newsfirstkannada.com

ಗೃಹಜ್ಯೋತಿಗೆ ಅಧಿಕೃತ ಚಾಲನೆ; ನಿಮಗೂ ಸಿಗಲಿದೆ ಫ್ರೀ ಕರೆಂಟ್​​​; ಇಲ್ಲಂದ್ರೆ ಏನು ಮಾಡಬೇಕು?

Share :

06-08-2023

  ಕರುನಾಡನ್ನ ಬೆಳಗಿದ ‘ಗೃಹಜ್ಯೋತಿ’ ಬೆಳಕಿನ ಭಾಗ್ಯ

  10 ಜನರಿಗೆ ಸಾಂಕೇತಿಕವಾಗಿ ಜಿರೋ ಬಿಲ್ ವಿತರಣೆ

  ಲೈಟ್​ ಬಲ್ಬ್​ ಹೊತ್ತಿಸಿ ‘ಗೃಹಜ್ಯೋತಿ’ಗೆ ಸಿದ್ದು ಚಾಲನೆ

ಕಲಬುರಗಿ: ಬಹುನಿರೀಕ್ಷಿತ ಗೃಹಜ್ಯೋತಿ ಯೋಜನೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಕಳೆದ ತಿಂಗಳು ಬಳಕೆ ಮಾಡಿದ ವಿದ್ಯುತ್​ಗೆ ಶೂನ್ಯ ದರದ ಕರೆಂಟ್​ ಬಿಲ್ ನೀಡುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಗೃಹದ ಬಟನ್​ ಒತ್ತಿ ಜ್ಯೋತಿಯನ್ನು ಬೆಳಗಿಸೋ ಮೂಲಕ ಸಿದ್ದರಾಮಯ್ಯ ಯೋಜನೆಗೆ ದೀಪ ಬೆಳಗಿಸಿದ್ದಾರೆ. ಇಂದೇ ಶೂನ್ಯ ಬಿಲ್​ನ್ನು ಕೊಟ್ಟಿದ್ದಾರೆ. ಇಂದಿನಿಂದ ರಾಜ್ಯದಲ್ಲಿ ಹೊಸಬೆಳಕು. ಹೊಸ ಆಶಾಕಿರಣ. ಮನೆ ಮನೆಗಳಲ್ಲಿ ಹೊಸಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿದೆ. ಇಷ್ಟು ದಿನ ಕರೆಂಟ್​ ಬಿಲ್​ ಕಟ್ಟಿ ವಿದ್ಯುತ್​ ದೀಪ, ಪರಿಕರಗಳನ್ನ ಬಳಸುತ್ತಿದ್ದ ಜನಸಾಮಾನ್ಯರು ಇನ್ಮೇಲೆ ಒಂದು ರೂಪಾಯಿ ಕೊಡದೇ ಈ ಸೌಲಭ್ಯಗಳನ್ನು ಉಪಯೋಗಿಸಲಿದ್ದಾರೆ.

ಲೈಟ್​ ಬಲ್ಬ್​ ಹೊತ್ತಿಸಿ ‘ಗೃಹಜ್ಯೋತಿ’ಗೆ ಸಿದ್ದರಾಮಯ್ಯ ಚಾಲನೆ
10 ಜನರಿಗೆ ಸಾಂಕೇತಿಕವಾಗಿ ಜಿರೋ ಬಿಲ್ ವಿತರಣೆ

ಮಲ್ಲಿಕಾರ್ಜುನ್ ಖರ್ಗೆ ತವರಲ್ಲಿ ಕಾಂಗ್ರೆಸ್ ಸರ್ಕಾರದ ಬೃಹತ್, ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್​ ಅಧಿಕೃತವಾಗಿ ಕಲಬುರಗಿಯಲ್ಲಿ ಚಾಲನೆ ನೀಡಿದ್ದಾರೆ. ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ‘ಉಚಿತ ಬೆಳಕು ಸುಸ್ಥಿರ ಬದುಕು’ ಅನ್ನೋ ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಸಾವಿರಾರು ಮಂದಿ ಭಾಗಿಯಾಗಿದ್ದರು. ಇನ್ನು ವೇದಿಕೆ ಮೇಲೆ ರಾಜ್ಯದ‌ ಜನರಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಸಾಂಕೇತಿಕವಾಗಿ ಜಿರೋ ಬಿಲ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಚಿದಾನಂದ್, ರೇಣುಕಾ, ಕೌಸರ್ ಬೇಗಂ, ತುಳಸಿರಾಮ್​, ನಾಗೇಶ್ ಸೇರಿದಂತೆ 10 ಫಲಾನುಭವಿಗಳಿಗೆ ಶೂನ್ಯ ಬಿಲ್ ವಿತರಣೆ ಮಾಡಲಾಯಿತು.

ಪ್ರಧಾನಿ ಮೋದಿ ವಿರುದ್ಧ ಸಿದ್ದು, ಡಿಕೆಶಿ ಗುಡುಗು

ಗೃಹಜ್ಯೋತಿ ಯೋಜನೆಯನ್ನ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ನಾವು ಜನರ ಮನೆ ಜ್ಯೋತಿಯನ್ನ ಬೆಳಗಿಸಿದ್ದೇವೆ. ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರಿಗೆ ಹೊಟ್ಟೆಯುರಿ ಬಿದ್ದಿದೆ ಅಂತ ವ್ಯಂಗ್ಯವಾಡಿದರು. ಅಲ್ಲದೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಇಡೀ ದೇಶದ ಜನ ಕರ್ನಾಟಕದ ಗ್ಯಾರಂಟಿ ಬಗ್ಗೆ ಮಾತಾಡ್ತಿದ್ದಾರೆ ಅಂತ ತಮ್ಮ ಗ್ಯಾರಂಟಿಗಳನ್ನು ಬಣ್ಣಿಸಿದ್ರು. ನಾವು ಕೊಟ್ಟ ಐದು ಗ್ಯಾರಂಟಿಗಳನ್ನ ಜಾರಿಗೆ ಮಾಡಿದ್ದು, ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಹಾಗೂ ನಿಮ್ಮ ಸಂಬಂಧ ಭಕ್ತನಿಗೂ ಭಗವಂತನಿಗೂ ಇರೋ ಸಂಬಂಧ ಅಂತ ಡಿಕೆ ಶಿವಕುಮಾರ್​ ಹೇಳಿದರು.

ಒಟ್ಟಾರೆಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಖರ್ಗೆ ತವರಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದೆ. ಶೂನ್ಯ ದರದ ಕರೆಂಟ್​ ಬಿಲ್​ ಕೊಟ್ಟಿದೆ. ಈ ಮೂಲಕ ಇಂದಿನಿಂದ ಜನರಿಗೆ ತಿಂಗಳಿಗೆ ಉಚಿತ 200 ಯೂನಿಟ್ ವಿದ್ಯುತ್ ಸಿಗಲಿದೆ. ಇದನ್ನ ನೋಡಿದ ಜನರು ಅಣ್ಣಾವ್ರ ಸ್ಟೈಲಲ್ಲಿ ಹೊಸ ಬೆಳಕು ಮೂಡಲಿದೆ ಅಂತ ಹಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಜ್ಯೋತಿಗೆ ಅಧಿಕೃತ ಚಾಲನೆ; ನಿಮಗೂ ಸಿಗಲಿದೆ ಫ್ರೀ ಕರೆಂಟ್​​​; ಇಲ್ಲಂದ್ರೆ ಏನು ಮಾಡಬೇಕು?

https://newsfirstlive.com/wp-content/uploads/2023/08/gruha.jpg

Load More