ವರ್ಲ್ಡ್ವೈಡ್ ಫ್ಯಾನ್ಸ್ ಹೊಂದಿದ್ದಾರೆ ಭಾರತದ ಕ್ರಿಕೆಟರ್ ಕೊಹ್ಲಿ
ವೆಸ್ಟ್ ಇಂಡೀಸ್ ಟೆಸ್ಟ್ ವೇಳೆ ಕೊಹ್ಲಿ ನೋಡಲು ಬಂದ ಫ್ಯಾನ್ಸ್
ಫ್ಯಾನ್ಸ್ ಅಭಿಮಾನಕ್ಕೆ ಸೆಲ್ಫಿ ಕ್ಲಿಕ್ಕಿಸಿ ಸಂತಸ ವ್ಯಕ್ತಪಡಿಸಿದ ವಿರಾಟ್
ಟ್ರಿನಿಡಾಡ್ನಲ್ಲಿ ನಡೀತಾ ಇರೋ ಇಂಡೋ- ವಿಂಡೀಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಖಾಲಿ ಹೋಡಿತಾ ಇದ್ದ ಸ್ಟೇಡಿಯಂ, 2ನೇ ದಿನ ಸ್ಟೇಡಿಯಂ ತುಂಬಿ ಹೋಗಿತ್ತು. ಚಿಕ್ಕ ಮಕ್ಕಳಿಂದ ಹಿರಿ ಜೀವಗಳವರೆಗೆ ಜನ ಸ್ಟ್ಯಾಂಡ್ನಲ್ಲಿ ನೆರೆದಿದ್ದರು. ಇದ್ರ ಹಿಂದಿನ ರೀಸನ್ ವಿರಾಟ್ ಕೊಹ್ಲಿ ಎಂಬ ಮಾಂತ್ರಿಕ.
ಇಂಡೋ-ವಿಂಡೀಸ್ ಸರಣಿಯಲ್ಲಿ ಕೊಹ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಕೊಹ್ಲಿಯನ್ನ ನೋಡಲು, ಕಣ್ತುಂಬಿಕೊಳ್ಳಲು ಫಾನ್ಸ್ ಮುಗಿಬೀಳ್ತಿದ್ದಾರೆ. 2ನೇ ದಿನದಾಟದ ಬಳಿಕ ವಿಂಡೀಸ್ ಕೀಪರ್ ಜೋಶ್ವಾ ಡಿ ಸಿಲ್ವಾ ತಾಯಿ ಕೊಹ್ಲಿಯನ್ನ ಭೇಟಿಯಾಗಿದ್ದು, ತಬ್ಬಿ ಕಣ್ಣೀರಾಕಿದ್ದು ಹೆಚ್ಚು ಸುದ್ದಿಯಾಯ್ತು. ಆದ್ರೆ, ಡಿ ಸಿಲ್ವಾ ತಾಯಿ ಮಾತ್ರವಲ್ಲ. ಕಿಂಗ್ ಕೊಹ್ಲಿಯನ್ನ ನೋಡಲು, ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ಅನ್ನ ಕಣ್ತುಂಬಿಕೊಳ್ಳಲು ದೊಡ್ಡ ಅಭಿಮಾನಿಗಳ ಬಳಗವೇ ಟ್ರಿನಿಡಾಡ್ ಬಂದಿತ್ತು.
2ನೇ ಟೆಸ್ಟ್ನ ಮೊದಲ ದಿನದಾಟದ ಅಂತ್ಯಕ್ಕೆ ಕೊಹ್ಲಿ 87 ರನ್ ಗಳಿಸಿದರು. 2ನೇ ದಿನದಲ್ಲಿ ಕೊಹ್ಲಿ ಸೆಂಚುರಿ ಸಿಡಿಸೋದು ಕನ್ಫರ್ಮ್ ಆಗ್ತಿದ್ದಂತೆ. ಫ್ಯಾನ್ಸ್ ಮೈದಾನಕ್ಕೆ ನುಗ್ಗಿದ್ರು. ಅವರಲ್ಲಿದ್ದು, ಒಂದೇ ಆಸೆ, ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸೋದನ್ನ ಕಣ್ತುಂಬಿಕೊಳ್ಳಬೇಕು ಅನ್ನೋದಷ್ಟೇ ಅವರಲ್ಲಿದ್ದ ಆಸೆ.
ಕಿಂಗ್ ಕೊಹ್ಲಿ ಅಂದ್ರೆ ಎಲ್ಲರಿಗೂ ಇಷ್ಟ..!
ತನ್ನ ಮನಮೋಹಕ ಬ್ಯಾಟಿಂಗ್, ಅದ್ಭುತವಾದ ಫೀಲ್ಡಿಂಗ್, ನಾಯಕತ್ವ, ವ್ಯಕ್ತಿತ್ವದಿಂದ ಇಡೀ ವಿಶ್ವವನ್ನೇ ಕೊಹ್ಲಿ ಮೋಡಿ ಮಾಡಿದ್ದಾರೆ. ಈ ಜನರೇಶನ್ನ ಪುಟ್ಟ ಪುಟ್ಟ ಮಕ್ಕಳಿಗೂ ಕೊಹ್ಲಿ ಅಂದ್ರೆ ಪ್ರೀತಿ.
ವಯಸ್ಸಿನ ಹಂಗಿಲ್ಲ.. ಇದು ಎಲ್ಲವನ್ನೂ ಮೀರಿದ ಬಂಧ.!
ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದ ಹಿರಿ ವಯಸ್ಸಿನ ಜೀವಗಳಿಗೂ ಕೊಹ್ಲಿ ಅಂದ್ರೆ ಪಂಚ ಪ್ರಾಣ. ಆನ್ಫೀಲ್ಡ್ನಲ್ಲಿ ಕಿಂಗ್ ಕೊಹ್ಲಿಯ ಆಟವನ್ನ ನೋಡಿ ಮರುಳಾದವರೆಷ್ಟೋ. ಆಫ್ ದ ಫೀಲ್ಡ್ ವ್ಯಕ್ತಿತ್ವಕ್ಕೆ ಬೆರಗಾದವರೆಷ್ಟೋ. ಆದ್ರೆ, ಈ ಫ್ಯಾನ್ ಕತೆ ಬೇರೆ. ಇವರಿಗೆ ಕಣ್ಣು ಕಾಣಲ್ಲ. ಆದ್ರೆ, ಸಾಮಾನ್ಯ ಕೊಹ್ಲಿ, ಕಿಂಗ್ ಕೊಹ್ಲಿಯಾಗಿ ಬೆಳೆದ ಪರಿಗೆ ಫ್ಯಾನ್ ಆದವರಿವರು.
‘ವಿರಾಟ್ ಕೊಹ್ಲಿ ಒಳ್ಳೆಯವರು. ಕ್ರಿಕೆಟ್ ಬಗ್ಗೆ ಮೊದಲ ಬಾರಿ ತಿಳಿದುಕೊಂಡಾಗ ಅವರು ಉತ್ತಮವಾಗಿ ಆಡ್ತಿದ್ರು. ಆಗ ಅವರ ನಾಯಕನಾಗಿದ್ರು. ಕ್ರಿಕೆಟ್ ಅನ್ನ ಇಷ್ಟಪಡುವುದಕ್ಕೆ ಸ್ಪೂರ್ತಿಯಾದ್ರು. ವಿರಾಟ್ ಕೊಹ್ಲಿ ಐ ಲವ್ ಯೂ’
NEVER GIVE UP ATTITUDE, ಆಟದ ಮೇಲಿನ DEDICATION, PASSION, ಕೊಹ್ಲಿಗೆ ಕೋಟಿ, ಕೋಟಿ ಅಭಿಮಾನಿಗಳನ್ನ ತಂದುಕೊಟ್ಟಿದೆ. ದಿನ ಕಳೆದಂತೆ ಅಭಿಮಾನಿಗಳು ಆರಾಧಕರಾಗ್ತಿದ್ದಾರೆ. ಕೊಹ್ಲಿ ಮತ್ತು ಅಭಿಮಾನಿಗಳದ್ದು ಗಡಿಯೇ ಇಲ್ಲದ ಒಂದು ವಿಶಿಷ್ಟ ಬಂಧ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ