newsfirstkannada.com

ಇಂದಿನಿಂದ ಗೃಹಜ್ಯೋತಿ ಯೋಜನೆ ಜಾರಿ; ಉಚಿತ ವಿದ್ಯುತ್​ ಬಿಲ್​ ಹೇಗಿರುತ್ತೆ? ಏನೇನಿರುತ್ತೆ? ಇಲ್ಲಿದೆ ಮಾಹಿತಿ

Share :

01-08-2023

    ಇಂಧನ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಪ್ರೆಸ್ ಮೀಟ್

    ರಾಜ್ಯದಲ್ಲಿ ಎರಡುವರೆ ಕೋಟಿ ಗೃಹಜ್ಯೋತಿ ಫಲಾನುಭವಿಗಳು

    ಉಚಿತ ಕರೆಂಟ್ ಬಿಲ್ ಹೇಗಿರುತ್ತೆ? ಅದರಲ್ಲಿ ಏನೇನಿರುತ್ತೆ?

ಇಂದಿನಿಂದ ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಆರಂಭಗೊಂಡಿದ್ದು, ಈ ತಿಂಗಳಲ್ಲಿ ಜುಲೈ ತಿಂಗಳ ಶೂನ್ಯ ಬಿಲ್ ಮನೆ ಬಾಗಿಲಿಗೆ ಬರಲಿದೆ. ಹೀಗಾಗಿ ಅಧಿಕೃತವಾಗಿ ಈ ಯೋಜನೆಗೆ ಚಾಲನೆ ಕೊಡಲು ಇವತ್ತು ಮಹತ್ವದ ಸುದ್ದಿಗೋಷ್ಠಿ ಕರೆಯಲಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ನೇತೃತ್ವದಲ್ಲಿ ಪ್ರೆಸ್ ಮೀಟ್ ನಡೆಯಲಿಕ್ಕಿದೆ.

ಸುದ್ದಿಗೋಷ್ಠಿಯಲ್ಲಿ ಲಾಂಚ್ ದಿನದ ಕಾರ್ಯಕ್ರಮಗಳ ರೂಪು ರೇಷೆ, ಯಾವ್ಯಾವ ರಾಜಕೀಯ ನಾಯಕರ ಉಪಸ್ಥಿತಿ ಮುಂತಾದವುಗಳ ಬಗ್ಗೆ ಇಂಧನ ಸಚಿವರು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಲಿದ್ದಾರೆ.

ರಾಜ್ಯದಲ್ಲಿ ಎರಡುವರೆ ಕೋಟಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಆದರೆ ಬಹುತೇಕ ಮಂದಿ ಗೃಹಜ್ಯೋತಿಗೆ ಅರ್ಜಿ ಸಲ್ಲಿಸದೆ ಸುಮ್ಮನಿದ್ದಾರೆ. ಜುಲೈ 25ರವರೆಗೆ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಮಾತ್ರ ಈ ಶೂನ್ಯ ಬಿಲ್ ಸಿಗಲಿದೆ.

ಜುಲೈ 27 ರವರೆಗೆ ಗೃಹಜ್ಯೋತಿಗೆ 1,23,10,788 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನು 40% ಜನರು ಅರ್ಜಿ ಸಲ್ಲಿಸುವುದಕ್ಕೆ ಬಾಕಿ ಇದ್ದು, ಜುಲೈ 25 ರವರೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮಾತ್ರ ಶೂನ್ಯ ಬಿಲ್ ಸಿಗಲಿದೆ. ಅಂದಹಾಗೆಯೇ ಯಾವ ಫಲಾನುಭವಿಗಳು ಈ ತಿಂಗಳು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ವಿದ್ಯುತ್ ಸಿಗಲಿದೆ.

ಈ ತಿಂಗಳಿಂದ ನಿಮ್ಮ ಮನೆ ತಲುಪಲಿರುವ ಕರೆಂಟ್ ಬಿಲ್ ಹೇಗಿರುತ್ತೆ ಗೊತ್ತಾ.?

ಗೃಹಜ್ಯೋತಿ ಅನುಷ್ಠಾನ ಹಿನ್ನೆಲೆ ಕರೆಂಟ್ ಬಿಲ್ ಬದಲಾವಣೆ ಮಾಡಲಾಗಿದೆ. ಶೂನ್ಯ ಬಿಲ್ ನಲ್ಲಿ ಸಿಎಂ, ಡಿಸಿಎಂ, ಇಂಧನ ಸಚಿವರ ಫೋಟೋ ಮುದ್ರಣವಾಗಿರುತ್ತೆ. ಬಿಲ್ ಹಿಂಬದಿಯಲ್ಲಿ ವಿದ್ಯುತ್ ಬಿಲ್ ಸೂಚನೆಗಳು ನೀಡಲಾಗಿದೆ. ‌ಜೂನ್ ತಿಂಗಳ ಹಾಗೂ ಜುಲೈ ತಿಂಗಳ ಬಿಲ್​ನಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.

ಬಿಲ್ ನಲ್ಲಿ ಗ್ರಾಹಕರ ವಿದ್ಯುತ್ ಬಳಕೆಯ ಮಾಹಿತಿ ಪ್ರಿಂಟ್ ಆಗಿರುತ್ತದೆ. ಎಲ್ಲಾ ಎಸ್ಕಾಂನಲ್ಲಿ ಏಕರೂಪದ ಬಿಲ್ ನೀಡಲು ಇಂಧನ ಇಲಾಖೆ ನಿರ್ಧರಿಸಿದೆ. ಆದರೆ ಆಯಾ ಎಸ್ಕಾಂನ ಯೂನಿಟ್ ಬೆಲೆ, ಹೊಂದಾಣಿಕೆ ವೆಚ್ಚದಲ್ಲಿ ಬದಲಾವಣೆ ಮಾಡಲಾಗುತ್ತದೆ.

ಬಿಲ್ ನಲ್ಲಿ ಏನಿರುತ್ತೆ?

ಬಿಲ್‌ ಮುಂಭಾಗದಲ್ಲಿ ಕರೆಂಟ್ ಬಿಲ್ ಗೃಹಜ್ಯೋತಿ ಯೂನಿಟ್ ಬಗ್ಗೆ ಮಾಹಿತಿ ಕೊಡಲಾಗಿದೆ. ಬಿಲ್ ಪ್ರತಿ ಕಾಲಂ ನಲ್ಲಿ ಸ್ಪಷ್ಟವಾಗಿ ಮಾಹಿತಿ ಜೊತೆಗೆ ಹೆಚ್ಚುವರಿ ಸರಾಸರಿ ಮಾಹಿತಿ ನೀಡಲಾಗಿದೆ. ಇದರೊಂದಿಗೆ ವಿದ್ಯುತ್ ಬಳಕೆ ಯೂನಿಟ್ ಮತ್ತು ಬೆಸ್ಕಾಂ, ನಾಲ್ಕು ಎಸ್ಕಾಂ ಶುಲ್ಕ, ವಿದ್ಯುತ್ ದರದಲ್ಲಿ ವ್ಯತ್ಯಾಸ ಇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ ಗೃಹಜ್ಯೋತಿ ಯೋಜನೆ ಜಾರಿ; ಉಚಿತ ವಿದ್ಯುತ್​ ಬಿಲ್​ ಹೇಗಿರುತ್ತೆ? ಏನೇನಿರುತ್ತೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/08/K-J-George.jpg

Load More