INDIA ಕೂಟದಿಂದಲೂ ಇಂದು ಕೌಂಟರ್ ಸಭೆ
JDS ವರಿಷ್ಠ ದೇವೇಗೌಡರಿಂದಲೂ ದಿಢೀರ್ ಸುದ್ದಿಗೋಷ್ಟಿ
ರಾಜಕೀಯ ಬೆಳವಣಿಗೆಗಳ ಪ್ರಮುಖ 3 ಸುದ್ದಿಗಳು
ದೆಹಲಿಯಲ್ಲಿ ಇಂದು ಬಿಜೆಪಿಯು ಸಂಸದೀಯ ಪಕ್ಷದ ಸಭೆ ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸತ್ ಭವನದ ಆವರಣದಲ್ಲಿ ಸಭೆ ನಡೆಯಲಿದೆ. ಮುಂಗಾರು ಸಂಸತ್ ಕಲಾಪವು ಗದ್ದಲ ಕೋಲಾಹಲದಲ್ಲೇ ಹಾಳಾಗುತ್ತಿದೆ. ಹೀಗಾಗಿ ಬಿಜೆಪಿಯ ಮುಂದಿನ ರಣತಂತ್ರದ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಮಣಿಪುರದ ವಿಚಾರದಲ್ಲಿ ಮೋದಿ ಉತ್ತರ ನೀಡುವಂತೆ ವಿಪಕ್ಷಗಳು ಪಟ್ಟು ಹಿಡಿದು ಕೂತಿವೆ.
ವಿರೋಧ ಪಕ್ಷಗಳಿಂದ ಕೌಂಟರ್ ಸಭೆ
ಇತ್ತ ವಿಪಕ್ಷಗಳ ‘ಇಂಡಿಯಾ’ ಕೂಟದಿಂದಲೂ ಸಭೆ ಆಯೋಜನೆಗೊಂಡಿದೆ. ಸರ್ಕಾರವನ್ನು ಸಂಸತ್ ಅಧಿವೇಶನದಲ್ಲಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಂಬಂಧ ಚರ್ಚೆ ನಡೆಸಲಿವೆ. ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ 10 ಗಂಟೆಗೆ ಸಭೆ ಇದೆ. ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಲಿದೆ. ಮಾತ್ರವಲ್ಲ, ನಿನ್ನೆ ರಾಜ್ಯಸಭಾ ಸದಸ್ಯ ಸ್ಥಾನದಿಂದ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ರನ್ನು ಅಮಾನತು ಮಾಡಲಾಗಿದೆ. ಈ ವಿಚಾರದ ಬಗ್ಗೆಯೂ ಕಲಾಪದಲ್ಲಿ ಹೋರಾಟ ಮಾಡಲು ವಿಪಕ್ಷಗಳು ನಿರ್ಧರಿಸಿವೆ.
ದೇವೇಗೌಡರಿಂದ ಸುದ್ದಿಗೋಷ್ಟಿ
ಮತ್ತೊಂದು ಕಡೆ ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ದಿಢೀರ್ ಸುದ್ದಿಗೋಷ್ಟಿ ಕರೆದಿದ್ದಾರೆ. ಪ್ರಸ್ತುತ ರಾಜಕೀಯ ವಿದ್ಯಮಾನ, ಎನ್ಡಿಎ ಮೈತ್ರಿ ಗೊಂದಲದ ಬಗ್ಗೆ ಇವತ್ತು ದೇವೇಗೌಡರು ತೆರೆ ಎಳೆಯುವ ಸಾಧ್ಯತೆ ಇದೆ. ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ಈ ಎಲ್ಲಾ ಚರ್ಚೆಗಳಿಗೆ ದೇವೇಗೌಡರು ಇವತ್ತು ಉತ್ತರ ಕೊಡುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ