newsfirstkannada.com

ಚೈತ್ರಾ ಕುಂದಾಪುರ ವಿರುದ್ಧ ಪ್ರಧಾನಿ ಮೋದಿ​​ಗೆ ಹೋಗಿತ್ತು ದೂರು; ಕಂಪ್ಲೆಂಟ್​ನಲ್ಲಿ ಏನಿದೆ ಗೊತ್ತಾ..?

Share :

14-09-2023

  ಸೆಪ್ಟೆಂಬರ್ 2, 2023ರಂದು ಮೋದಿಗೆ ಪತ್ರ

  ಮೋಹನ್ ಭಾಗವತ್, ಅಮಿತ್​ ಶಾಗೂ ದೂರು

  ದೂರಿನಲ್ಲಿ ಏನೆಲ್ಲ ಆರೋಪಿಸಿದ್ದಾರೆ ಗೊತ್ತಾ..?

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಉದ್ಯಮಿಯೊಬ್ಬರಿಗೆ ಟಿಕೆಟ್​ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ವಂಚಿಸಿದ ಆರೋಪದ ಮೇಲೆ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನಕ್ಕೆ ಒಳಗಾಗಿದ್ದಾರೆ.

ಮೋಸ ಹೋಗಿದ್ದಾರೆ ಎನ್ನಲಾಗಿರುವ ಗೋವಿಂದ ಪೂಜಾರಿ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 2, 2023ರಂದು ಮೋದಿಗೆ ದೂರು ನೀಡಿದ್ದರು. ಪ್ರಧಾನಿ ಜೊತೆಗೆ ಇತರೆ ಪ್ರಮುಖ ನಾಯಕರಿಗೂ ಗೋವಿಂದ ಪೂಜಾರಿ ದೂರು ನೀಡಿದ್ದರು.

ಯಾಱರಿಗೆ ದೂರು?

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್, ಆರ್​ಎಸ್​ಎಸ್​ ಪ್ರಮುಖ ನಾಯಕ ದತ್ತಾತ್ರೇಯ ಹೊಸಬಾಳೆ, ಆರ್​ಎಸ್​ಎಸ್​ ಪ್ರಮುಖ ನಾಯಕ ರಾಜೇಶ್ ಜಿ.ಬಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದರು.

ದೂರಿನಲ್ಲಿ ಏನಿದೆ?

ನಾನು ಹರಲೂರಲ್ಲಿ ವಾಸವಾಗಿದ್ದು, ಎನ್​ಜಿಒ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ. ಶೈಕ್ಷಣಿಕ, ಕ್ರೀಡೆ, ಆರೋಗ್ಯ, ಆಹಾರ ಉದ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಿದ್ದೇನೆ. ಕ್ಷೇತ್ರದ ಜನರಿಗೆ ಕುಡಿಯೋ ನೀರು ಸೌಲಭ್ಯ, ಕಳವೆ ಬಾವಿ ಮಾಡಿಸಿಕೊಟ್ಟಿದ್ದೇನೆ. ನಿರಾಶ್ರಿತರಿಗೆ ಅನೇಕ ಮನೆಗಳನ್ನ ನಿರ್ಮಿಸಿ ಕೊಟ್ಟಿದ್ದು, ವಿವಿಧ ರೀತಿ ಸಹಾಯ ಮಾಡುತ್ತಿದ್ದೇನೆ.

ಜೊತೆಗೆ ಬಿಜೆಪಿಯ ಸಂಘಟನಾತ್ಮಕ ಕೆಲಸಗಳಿಗೆ ಪಕ್ಷದ ಖರ್ಚು, ವೆಚ್ಚ ಭರಿಸಿದ್ದೇನೆ. ಹಿಂದಿನ ಚುನಾವಣೆಯಲ್ಲೂ ಬಿಜೆಪಿ ಪಕ್ಷದ ಪರವಾಗಿ ನಾನು ಕೆಲಸ ಮಾಡಿದ್ದೇನೆ. ಆರ್​ಎಸ್​ಎಸ್​ ವಿಚಾರಗಳಿಂದ ಪ್ರಭಾವಿತನಾಗಿ ಐಟಿಸಿ ತರಬೇತಿಗೆ ಹಾಜರಾಗಿದ್ದೆ. ಅಂದನಿಂದಲೂ ಸಂಘ ಪರಿವಾರದ ಚಟುವಟಿಕೆ, ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸಕ್ರಿಯವಾಗಿದ್ದೇನೆ. ಸ್ಥಳೀಯ ಬಿಜೆಪಿ ಕಾರ್ಯಕರ್ತ ಪ್ರಸಾದ್ ಬೈಂದೂರು ಸಂಪರ್ಕದಲ್ಲೂ ನಾನು ಇದ್ದೆ. ನನ್ನ ಕಾರ್ಯ ನೋಡಿದ ಪ್ರಸಾದ್, ಚೈತ್ರಾ ಕುಂದಾಪುರರನ್ನ ನನಗೆ ಪರಿಚಯಿಸಿದ್ರು.

ಆರ್​ಎಸ್​ಎಸ್​ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ತುಂಬಾ ಕ್ಲೋಸ್ ಇದ್ದೇನೆ ಎಂದು ನಂಬಿಸಿದ್ರು. ದುರುದ್ದೇಶ, ರಾಜಕೀಯ ಮೈಲೇಜ್ ಪಡೆಯಲು ನನ್ನಲ್ಲಿ ರಾಜಕೀಯ ಬೀಜ ಬಿತ್ತಿದ್ದರು. 2023ರ ವಿಧಾನಸಭೆ ಎಲೆಕ್ಷನ್​ನಲ್ಲಿ ಬೈಂದೂರಿನಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ರು. ಎಂಎಲ್​ಎ, ಮಿನಿಸ್ಟರ್ ಆಗಬಹುದು. ಫೇಸ್ ವ್ಯಾಲ್ಯೂ ಜೊತೆ ಹಣವೂ ಬೇಕು ಅಂದ್ರು. 04-07-2022ರಂದು ಚಿಕ್ಕಮಗಳೂರು ಸರ್ಕಾರಿ ಅತಿಥಿ ಗೃಹದಲ್ಲಿ ಗಗನ್ ಕಡೂರು ಪರಿಚಯಿಸಿದ್ರು. ಪ್ರಧಾನಿ, ಗೃಹ ಸಚಿವಾಲಯ ಅಧಿಕಾರಿಗಳಿಗೆ ತುಂಬಾ ಹತ್ತಿರ ಎಂದು ಹೇಳಿದ್ದರು. ಅದೇ ದಿನ ವಿಶ್ವನಾಥ್ ಜೀ ಎನ್ನುವವರು, RSS ಪ್ರಚಾರಕ ಅಂತಲೂ ಪರಿಚಯಿಸಿದರು. ಈಗ ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯ ಸದಸ್ಯ ಮತ್ತು ಸಂಯೋಜಕರು ಅಂದಿದ್ದರು. ಪಕ್ಷದಲ್ಲಿ ಟಿಕೆಟ್ ಬೇಕಂದ್ರೆ ಹಣ ಬೇಕೆಂದು ಒತ್ತಡ ಹೇರಿ 50 ಲಕ್ಷ ಗಗನ್​ಗೆ ಕೊಡಲು ಹೇಳಿದ್ದರು. ಎಲ್ಲಾ ಆರೋಪಗಳಿಗೆ ನನ್ನ ಬಳಿ ಅಗತ್ಯ ದಾಖಲೆಗಳಿವೆ, ನನ್ನ ಕರೆಸಿದರೆ ಒದಗಿಸ್ತೇನೆ.

2024ರ ಲೋಕಸಭೆ ಚುನಾವಣೆಯ ಬಗ್ಗೆ ನಾಯಕರು ಮುನ್ನೆಚ್ಚರಿಕೆಯನ್ನ ವಹಿಸಿ ವಂಚನೆ ಮಾಡಿ ನನ್ನಿಂದ ಪಡೆದ ಹಣದ ತನಿಖೆ ಮಾಡಿ, ವಸೂಲಿ ಮಾಡಿ ಕೊಡಿಸಿ. ಪಕ್ಷದ ಹೆಸರನ್ನ ಬಳಸಿ ಫ್ರಾಡ್ ಮಾಡಿದ್ದು, ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ವಿರುದ್ಧ ಪ್ರಧಾನಿ ಮೋದಿ​​ಗೆ ಹೋಗಿತ್ತು ದೂರು; ಕಂಪ್ಲೆಂಟ್​ನಲ್ಲಿ ಏನಿದೆ ಗೊತ್ತಾ..?

https://newsfirstlive.com/wp-content/uploads/2023/09/MODI-10.jpg

Load More