ಕುಡಿದು ಶಾಲೆಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕ
ನಶೆಯಲ್ಲಿ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ ಶಿಕ್ಷಕ
ಮದ್ಯದ ಅಮಲಿನಲ್ಲಿದ್ದ ಶಿಕ್ಷಕನ ದೃಶ್ಯ ಸೆರೆ ಹಿಡಿದ ಸ್ಥಳೀಯರು
ಶಿಕ್ಷರನ್ನು ಗುರುಭ್ಯೋ ನಮಃ ಎಂದು ಕರೆಯುತ್ತಾರೆ. ವಿದ್ಯೆ ಕಲಿಸುವ ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕ ಅವತಾರ ಕಂಡಾಗ ಮಾತ್ರ ಅಚ್ಚರಿಯಾಗೋದರಲ್ಲಿ ಅನುಮಾವಿಲ್ಲ. ಯಾಕಂದ್ರೆ ಶಿಕ್ಷಕ ಶಾಲೆಗೆ ಮದ್ಯಸೇವನೆ ಮಾಡಿ ಬಂದಿದ್ದು, ಬಳಿಕ ಪ್ರಜ್ನಾಹೀನ ಸ್ಥಿತಿಯಲ್ಲಿ ಮಲಗಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಉತ್ತರ ಪ್ರದೇಶದ ಹಮ್ರಿಪುರ್ ಜಿಲ್ಲೆಯಲ್ಲಿ ನಡೆದ ಘಟನೆ ಇದಾಗಿದೆ. ಶಿಕ್ಷಕ ಕುಡಿದು ಶಾಲೆಗೆ ಬಂದಿರುವುದನ್ನು ಕಂಡ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ. ಬಳಿಕ ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಬಳಿಕ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ದೃಶ್ಯ ಭಾರೀ ವೈರಲ್ ಆಗಿದೆ.
ಅಂದಹಾಗೆಯೇ ಈ ಶಿಕ್ಷಕ ಶಾಲೆಗೆ ಕುಡಿದು ಬಂದಿರುವುದು ಇದೇ ಮೊದಲಲ್ಲ. ಹಲವಾರು ಬಾರಿ ಕುಡಿದು ಬಂದಿದ್ದಾನೆ. ಆದರೆ ಸ್ಥಳೀಯರು ಮೊಬೈಲ್ ಕ್ಯಾಮೆರಾ ದೃಶ್ಯದಿಂದಾಗಿ ಶಿಕ್ಷಕನ ಅವತಾರ ಬಟಾಬಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ