ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರ ಪರದಾಟ
ಮಳೆ ನಡುವೆ ಹೆಂಡತಿಯರಿಗಾಗಿ ಕ್ಯೂನಲ್ಲಿ ನಿಂತಿರೋ ಗಂಡಂದಿರು
2 ಸಾವಿರ ರೂಪಾಯಿ ಪಡೆಯಲು ಮನೆ ಯಜಮಾನಿಯರ ಗೋಳಾಟ
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಮನೆ ಯಜಮಾನಿಗೆ 2000 ರೂಪಾಯಿ ಕೊಡುವ ಈ ಗ್ಯಾರಂಟಿಗೆ ಅರ್ಜಿ ಸಲ್ಲಿಸೋದು ಗೃಹಲಕ್ಷ್ಮಿಯರಿಗೆ ನಿಜಕ್ಕೂ ತಲೆನೋವಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯಾದ್ಯಂತ ಸಾಕಷ್ಟು ಸವಾಲು ಎದುರಾಗುತ್ತಿವೆ. ತಮ್ಮ ಆಧಾರ್ ನೋಂದಣಿ ಮಾಡಿಸಲು ಮುಂಜಾನೆ ನಾಲ್ಕೂವರೆ-ಐದು ಗಂಟೆಗೆ ಬಂದು ಸರದಿ ಸಾಲಿನಲ್ಲಿ ನಿಂತು ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮುಂಜಾನೆಯೇ ಬಂದು ಸರದಿ ಸಾಲು ನಿಲ್ಲುವ ಜನರಿಗೆ ಸೂರ್ಯೋದಯ ಆದರೂ ಸಹ ನೋಂದಣಿ ಮಾಡಿಸಲಾಗುತ್ತಿಲ್ಲ. ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೆ ನೋಂದಣಿ ಕೇಂದ್ರದ ಬಾಗಿಲಲ್ಲೇ ನಿಂತುಕೊಂಡು ಕಾಯುತ್ತಾ ಇದ್ದಾರೆ. ತಮ್ಮ ತಮ್ಮ ಮನೆಯಲ್ಲಿದ್ದ ಮಹಿಳೆಯರ ಪರವಾಗಿ ಪುರುಷರೇ ಸರದಿ ಸಾಲಿನಲ್ಲಿ ನಿಂತಿರುವ ಪ್ರಸಂಗ ಬಂದಿದೆ. ತಮ್ಮ ಪ್ರತಿದಿನದ ಕೂಲಿಯೇ ಐನೂರು ರೂಪಾಯಿ ಅಂತಹದರಲ್ಲಿ ಎರಡು ಸಾವಿರ ರೂಪಾಯಿಯನ್ನು ಪಡೆಯಲು ನಾಲ್ಕು ದಿನ ನಿಂತರೆ ನಮ್ಮ ನಷ್ಟ ಆಗುತ್ತದೆ ಎಂದು ಕೆಲವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ದಾವಣಗೆರೆಯಲ್ಲಿ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಮಹಿಳೆಯರು ನಾ ಮುಂದು, ತಾ ಮುಂದು ಎಂದು ಪರದಾಡುವ ಸ್ಥಿತಿ ಎದುರಾಗಿದೆ. 2 ಸಾವಿರ ರೂಪಾಯಿಗಳನ್ನು ಪಡೆಯಲು ನಾರಿಮಣಿಯರು ಮಳೆಯನ್ನೂ ಲೆಕ್ಕಿಸದೇ ಒಂದು ಕಿ.ಮೀ ಕ್ಯೂನಲ್ಲಿ ನಿಂತುಕೊಳ್ಳುವ ಪ್ರಸಂಗ ಎದುರಾಗಿದೆ. ದಾವಣಗೆರೆ ಪಿಜೆ ಬಡಾವಣೆಯ ಕರ್ನಾಟಕ ಒನ್ ಬಳಿ ಕಿಕ್ಕಿರಿದು ಕ್ಯೂನಲ್ಲಿ ನಿಂತಿದ್ದರು. ಬೆಳಗ್ಗೆ ತಿಂಡಿ, ಊಟ ಇಲ್ಲದೆ ಕ್ಯೂನಲ್ಲಿ ಬಂದು ನಿಂತಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ.
ಕೊಪ್ಪಳದಲ್ಲಿ ಧಾರಾಕಾರ ಮಳೆಯ ನಡುವೆಯೇ ಗೃಹಲಕ್ಷ್ಮಿ ನೊಂದಣಿಯನ್ನು ಮಾಡಲು ಮಹಿಳೆಯರು ಮಕ್ಕಳು ಸಮೇತ ಬಂದಿದ್ದಾರೆ. ಕೊಪ್ಪಳದ ಸುತ್ತಮುತ್ತ ಗ್ರಾಮದ ಜನರು ತಾವು ನಿಲ್ಲುವ ಸ್ಥಳದಲ್ಲಿ ಸರತಿ ಸಾಲಿಗೆ ಕಲ್ಲನ್ನಿಟ್ಟು ಜನರು ನಿಂತಿರುವ ದೃಶ್ಯ ಕಂಡು ಬಂದಿದೆ. ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಲ್ಲನ್ನಿಟ್ಟು ಜನರು ಕಾದಿದ್ದಾರೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ತಿದ್ದುಪಡಿಗೆ ಜನರು ಗೋಳಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಹಿಳೆಯರು ಬೆಳಗ್ಗೆ 4 ಗಂಟೆಯಿಂದಲೇ ರಾಮಕೃಷ್ಣನಗರದ ಮೈಸೂರು ಒನ್ ಕೇಂದ್ರದಲ್ಲಿ ಬಿಡು ಬಿಟ್ಟಿದ್ದರು. ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದ ಸಮೀಪದ ಮೈಸೂರು ಒನ್ ಕೇಂದ್ರದ ಬಳಿ ಮಹಿಳೆಯರು ಅರ್ಜಿ ಸಲ್ಲಿಕೆಗೆ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು. ಈ ವೇಳೆ ಸರತಿ ಸಾಲಿನಲ್ಲಿ ನಿಂತ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜಕಾರಣಿಗಳು ಕೋಟಿ ಕೋಟಿ ಹಣ ತಿಂತಾರೆ. ಈ ಹಣಕ್ಕೆ ಅರ್ಜಿ ಹಾಕದಿದ್ದರೆ ಇದನ್ನೂ ತಿಂದು ತೇಗುತ್ತಾರೆ. ಅದಕ್ಕೆ ನಾವು ಅರ್ಜಿ ಹಾಕ್ತಿದ್ದೀವಿ ಎಂದ ಮಹಿಳೆಯರು ಹೇಳಿದ್ದಾರೆ.
ಇತ್ತ ವಿಜಯಪುರದಲ್ಲಿ ಜಿಟಿ ಜಿಟಿ ಮಳೆಯ ನಡುವೆಯೇ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗಾಗಿ ಮಹಿಳೆಯರು ಸಾಲುಗಟ್ಟಿ ನಿಂತಿ ಪರದಾಡುವ ಸ್ಥಿತಿ ಎದುರಾಗಿತ್ತು. ಪತ್ನಿಯರ ಜೊತೆಗೆ ಪತಿಯರು ದೌಡಾಯಿಸಿ ಗೃಹಲಕ್ಷ್ಮಿಗಾಗಿ ಕ್ಯೂನಲ್ಲಿ ನಿಂತುಕೊಂಡಿದ್ದರು. ಬಳಿಕ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆ ವಿಳಂಬ ಆಗಿದ್ದರಿಂದ ಸಿಬ್ಬಂದಿ ವಿರುದ್ಧ ಮಹಿಳೆಯರು ಹಾಗೂ ವೃದ್ಧರು ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ಕೆಲಸಕ್ಕೆ ರಜೆ ಹಾಕಿ ಕ್ಯೂನಲ್ಲಿ ನಿಂತಿದ್ದೇವೆ. ಮೆಸೇಜ್ ಕಳುಹಿಸಿದ್ರೂ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯಾದಗಿರಿಯಲ್ಲಿ ಗೃಹಲಕ್ಷ್ಮಿ ನೋಂದಣಿಗಾಗಿ ನಗರದ ಕರ್ನಾಟಕ ಒನ್ ಕೇಂದ್ರದ ಹೊರಗೆ ಮಳೆಯಲ್ಲಿ ಸಾರ್ವಜನಿಕರು ನೆನೆಯುತ್ತ ನಿಂತಿದ್ದರು. ಆದರೂ ಕೂಡ ಜನರನ್ನು ಕಚೇರಿ ಒಳಗೆ ಬಿಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ವೇಳೆ ನ್ಯೂಸ್ ಫಸ್ಟ್ ವರದಿ ಮಾಡಲು ಮುಂದಾಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಜನರನ್ನ ಒಳಗೆ ಬಿಟ್ಟಿದ್ದಾರೆ. ಈ ಘಟನೆಯು ಯಾದಗಿರಿ ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಧಾರಾಕಾರ ಮಳೆಯ ನಡುವೆಯೇ ಗೃಹಲಕ್ಷ್ಮಿ ನೊಂದಣಿಯನ್ನು ಮಾಡಲು ಮಹಿಳೆಯರು ಅರ್ಜಿ ಸಲ್ಲಿಸುವ ಕೇಂದ್ರಕ್ಕೆ ದೌಡಾಯಿಸುತ್ತಿದ್ದಾರೆ. ಕೊಪ್ಪಳದ ಸುತ್ತಮುತ್ತ ಗ್ರಾಮದ ಜನರು ತಾವು ನಿಲ್ಲುವ ಸ್ಥಳದಲ್ಲಿ ಸರತಿ ಸಾಲಿನಲ್ಲಿ ಕಲ್ಲನ್ನಿಟ್ಟು ಜನರು ನಿಂತಿರುವ ದೃಶ್ಯ ಕಂಡು ಬಂದಿದೆ.#newsfirstkannada #kannadanews #newsfirstlive… pic.twitter.com/vAWNg1wLiN
— NewsFirst Kannada (@NewsFirstKan) July 27, 2023