newsfirstkannada.com

ಮೊದಲ ದಿನವೇ ಗೃಹಜ್ಯೋತಿಗೆ ಸರ್ವರ್​​​ ಗ್ರಹಣ.. ಗಂಟೆಗಟ್ಟಲೆ ಕಾದು ಕಾದು ಸುಸ್ತಾದ ಜನ

Share :

19-06-2023

  ಸರ್ವರ್​​ ಶಾಕ್​ ನಡುವೆ ದಾಖಲೆಯೇ ನಿರ್ಮಿಸಿದ ಗೃಹಜ್ಯೋತಿ ನೋಂದಣಿ

  ಸೇವಾ ಸಿಂಧು​, ಬೆಂಗಳೂರು ಒನ್​, ಬೆಸ್ಕಾಂ ಕಚೇರಿಯಲ್ಲಿ ಸರ್ವರ್ ಡೌನ್

  ನಿನ್ನೆ ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ನೋಂದಣಿ ಎಷ್ಟಾಗಿದೆ ಗೊತ್ತಾ?

ಗ್ಯಾರಂಟಿಗಳ ಭರವಸೆಯಲ್ಲಿ ಕರ್ನಾಟಕ ಬೀಗ್ತಿದೆ. ಗೃಹಜ್ಯೋತಿಯಲ್ಲಿ ಬೆಳಕು ಕಾಣಲು ರಾಜ್ಯ ಜನ ಕಾತರದಲ್ಲಿದ್ದಾರೆ. ಆದ್ರೆ ಸರ್ವರ್​ ಗ್ರಹಣದಿಂದ ಮೊದಲ ದಿನ ಜನ ಪರದಾಡಿದ್ರು. ಇವತ್ತು ಟೆಕ್ನಿಕಲ್​ ಪ್ರಾಬ್ಲಂ ಸರಿಪಡಿಸುವುದಾಗಿ ಇಂಧನ ಸಚಿವ ಜಾರ್ಜ್​ ಭರವಸೆ ನೀಡಿದ್ದಾರೆ.. ಇತ್ತ, ಬಿಜೆಪಿ ಭವಿಷ್ಯದ ಕಾರಣಕ್ಕೆ ಸಂಜೆ ಮಹತ್ವದ ಸಭೆ ಕರೆದಿದೆ..

ರಾಜ್ಯ ಸರ್ಕಾರದ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಿಸುವ ಗೃಹ ಜ್ಯೋತಿ ಯೋಜನೆ ನೋಂದಣಿ ನಿನ್ನೆ ಆರಂಭವಾಗಿದೆ. ಆದ್ರೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಾಜ್ಯದ ಬಹುತೇಕ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಸರ್ವರ್‌ ಶಾಕ್​​​ ನೀಡಿದೆ. ಬೆಂಗಳೂರಿನ ಗೃಹಜ್ಯೋತಿ ಸೇವಾ ಸಿಂಧು ಆ್ಯಪ್​, ಬೆಂಗಳೂರು ಒನ್, ಬೆಸ್ಕಾಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ವೆಬ್‌ಸೈಟ್‌ಗಳ ಸರ್ವರ್ ಡೌನ್ ಆಗಿದೆ. ಗಂಟೆಗಟ್ಟಲೆ ಕಾದು ಜನ ಸುಸ್ತಾಗಿ ಹೋಗಿದ್ದಾರೆ.

ಮೊದಲ ದಿನವೇ ಗೃಹಜ್ಯೋತಿಗೆ ಕವಿಯಿತು ಸರ್ವರ್​​​ ಗ್ರಹಣ
200 ಯೂನಿಟ್ ಕರೆಂಟ್ ಫ್ರೀ ಹಿನ್ನೆಲೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೃಹ ಜ್ಯೋತಿ ಯೋಜನೆಯ ನೋಂದಣಿ ನಿನ್ನೆಯಿಂದ ಆರಂಭ ಆಗಿದೆ. ಬೆಳಗ್ಗೆ ಸ್ಥಗಿತಗೊಂಡಿದ್ದ ವೆಬ್‌ಸೈಟ್‌ಗಳನ್ನ ಮಧ್ಯಾಹ್ನ ಸರಿಪಡಿಸಲಾಯ್ತು. ಬಳಿಕ ಮತ್ತದೇ ಸರ್ವರ್‌ ಸಮಸ್ಯೆ. ಸಮಸ್ಯೆ ಏನೇ ಇರಲಿ, ರಾಜ್ಯದಲ್ಲಿ ಶಕ್ತಿಗೆ ಸಿಕ್ಕಷ್ಟೇ ಬಲ, ಗೃಹಜ್ಯೋತಿಗೂ ಸಿಕ್ಕಿದೆ. ಸರ್ವರ್​​​ ಶಾಕ್​​​ ನಡುವೆಯೂ ನಿನ್ನೆ ಒಂದೇ ದಿನ ನೋಂದಣಿಯಲ್ಲಿ ದಾಖಲೆ ನಿರ್ಮಾಣ ಆಗಿದೆ..

 • ಗೃಹಜ್ಯೋತಿಗೆ ಸಿಕ್ತು ‘ಪವರ್​​​’
  ಗೃಹಜ್ಯೋತಿ ಅರ್ಜಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.
  ಸಂಜೆ 6 ಗಂಟೆ ವೇಳೆಗೆ ರಾಜ್ಯದಲ್ಲಿ ಒಟ್ಟು 55,000 ನೋಂದಣಿ
  ರಜಾ ದಿನವೂ ಎಲ್ಲ ಎಸ್ಕಾಂಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು
  ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿ ಸಂಪರ್ಕಿಸಿ
  ಇಲ್ಲವೆ 24×7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆಗೂ ಸೂಚನೆ

ಮೊಬೈಲ್​​ ಮೂಲಕ ನೋಂದಣಿಗೆ ಅವಕಾಶ
ಇನ್ನು, ಗೃಹಜ್ಯೋತಿ ಸರ್ವರ್ ಎರರ್ ಬಗ್ಗೆ ಬೆಂಗಳೂರಿನಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯೆ ನೀಡಿದ್ರು. ಮೊಬೈಲ್ ಆ್ಯಪ್ ಮೂಲಕ ಸ್ವಲ್ಪ ಎರರ್ ಆಗಿದೆ. ಕ್ರೌಡ್ ಜಾಸ್ತಿ ಕಾರಣಕ್ಕೆ ಹ್ಯಾಂಗ್ ಆಗಿದೆ ಅಂತ ಸಮಜಾಯಿಷಿ ನೀಡಿದ್ರು. ಅಲ್ಲದೆ, ಹಂತ ಹಂತವಾಗಿ ಎಲ್ಲ ಸರಿ ಹೋಗಲಿದೆ. ಇವತ್ತು ಆದಷ್ಟು ಟೆಕ್ನಿಕಲ್​​ ಸಮಸ್ಯೆ ಬಗ್ಗೆ ಗಮನ ಹರಿಸ್ತೀವಿ ಎಂದ ಜಾರ್ಜ್​​​, ಇಂದಿನಿಂದ ಎಲ್ಲರೂ ಮೊಬೈಲ್ ಮೂಲಕವೂ ನೋಂದಣಿ ಮಾಡ್ಕೋಬಹುದು ಅಂತ ಹೇಳಿದ್ರು.

ಸಂಜೆ 4 ಗಂಟೆಗೆ ಬಿಜೆಪಿ ಹೈವೋಲ್ಟೇಜ್​​ ಮೀಟಿಂಗ್​
ಕಾಂಗ್ರೆಸ್​​ನ ಗ್ಯಾರಂಟಿ ಮಾಡಿದ ಮೋಡಿಗೆ ರಾಜ್ಯದಲ್ಲಿ ಬಿಜೆಪಿ ಧೂಳೀಪಟವಾಗಿದೆ. ಸದ್ಯ ಈ ಧೂಳಿಯಲ್ಲಿ ಹಾರಿ ಹೋದ ಗಾಳಿಪಟಕ್ಕೆ ದಾರ ಸಿದ್ದಪಡಿಸಲು ಬಿಜೆಪಿ ಸಜ್ಜಾಗಿದೆ. ಫಲಿತಾಂಶ ಬಂದು 37 ದಿನಗಳ ಬಳಿಕ ಸುಧಾರಿಸಿಕೊಂಡಂತೆ ಕಾಣ್ತಿದೆ. ಚುನಾವಣೆಯ ಬಳಿಕ ಇವತ್ತು ಸಂಜೆ 4 ಗಂಟೆಗೆ ಬಿಜೆಪಿ ಮಹತ್ವದ ಸಭೆ ಕರೆದಿದೆ. ಬಿಜೆಪಿಯ ಜಗನ್ನಾಥ್ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ 7 ತಂಡದ ಒಟ್ಟು 40 ಜನ ಪ್ರಮುಖರು ಭಾಗಿ ಆಗ್ತಿದ್ದಾರೆ.

 • ಬಿಜೆಪಿ ಮೀಟಿಂಗ್​​ ಅಜೆಂಡಾ!
  1. ರಾಜ್ಯ ಸರ್ಕಾರ ನಿರ್ಧಾರದ ಬಗ್ಗೆ ಬಿಜೆಪಿಯ ನಿಲುವು ಹೇಗಿರಬೇಕು?
  2. ಮುಂದಿನ ದಿನಗಳಲ್ಲಿ ಸರ್ಕಾರ ವಿರುದ್ಧ ಹೋರಾಟದ ರೂಪುರೇಷೆ
  3. ಪ್ರತಿ ಕ್ಷೇತ್ರದಲ್ಲೂ ಬೂತ್​ಮಟ್ಟ ಕಾರ್ಯಕರ್ತರ ಪ್ರತಿಭಟನೆ ಹೇಗೆ?
  4. ಗ್ಯಾರಂಟಿ ಕಾರಣಕ್ಕೆ ಸರ್ಕಾರದ ಬೊಕ್ಕಸ ಬರಿದು ಸಂದೇಶ ರವಾನೆ
  5. ಅಕ್ಕಿ ವಿಚಾರದಲ್ಲಿ ಕೇಂದ್ರ ವಿರುದ್ಧ ಆರೋಪ ಸಂಬಂಧ ಹೋರಾಟ
  6. ಗೋಹತ್ಯೆ ನಿಷೇಧ, ಮತಾಂತರ ಕಾಯ್ದೆ ನಿಷೇಧ ರದ್ದು ಬಗ್ಗೆ ಚರ್ಚೆ
  7. ಪಠ್ಯ ಪುನರ್​​​ ಪರಿಷ್ಕರಣೆ, ಎಪಿಎಂಸಿ ಕಾಯ್ದೆ ತಿದ್ದುಪಡೆ ಬಗ್ಗೆ ಸಭೆ

ವಿಧಾನಸಭೆ ಚುನಾವಣೆ ಕಾಂಗ್ರೆಸ್​​​ಗೆ ನವ ಉತ್ಸಾಹ ತುಂಬಿದ್ರೆ, ಬಿಜೆಪಿ ಉತ್ಸಾಹ ಭಂಗವಾಗಿದೆ. ಈಗ ಲೋಕಸಭೆಗೆ ಸಿದ್ಧವಾಗ್ತಿರುವ ರಾಷ್ಟ್ರೀಯ ಪಕ್ಷಗಳು ತಮ್ಮ ಬಲ ವೃದ್ಧಿಗೆ ತಮ್ಮದೇ ಲೆಕ್ಕಾಚಾರ ಹೆಣೆಯುತ್ತಿವೆ. ಈ ಚುನಾವಣೆಯಲ್ಲಿ ಗ್ಯಾರಂಟಿ ಪ್ರಭಾವಕ್ಕೆ ಅಗ್ನಿ ಪರೀಕ್ಷೆ ಏರ್ಪಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ದಿನವೇ ಗೃಹಜ್ಯೋತಿಗೆ ಸರ್ವರ್​​​ ಗ್ರಹಣ.. ಗಂಟೆಗಟ್ಟಲೆ ಕಾದು ಕಾದು ಸುಸ್ತಾದ ಜನ

https://newsfirstlive.com/wp-content/uploads/2023/06/KJ_GEORGE_GRUHA_JYOTI.jpg

Load More