newsfirstkannada.com

ಅಬ್ಬಬ್ಬಾ..! 1 ವರ್ಷದಲ್ಲಿ 38 ಲಕ್ಷ ಮದುವೆ; ಬರೋಬ್ಬರಿ 5 ಲಕ್ಷ ಕೋಟಿ ವಹಿವಾಟು!

Share :

22-11-2023

    ಭಾರತದಲ್ಲಿ ಈ ಬಾರಿ ಅದ್ಧೂರಿಯಾಗಿ ನಡೆಯಲಿವೆ 38 ಲಕ್ಷ ವಿವಾಹಗಳು

    1 ಕೋಟಿ ರೂ. ಒಳಗೆ ಸುಮಾರು 50 ಲಕ್ಷ ಮದುವೆಗಳು ನಡೆಯಲಿವೆಯಾ?

    ದೆಶದಲ್ಲಿ ಮದುವೆ ಸೀಸನ್​ನಲ್ಲೇ ಎಷ್ಟು ಲಕ್ಷ ಕೋಟಿ ರೂ ವ್ಯವಹಾರ ಆಗುತ್ತೆ?

ಭಾರತದಲ್ಲಿ ಮದುವೆ ಸೀಸನ್ ಬಂದರೆ ಅದೆಷ್ಟು ಹಣ ಖರ್ಚು ಆಗುತ್ತೋ ನಿರೀಕ್ಷೆ ಮಾಡೋಕೆ ಆಗಲ್ಲ. ಏಕೆಂದರೆ ಒಂದು ಮದುವೆ ಇಂತಿಷ್ಟೇ ಹಣದಲ್ಲಿ ಆಗುತ್ತೆ ಅಂತ ಅಂದಾಜು ಮಾಡುವುದು ಕಷ್ಟ. ದೊಡ್ಡ ಹಬ್ಬಗಳಾದ ದಸರಾ, ದೀಪಾವಳಿ ಮುಗಿದಿದ್ದು ಇನ್ನೇನಿದ್ದರೂ ಮದುವೆ ಸೀಸನ್ ಆರಂಭವಾಗುತ್ತದೆ. ದೇಶದಲ್ಲಿ ಈ ಬಾರಿ ಒಟ್ಟು 38 ಲಕ್ಷ ವಿವಾಹಗಳು ನಡೆಯಲಿದ್ದು 5 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದಲ್ಲಿ ವ್ಯಾಪಾರ-ವಹಿವಾಟು ನಡೆಯಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಅಂದಾಜಿಸಿದೆ.

ದೇಶದಲ್ಲಿ ಮದುವೆ ಸೀಸನ್ ಬಂದರೆ ಅಷ್ಟೇ.. ಹಬ್ಬದಷ್ಟೇ ವಾತಾವರಣ ಎಲ್ಲೆಡೆ ಕಂಡು ಬರುತ್ತದೆ. ಇದರ ನಡುವೆ ಹಣದ ಮಳೆಯೇ ಹರಿಯುತ್ತದೆ. ಆದರೆ ಇದು ಯಾರಿಗೂ ಗೊತ್ತಾಗುವುದಿಲ್ಲ. ಏಕೆಂದರೆ ಮದುವೆಯೊಳಗಿನ ವ್ಯಾಪಾರ ಗುಟ್ಟು ಗುಟ್ಟಾಗಿಯೆ ಇರುತ್ತದೆ. ಭಾರತದಲ್ಲಿ ಕಳೆದ ವರ್ಷ 32 ಲಕ್ಷ ಮದುವೆಗಳಿಂದ ₹ 3.75 ಲಕ್ಷ ಕೋಟಿ ವ್ಯವಹಾರವಾಗಿತ್ತು. ಈ ಬಾರಿ ಹೆಚ್ಚಿನ ಮಟ್ಟದಲ್ಲಿ ಮದುವೆ ಸಂಬಂಧಿಸಿದ ವಸ್ತುಗಳು ಮಾರಾಟವಾಗಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನವೆಂಬರ್​ 23 ಅಂದರೆ ಇದೇ ಗುರುವಾರದಿಂದ ವಿವಾಹದ ಶುಭಾಕಾರ್ಯಗಳು ಆರಂಭವಾಗಲಿದ್ದು ಡಿ.15ರ ವರಗೆ ಹೆಚ್ಚಿನ ಮದುವೆಗಳು ನಡೆಯಲಿವೆ. 38 ಲಕ್ಷ ಮದುವೆಗಳಿಂದ ಈ ಬಾರಿ ₹4.74 ಲಕ್ಷ ಕೋಟಿಯಷ್ಟು ವ್ಯಾಪಾರ ನಡೆಯಲಿದೆ. ದೆಹಲಿಯೊಂದರಲ್ಲೇ ಸುಮಾರು 4 ಲಕ್ಷಕ್ಕೂ ಹೆಚ್ಚು ಮದುವೆಗಳು ನಡೆಯಲಿದ್ದು ಇಲ್ಲಿ ಅಂದಾಜು ₹1.25 ಲಕ್ಷ ಕೋಟಿ ವ್ಯವಹಾರ ನಡೆಯುತ್ತದೆ ಎಂದು CAIT ಹೇಳುತ್ತದೆ.

ಈ ವರ್ಷ ನಡೆಯುವ ಮದುವೆಗಳು ಈ ಅಮೌಂಟ್​ ಒಳಗೆ ನಡೆಯುತ್ತಾವೆ..!

  • 3 ಲಕ್ಷ ರೂಪಾಯಿ ಒಳಗೆ 7 ಲಕ್ಷ ಮದುವೆಗಳು
  • 6 ಲಕ್ಷ ರೂಪಾಯಿ ಒಳಗೆ 8 ಲಕ್ಷ ಮದುವೆಗಳು
  • 10 ಲಕ್ಷ ರೂಪಾಯಿ ಒಳಗೆ 10 ಲಕ್ಷ ಮದುವೆಗಳು
  • 15 ಲಕ್ಷ ರೂಪಾಯಿ ಒಳಗೆ 7 ಲಕ್ಷ ಮದುವೆಗಳು
  • 25 ಲಕ್ಷ ರೂಪಾಯಿ ಒಳಗೆ 5 ಲಕ್ಷ ಮದುವೆಗಳು
  • 50 ಲಕ್ಷ ರೂಪಾಯಿ ಒಳಗೆ 50 ಸಾವಿರ ಮದುವೆಗಳು
  • 1 ಕೋಟಿ ರೂಪಾಯಿ ಒಳಗೆ 50 ಲಕ್ಷ ಮದುವೆಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಅಬ್ಬಬ್ಬಾ..! 1 ವರ್ಷದಲ್ಲಿ 38 ಲಕ್ಷ ಮದುವೆ; ಬರೋಬ್ಬರಿ 5 ಲಕ್ಷ ಕೋಟಿ ವಹಿವಾಟು!

https://newsfirstlive.com/wp-content/uploads/2023/11/WEDDING_1.jpg

Load More