ಟೀಂ ಇಂಡಿಯಾ ಕೋಚ್ಗೆ ಸಲಹೆ ಕೊಟ್ಟ ಕ್ರಿಕೆಟ್ ದಿಗ್ಗಜ
ಭಾರತ ತಂಡದ ಕೋಚ್ ಆಗುವುದೇ ದೊಡ್ಡ ಜವಾಬ್ದಾರಿ
ರಾಹುಲ್ ದ್ರಾವಿಡ್ ಮುಂದೆ ದೊಡ್ಡ ಸವಾಲಿದೆ ಎಂದ ಸ್ಮಿತ್
ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ ಸೋತಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಜತೆಗೆ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೋಚಿಂಗ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ದ್ರಾವಿಡ್ ಬೆಂಬಲಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಗ್ರೇಮ್ ಸ್ಮಿತ್ ನಿಂತಿದ್ದಾರೆ.
ಈ ಸಂಬಂಧ ಮಾತಾಡಿದ ಗ್ರೇಮ್ ಸ್ಮಿತ್, ಯಾರಾದರೂ ಭಾರತ ಕ್ರಿಕೆಟ್ ತಂಡದ ಲೀಡರ್ಶಿಪ್ ಜವಾಬ್ದಾರಿ ತೆಗೆದುಕೊಂಡಾಗ ಭಾರೀ ನಿರೀಕ್ಷೆ ಇರುತ್ತದೆ. ಇದಕ್ಕೆ ಕಾರಣ ಟೀಂ ಇಂಡಿಯಾದಲ್ಲಿ ಹೆಚ್ಚು ಕ್ವಾಲಿಟಿ ಪ್ಲೇಯರ್ಸ್ ಇದ್ದಾರೆ. ಕನಿಷ್ಠ ಮೂರು ತಂಡಗಳನ್ನು ಮಾಡುವಷ್ಟ ಆಟಗಾರರನ್ನು ಬಿಸಿಸಿಐ ಹೊಂದಿದೆ. ಹೀಗಾಗಿ ರಾಹುಲ್ ದ್ರಾವಿಡ್ ಮುಂದೆ ಬಹು ದೊಡ್ಡ ಸವಾಲ್ ಇದೆ ಎಂದರು.
ದ್ರಾವಿಡ್, ಸೆಲೆಕ್ಷನ್ ಕಮಿಟಿ ಮುಂದಿರೋ ದೊಡ್ಡ ಸವಾಲ್ ಬ್ಯಾಲೆನ್ಸಿಂಗ್ ಆಗಿ ತಂಡ ಆಯ್ಕೆ ಮಾಡುವುದು. ತಂಡದ ಆಟಗಾರರಿಗೆ ಟೈಮ್ ಕೊಡಬೇಕು, ಪ್ರವಾಸ ವೇಳಾಪಟ್ಟಿಯನ್ನು ಸರಿಯಾಗಿ ಮಾಡಬೇಕು. ಹಾಗಾಗಿ ದ್ರಾವಿಡ್ ಕೆಲವೊಂದು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಹೆಚ್ಚು ಗಮನ ಕೊಡಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ