ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿದೆ ಟ್ರಾಫಿಕ್ ಸಮಸ್ಯೆ
ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಹೊಸ ಪ್ಲಾನ್
ಸಂಚಾರ ದಟ್ಟಣೆ ನಿವಾರಣೆಗೆ ಐಡಿಯಾ ಕೊಟ್ಟೋರಿಗೆ ಗಿಫ್ಟ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಬೆಂಬಿಡದೆ ಕಾಡುತ್ತಿರೋ ಸಮಸ್ಯೆ ಎಂದರೆ ಟ್ರಾಫಿಕ್. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಸರ್ಕಾರದ ಎಲ್ಲಾ ಕ್ರಮಗಳು ಕೇವಲ ತಾತ್ಕಲಿಕ ಪರಿಹಾರ.
ನಗರದ ಮೈಸೂರು ರೋಡ್, ಎಲೆಕ್ಟ್ರಾನಿಕ್ ಸಿಟಿ, ಮಹದೇವ ಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ವರ್ತೂರು, ಸಿಲ್ಕ್ ಬೋರ್ಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿತ್ಯ ಭಾರೀ ಟ್ರಾಫಿಕ್ ಜಾಮ್ ಆಗುತ್ತದೆ. ಇದೇ ಕಾರಣಕ್ಕೆ ಬೆಂಗಳೂರು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಸುದ್ದಿಯಾಗಿದೆ.
ಸದ್ಯ ಈ ಟ್ರಾಫಿಕ್ ಎಂಬ ಭೂತಕ್ಕೆ ಶಾಶ್ವತ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಒಂದು ಹಾಕಿದೆ. ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕೊಡಿ, ಪೊಲೀಸರ ಜತೆ ಕಾಫಿ ಕುಡಿಯಿರಿ ಎಂಬ ಹೊಸ ಕ್ಯಾಂಪೇನ್ ಬೆಂಗಳೂರು ಟ್ರಾಫಿಕ್ ಪೊಲೀಸ್ರು ಶುರು ಮಾಡಿದ್ದಾರೆ.
ಟ್ರಾಫಿಕ್ ಪೊಲೀಸರಿಂದ ವಿಭಿನ್ನ ಕ್ಯಾಂಪೇನ್
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ರು ಶುರು ಮಾಡಿರೋ ಈ ಕ್ಯಾಂಪೇನ್ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಜನ ಕೂಡ ಸಖತ್ ಹ್ಯೂಮರಸ್ ಆಗಿ ಉತ್ತರ ಕೊಡುತ್ತಿದ್ದಾರೆ.
ರಾಜಧಾನಿ ಬೆಂಗಳೂರು ಟ್ರಾಫಿಕ್ಗೆ ಕಾರಣವೇನು? ಈ ಸಮಸ್ಯೆಗೆ ಪರಿಹಾರವೇನು? ಎಂದು ಪೊಲೀಸ್ರು ಪ್ರಶ್ನೆ ಕೇಳಿದ್ದು, ಸರಿಯಾದ ಉತ್ತರ ಕೊಟ್ಟವರಿಗೆ ರಾಜಾತಿಥ್ಯ ಆಫರ್ ಕೊಡಲಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಕೇಳಿದ ಪ್ರಶ್ನೆಗೆ ನೆಟ್ಟಿಗರು ವೆರೈಟಿ ವೆರೈಟಿ ಆನ್ಸರ್ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ