉಚಿತ ಭಾಗ್ಯಗಳ ಜಾರಿ ಬಗ್ಗೆ ಟೆನ್ಷನ್ ಇದೆ. ಇದರ ನಡುವೆ ಈಗ ಶಾಲೆಗಳಿಗೂ ಉಚಿತ್ ಕರೆಂಟ್ ಭಾಗ್ಯ ವಿಸ್ತರಣೆಯ ಡಿಮ್ಯಾಂಡ್ ಕೇಳಿ ಬಂದಿದ್ದು, ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಕ್ಕೆ ಹೊಸ ಬೇಡಿಕೆಯಿಟ್ಟ ಅನುದಾನಿತ ಸರ್ಕಾರಿ ಶಾಲೆ.. ಗ್ರೀನ್ ಸಿಗ್ನಲ್ ಕೊಡ್ತಾರಾ ಸಿದ್ದರಾಮಯ್ಯ..?

https://newsfirstlive.com/wp-content/uploads/2023/07/SIDDU-1.jpg

Load More