/newsfirstlive-kannada/media/post_attachments/wp-content/uploads/2024/12/STOCK-MARKET.jpg)
ಇತ್ತೀಚಿನ ದಿನಗಳಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಮನುಷ್ಯ ನಲುಗಿ ಹೋಗುತ್ತಿದ್ದಾನೆ. ಎಲ್ಲವನ್ನೂ ಬಿಟ್ಟು ತಮ್ಮ ನಿತ್ಯದ ಕೆಲಸದಲ್ಲಿ ತೊಡಗುವ ಪರಿಸ್ಥಿತಿ ಬಂದಿದೆ. ಎಲ್ಲಿಯೇ ಇರಲಿ, ಸ್ಥಳ ಯಾವುದೇ ಆಗಿರಲಿ ಲಾಭ ನಷ್ಟಗಳ ಖಾತೆಯೊಂದು ತೆರೆದುಕೊಂಡು ಲೆಕ್ಕ ಹಾಕುವ ಸ್ಥಿತಿಗೆ ಜೀವನಕ್ರಮ ಬಂದು ಮುಟ್ಟಿದೆ. ರಜಾ ದಿನಗಳಲ್ಲೂ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸುವುದರಲ್ಲಿ ನಿರತರಾಗುವ ಸಮಯ ಬಂದಿದೆ. ಜಾಬ್ ಮತ್ತು ವೈಯಕ್ತಿಕ ಬದುಕು ಇವೆರಡನ್ನೂ ಬ್ಯಾಲನ್ಸ್ ಮಾಡುವಲ್ಲಿ ಇಂದಿನ ದಿನಮಾನದ ಯುವಕರು ಒದ್ದಾಡುತ್ತಿದ್ದಾರೆ. ಅದಕ್ಕೆ ದೊಡ್ಡ ನಿದರ್ಶನವಾಗಿ ನಿಂತಿದೆ ಇಂಟರ್​ನೆಟ್​ನಲ್ಲಿ ವೈರಲ್ ಆದ ಈ ಒಂದು ವಿಡಿಯೋ.
ಇದನ್ನೂ ಓದಿ:ಗಂಟೆಗೆ 60-80ಕಿಮೀ ವೇಗ; ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ.. ಮಾಡಿದ ಅನಾಹುತಗಳೇನು?
ಕಲ್ಯಾಣ ಮಂಟಪದಲ್ಲಿ ಮದುವೆಯ ಸಂಭ್ರಮದ ಕಳೆಗಟ್ಟಿದೆ. ನವಜೋಡಿಯನ್ನು ಹರಸಿ ಹಾರೈಸಲು ನೂರಾರು ಜನರು ನೆರೆದಿರುವ ಸಮಯವದು. ಬದುಕಲ್ಲಿ ಒಮ್ಮೆ ನಡೆದು ಹೋಗುವ ಮಧುರ ಕ್ಷಣ. ಈ ವೇಳೆ ಮದುಮಗ ಹಾಗೂ ಮದಮಗಳು ಗುಸುಗುಸು ಮಾತಾಡಿಕೊಂಡು ನಗುವುದನ್ನು ನಾವೆಲ್ಲರೂ ಕಾಣುತ್ತೇವೆ. ಆದ್ರೆ ಇಲ್ಲೊಬ್ಬ ವರ ಮದುವೆಯ ಎಲ್ಲಾ ಕಾರ್ಯಗಳು ನಡೆಯುತ್ತಿರು ಸಮಯದಲ್ಲಿ ಸಿಕ್ಕ ಸ್ವಲ್ಪ ಗ್ಯಾಪ್​ನಲ್ಲಿಯೇ ತನ್ನ ಮೊಬೈಲ್ ತೆಗೆದು ಷೇರು ಮಾರುಕಟ್ಟೆಯ ಏರಿಳಿತ ಹೇಗಿದೆ ಎಂದು ನೋಡುತ್ತಾ ಕುಳಿತಿದ್ದಾನೆ. ಈ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಕೆಲವು ದಿನಗಳ ಹಿಂದೆ ಪೋಸ್ಟ್ ಆಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏನ್ ಗುರು ಮದುವೆ ಖರ್ಚು ಕವರ್ ಆಯ್ತಾ ಎಂದು ನೆಟ್ಟಿಗರು ಹಾಸ್ಯಭರಿತ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.
View this post on Instagram
ಪೋಸ್ಟ್ ಆದ ಕೆಲವೇ ದಿನಗಳಲ್ಲಿ ಈ ಒಂದು ವಿಡಿಯೋ 1 ಕೋಟಿ 30 ಲಕ್ಷ ವೀವ್ಸ್ ಪಡೆದುಕೊಂಡು ಭಾರೀ ಹವಾ ಸೃಷ್ಟಿಸಿದೆ. ನೆಟ್ಟಿಗರ ಒಂದೊಂದು ಪ್ರತಿಕ್ರಿಯೆಯೂ ಕೂಡ ಎಲ್ಲರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತಿದೆ. ನಿಮ್ಮ ಹೂಡಿಕೆ ನಿಮ್ಮ ಮದುವೆಗಿಂತ ಪ್ರಾಮುಖ್ಯತೆ ಪಡೆದಾಗ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us