newsfirstkannada.com

‘ಗೃಹಲಕ್ಷ್ಮಿ’ ಪಡೆಯಲು ಮಹಾಲಕ್ಷ್ಮಿಯರ ಜಗ್ಗಾಟ.. 2 ಸಾವಿರಕ್ಕಾಗಿ ಅತ್ತೆ-ಸೊಸೆ ಕಿತ್ತಾಟ..?

Share :

31-05-2023

    ‘ಗೃಹಲಕ್ಷ್ಮಿ’ ಪಡೆಯಲು ಮಹಾಲಕ್ಷ್ಮಿಯರ ಜಗ್ಗಾಟ

    ‘ಗೃಹ’ದಲ್ಲಿ ‘ಲಕ್ಷ್ಮಿ’ಭಾಗ್ಯ ಅತ್ತೆಗೋ? ಸೊಸೆಗೋ?

    ಅತ್ತೆ-ಸೊಸೆ ಕಿತ್ತಾಟಕ್ಕೆ ಕಾರಣವಾಯ್ತಾ ಗೃಹಲಕ್ಷ್ಮಿ?

ಕಾಂಗ್ರೆಸ್​ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆ ಮನೆಯ ಮಹಾಲಕ್ಷ್ಮಿಯರ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.. ಕೆಲ ಅತ್ತೆಯಂದಿರು ನಮಗೇ 2000 ಕೊಡಿ ಅಂದ್ರೆ, ಸೊಸೆಯಂದಿರು ಇಲ್ಲ ನಮಗೂ ಬೇಕು ಅನ್ನೋ ವರಸೆ ತೆಗೆದಿದ್ದಾರೆ.. ಈ ಮಧ್ಯೆ ಕೆಲವರು ನನ್ನ ಅತ್ತೆಗೂ ಬೇಕು ನನಗೂ ಬೇಕೂ ಅಂತ ಸಾಮರಸ್ಯದ ಸಂದೇಶ ಸಹ ರವಾನಿಸಿದ್ದಾರೆ.

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋ ಮಾತಿದೆ. ಆದ್ರೆ ಕಾಂಗ್ರೆಸ್​ ಸರ್ಕಾರ ಬಂದ್ಮೇಲೆ ಇದು ಯಾರ ಕಾಲ ಅನ್ನೋದೆ ಯಕ್ಷಪ್ರಶ್ನೆಯಾಗ್ಬಿಟ್ಟಿದೆ. ಯಾಕಂದ್ರೆ ಕಾಂಗ್ರೆಸ್ ಘೋಷಣೆ ಮಾಡಿರೋ ಗೃಹಲಕ್ಷಿ ಯೋಜನೆ ಅತ್ತೆ-ಸೊಸೆ ಕಿತ್ತಾಟಕ್ಕೆ ಕಾರಣವಾಗೋ ದೊಡ್ಡ ಸಿಗ್ನಲ್​ ಒಂದನ್ನ ನೀಡಿದೆ. ಲಕ್ಷ್ಮಿಯನ್ನ ಗೃಹಕ್ಕೆ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ಮಹಿಳಾ ಮಣಿಯರಿಗೆ ಮನೆಯೊಡತಿ ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕುವುದೇ ಸಾವಾಲಾಗಿದೆ.

ಅತ್ತೆ-ಸೊಸೆಯರ ಮಧ್ಯೆ 2 ಸಾವಿರಕ್ಕಾಗಿ ನಡೆಯುತ್ತಾ ಸಮರ?

ಗೃಹಲಕ್ಷ್ಮಿ ಯೋಜನೆ ಜಾರಿಯ ಸಾಧಕ ಬಾಧಕಗಳ ಬಗ್ಗೆ ಸಭೆ ನಡೆಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅತ್ತೆಯೇ ಮನೆಯೊಡತಿ ಅನ್ನೋ ಹೇಳಿಕೆ ನೀಡಿದ್ರು.. ಈ ಹೇಳಿಕೆ ಇದೀಗ ಹಾಲು-ಜೇನಿನಂತಿದ್ದ ಅತ್ತೆ ಸೊಸೆಯರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗುವ ಹಾಗಿದೆ.. ಯಾಕಂದ್ರೆ ಕೆಲ ಅವಿಭಕ್ತ ಕುಟುಂಬಗಳಲ್ಲಿ ಎರಡು ಮೂರು ಮಂದಿ ಮಹಿಳೆಯರಿದ್ರೆ ಇದರಲ್ಲಿ ಯಾರು ಮನೆಯೊಡತಿ ಅನ್ನೋದೆ ಸದ್ಯದ ಪ್ರಶ್ನೆಯಾಗಿದೆ.. ಇಂತಹ ಕುಟುಂಬಗಳಲ್ಲಿ ಅತ್ತೆಗೆ ಗೃಹಲಕ್ಷಿ ಯೋಜನೆ ನೀಡಬೇಕೋ ಅಥವಾ ಸೊಸೆಗೆ ನೀಡಬೇಕೋ ಎಂಬುದೆ ಸರ್ಕಾರಕ್ಕೆ ತಲೆನೋವಾಗಿದೆ.

ಪತಿ-ಪತ್ನಿಯರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಅತ್ತೆ-ಸೊಸೆ ಜಗಳದಲ್ಲಿ ಸದ್ಯ ಸರ್ಕಾರ ಬಡವಾಗುವ ಹಾಗೆ ಕಾಣ್ತಿದೆ.. ಯಾಕಂದ್ರೆ ಗೃಹಲಕ್ಷಿ ಯೋಜನೆಗೆ ನನಗೆ ಕೊಡಿ ಅಂತ ಅತ್ತೆ ಹೇಳ್ತಿದ್ರೆ ಇತ್ತ ಸೊಸೆ ಸಹ ನನಗೂ ಬೇಕು ಅಂತ ಖ್ಯಾತೆ ತೆಗೆದಿದ್ದಾರೆ.

‘ನನಗೂ ಬೇಕು ನನ್ನ ಅತ್ತೆಗೂ ಬೇಕು’!

ಅತ್ತೆ-ಸೊಸೆ ಅನ್ನೋ ಭೇದ ಬಾವ ಇಲ್ಲದೆ ತಾಯಿ-ಮಗಳಂತೆ ಬದುಕುತ್ತಿರೋ ಕೆಲ ಕುಟುಂಬದ ಮಹಿಳೆಯರು ಯಾರ ಅಕೌಂಟ್​ ಹಾಗಿದ್ರು ಖುಷಿನೆ ಅನ್ನೋ ಸಾಮರಸ್ಯದ ಸಂದೇಶ ಸಹ ರವಾನಿಸಿದ್ರು.. ಇನ್ನೂ ಕೆಲವರು ಇಬ್ಬರಿಗೂ ಕೊಡಿ ಅಂತ ಬ್ಯಾಲೆನ್ಸ್​ ಮಾತಾಡಿದ್ದಾರೆ.

‘ಗೃಹಲಕ್ಷ್ಮಿ ಯೋಜನೆಯೇ ಬೇಡ ಹಣವನ್ನ ಒಳ್ಳೆ ಕೆಲಸಕ್ಕೆ ಬಳಸಿ’!

ಕಾಂಗ್ರೆಸ್​ ಸರ್ಕಾರ ಒಂದು ವೇಳೆ ಗೃಹಲಕ್ಷ್ಮಿ ಯೋಜನೆಯನ್ನ ಜಾರಿಗೆ ತಂದ್ರೆ ಕೆಲ ಸಂಸಾರಕ್ಕೆ ಹುಳಿಹಿಂಡಿದಂತಾಗುತ್ತೆ.. ಅಲ್ಲದೇ ನಾವು ಟ್ಯಾಕ್ಸ್​ ಕಟ್ಟೋ ಹಣವನ್ನ ಒಳ್ಳೆ ಕೆಲಸಕ್ಕೆ ಬಳಸಿ ಅನ್ನೋ ಮೂಲಕ ಕೆಲ ಮಹಿಳೆಯರು ಜವಬ್ದಾರಿಯುತ ಮಾತುಗಳನ್ನ ಆಡಿದ್ರು.

ಒಟ್ನಲ್ಲಿ ಕಾಂಗ್ರೆಸ್​ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮನೆ ಮಹಾಲಕ್ಷ್ಮಿಯರ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.. ಮನೆಯೊಡತಿ ಅತ್ತೆನೋ ಸೊಸೆನೋ ಅನ್ನೋ ಪ್ರಶ್ನೆಗೆ ಉತ್ತರ ಹುಡುಕಿ, ಅತ್ತೆ-ಸೊಸೆಯರ ಮಧ್ಯೆ ಇರುವ ಸಮಾರಸ್ಯವನ್ನ ಸರ್ಕಾರ ಕಾಪಾಡುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗೃಹಲಕ್ಷ್ಮಿ’ ಪಡೆಯಲು ಮಹಾಲಕ್ಷ್ಮಿಯರ ಜಗ್ಗಾಟ.. 2 ಸಾವಿರಕ್ಕಾಗಿ ಅತ್ತೆ-ಸೊಸೆ ಕಿತ್ತಾಟ..?

https://newsfirstlive.com/wp-content/uploads/2023/05/Gruha-Lakshmi.jpg

Load More