newsfirstkannada.com

ಕಲರ್‌ ಕಲರ್ ಬಟ್ಟೆಗಳು, ಅಕ್ಕಪಕ್ಕ ಚಿಟ್ಟೆಗಳು; ನನ್ನ ಯೌವ್ವನ‌ ಟಪಾಸ್ ಅಂತಾ ಹಾಡಿ ಮೋಡಿ ಮಾಡಿದ ಚಿಕ್ಕಣ್ಣ

Share :

25-06-2023

  ಅಲ್ಲೇ ನೋಡು ಎಡವಟ್ಟಾಯ್ತು. ನಂಗೆ ಎಲ್ಲಾ ನೆಟ್ಟಗಾಯ್ತು!

  ನನ್ನ ಯೌವ್ವನ‌ ಟಪಾಸ್.. ನನ್ನ ಯೌವ್ವನ‌ ಟಪಾಸ್ ಸಾಂಗ್‌

  ಕಾಮಿಡಿ ಕಿಂಗ್ ಚಿಕ್ಕಣ್ಣ ಧ್ವನಿಯಾಗಿರುವ ಟಪಾಸ್ ಹಾಡು

ಕಲರ್‌ ಕಲರ್ ಬಟ್ಟೆಗಳು, ಅಕ್ಕಪಕ್ಕ ಚಿಟ್ಟೆಗಳು.. ಅಲ್ಲೇ ನೋಡು ಎಡವಟ್ಟಾಯ್ತು. ನಂಗೆ ಎಲ್ಲಾ ನೆಟ್ಟಗಾಯ್ತು. ನನ್ನ ಯೌವ್ವನ‌ ಟಪಾಸ್.. ನನ್ನ ಯೌವ್ವನ‌ ಟಪಾಸ್ ಎನ್ನುತ್ತಾ ಹಾಡಿ ಕುಣಿದ ಕಾಮಿಡಿ ಸ್ಟಾರ್ ಚಿಕ್ಕಣ್ಣ ಮೋಡಿ ಮಾಡಲು ರೆಡಿಯಾಗಿದ್ದಾರೆ.
ವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಬೆಂಗಳೂರು ಬಾಯ್ಸ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ಜೂನ್ 30ರಂದು ಚಿಕ್ಕಣ್ಣ ಅಭಿನಯದ ಬೆಂಗಳೂರು ಬಾಯ್ಸ್‌ ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಲಿದೆ. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾದ ಹೊಸ ಹಾಡು ರಿಲೀಸ್ ಆಗಿದೆ.

ಕಾಮಿಡಿ ಕಿಂಗ್ ಚಿಕ್ಕಣ್ಣ ಧ್ವನಿಯಾಗಿರುವ ಟಪಾಸ್ ಹಾಡು ಈಗ ಭಾರೀ ಸದ್ದು ಮಾಡುತ್ತಿದೆ. ಸಾಫ್ಟ್‌ವೇರ್‌ಗಳ ಪಾಡು ವಿವರಿಸುವ ಹಾಡು ಇದಾಗಿದೆ. ಧರ್ಮವಿಷ್ ಸಂಗೀತದ ಈ ಹಾಡಿಗೆ ಅರಸು ಅಂಥರೆ ಸಾಹಿತ್ಯ ಬರೆದಿದ್ದಾರೆ.
ವೇಸ್ಟ್ ಎನಿಸಿಕೊಳ್ಳುವ ಲಾಸ್ಟ್ ಬೆಂಚ್ ಸ್ಟೂಡೆಂಟ್ ಬದುಕಿನಲ್ಲಿ ಸಾಧನೆಯ ಗುರಿಮುಟ್ಟಿದ ಸಾಕಷ್ಟು ಉದಾಹರಣೆಗಳಿವೆ. ಅಂತಹದ್ದೇ ಕಥಾಹಂದರ ಹೊಂದಿರುವ ಸಿನಿಮಾ ಬೆಂಗಳೂರು ಬಾಯ್ಸ್. 90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಾದ ರಣಧೀರ, ಅಂತ , ಓಂ ಹಾಗೂ ಎ ಚಿತ್ರಗಳ ಪಾತ್ರದಲ್ಲಿ ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ, ಚಂದನ್ ಆಚಾರ್, ರೋಹಿತ್ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಗ್ಯ ನಯನ, ವೈನಿಧಿ ಜಗದೀಶ್, ಜಯಶ್ರೀ ಆಚಾರ್ ಹಾಗೂ ಸೋನಿ ನಟಿಸಿದ್ದಾರೆ.

ಕಾಮಿಡಿ ಕಿಂಗ್ ಚಿಕ್ಕಣ ಪ್ರಮುಖ ಪಾತ್ರವೊಂದ್ರಲ್ಲಿ ನಟಿಸಿದ್ದು, ಐಟಿಬಿಟಿ ಉದ್ಯೋಗಿ ಕಾಣಿಸಿಕೊಂಡಿದ್ದಾರೆ. ಉಮೇಶ್, ಪಿಡಿ ಸತೀಶ್, ಮೋಹನ್ ಜೂನೇಜಾ ಸೇರಿದಂತೆ ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಬೆಂಗಳೂರು ಬಾಯ್ಸ್ ಸಿನಿಮಾಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ಗುರುದತ್‌ ಗಾಣಿಗ ಕ್ರಿಯೇಟಿವ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರವಿ ಶ್ರೀರಾಮ್ ಕೋ ಡೈರೆಕ್ಟರ್ ಆಗಿ, ಡಿ ಆರ್ ಶ್ರೀನಿವಾಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿದ್ದಾರೆ. ರಿಜೋ ಪಿ ಜಾನ್ ಛಾಯಾಗ್ರಹಣ, ಧರ್ಮ ವಿಶ್ ಟ್ಯೂನ್ ಹಾಕಿದ್ದಾರೆ. ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್‌ ಕೆ.ವೈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕಲರ್‌ ಕಲರ್ ಬಟ್ಟೆಗಳು, ಅಕ್ಕಪಕ್ಕ ಚಿಟ್ಟೆಗಳು; ನನ್ನ ಯೌವ್ವನ‌ ಟಪಾಸ್ ಅಂತಾ ಹಾಡಿ ಮೋಡಿ ಮಾಡಿದ ಚಿಕ್ಕಣ್ಣ

https://newsfirstlive.com/wp-content/uploads/2023/06/Actor-Chikanna.jpg

Load More