newsfirstkannada.com

50ಕ್ಕೂ ಹೆಚ್ಚು ವಿದ್ಯಾರ್ಥಿಯರ ಮೇಲೆ ಲೈಂಗಿಕ ಕಿರುಕುಳ; ಕಾಮುಕ ಶಿಕ್ಷಕನ ಮುಖವಾಡ ಬಯಲಾದಂತೆ ಎಸ್ಕೇಪ್​

Share :

05-11-2023

    ಸರ್ಕಾರಿ ಶಾಲಾ ಶಿಕ್ಷಕನ ಮೇಲೆ ಲೈಂಗಿಕ ಕಿರುಕುಳ ಆರೋಪ

    ದೂರು ನೀಡಿದರು ವಿಳಂಬ ನೀತಿ ಅನುಸರಿಸಿದ ಪೊಲೀಸರು

    55 ವರ್ಷದ ಶಿಕ್ಷಕನ ಮೇಲೆ ದಾಖಲಾಯ್ತು 60 ಲಿಖಿತ ದೂರುಗಳು

ಚಂಡೀಗಢ: ಸರ್ಕಾರಿ ಶಾಲಾ ಶಿಕ್ಷಕನೊಬ್ಬ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪ ಹರಿಯಾಣ ರಾಜ್ಯದ ಜಿಂದ್​ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಕೇಳಿಬಂದಿದೆ.

ಶಿಕ್ಷಕನ ಕೆಟ್ಟ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಸೆಪ್ಟೆಂಬರ್​ 14ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ದೂರಿನ ಬಗ್ಗೆ ವಿಳಂಬ ನೀತಿ ಅನುಸರಿಸಿದ್ದು, ಅಕ್ಟೋಬರ್​ 30ರಂದು ಕ್ರಮ ತೆಗೆದುಕೊಂಡಿದೆ ಎಂದು ಮಹಿಳಾ ಆಯೋಗ ಆರೋಪಿಸಿದೆ.

ಪ್ರಕರಣ ಮುನ್ನೆಲೆಗೆ ಬಂದಂತೆ ಆಡಳಿತ ಮಂಡಳಿ ಶಿಕ್ಷಕನನ್ನು ಅಮಾನತು ಮಾಡಿದೆ. ಬಳಿಕ ಹರಿಯಾಣ ಪೊಲೀಸರು ಶಿಕ್ಷಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ 55 ವರ್ಷದ ಶಿಕ್ಷಕ ಮಾತ್ರ ಪೊಲೀಸರಿಗೆ ಸಿಕ್ಕದೆ ತಪ್ಪಿಸಿಕೊಂಡಿದ್ದಾನೆ. ಇನ್ನು ಆರೋಪಿಯನ್ನು ಬಂಧಿಸಲು ಪೊಲೀಸರು ತಂಡ ರಚಿಸಿದ್ದಾರೆ.

ಶಿಕ್ಷಕನ ವಿರುದ್ಧ ಸುಮಾರು 60 ಲಿಖಿತ ದೂರುಗಳನ್ನು ನೀಡಲಾಗಿದೆ. ಆ ಪೈಕಿ 50 ದೂರುಗಳಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಬರೆದುಕೊಂಡಿದ್ದಾರೆ. ಆರೋಪಿ ತಮ್ಮನ್ನು ಕಚೇರಿಗೆ ಕರೆಸಿಕೊಂಡು ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಇನ್ನು ಶಿಕ್ಷಕನ ವಿರುದ್ಧ ಸೆಕ್ಷನ್​ 354-ಎ, 341 ಮತ್ತು 342, ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್​ 27ರಂದು ಶಿಕ್ಷಕನನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

50ಕ್ಕೂ ಹೆಚ್ಚು ವಿದ್ಯಾರ್ಥಿಯರ ಮೇಲೆ ಲೈಂಗಿಕ ಕಿರುಕುಳ; ಕಾಮುಕ ಶಿಕ್ಷಕನ ಮುಖವಾಡ ಬಯಲಾದಂತೆ ಎಸ್ಕೇಪ್​

https://newsfirstlive.com/wp-content/uploads/2023/11/Girl.jpg

Load More