newsfirstkannada.com

ಮೂರು ದಿನ ಕಳೆದ್ರೂ ಗೃಹಲಕ್ಷ್ಮಿಯರಿಗೆ ಬಗೆಹರಿಯದ ಗೊಂದಲ; ಎದುರಾಗ್ತಿರೋ ಸಮಸ್ಯೆಗಳು ಯಾವುವು?

Share :

22-07-2023

  ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ತಲೆನೋವು ತಂದ ಸರ್ವರ್ ಡೌನ್

  ಮೊಬೈಲ್ ಫೋನ್​ಗೆ ಮೆಸೇಜ್ ಬರದೇ ಮಹಿಳೆಯರು ಗಾಬರಿ

  ಗೃಹಲಕ್ಷ್ಮಿ ಅರ್ಜಿಯಲ್ಲಿ ಎದುರಾಗುತ್ತಿವೆ ಸಾಕಷ್ಟು ಗೊಂದಲಗಳು!

ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಒಂದೊಂದಾಗಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರ ಜನರ ಚಿತ್ತ ತನ್ನತ್ತ ತಿರುಗುವಂತೆ ಮಾಡಿದ್ದಾರೆ. ಶಕ್ತಿ ಯೋಜನೆಗೆ ಚಾಲನೆ ಸಿಕ್ಕಾಗ ರಾಜ್ಯದ ನಾರಿಯರು ಫುಲ್ ಖುಷಿಯಾಗಿದ್ರು. ಅಕ್ಕಿ ಬದಲು ಅನ್ನಭಾಗ್ಯ ಯೋಜನೆಯ ಹಣ ಅಕೌಂಟ್‌ಗೆ ಹಾಕ್ತಿರೋದು ಮಹಿಳೆಯರಿಗೆ ಸಮಾಧಾನ ತಂದಿದೆ. ಆದ್ರೆ, ಇನ್ನೇನು ನಮ್ಮ ಕೈಗೆ 2 ಸಾವಿರ ರೂಪಾಯಿ ಸಿಗುತ್ತೆ ಎಂದು ಕಾಯುತ್ತಿರುವ ಮನೆ ಯಜಮಾನಿಯರಿಗೆ ಶಾಕ್​ವೊಂದು ಎದುರಾಗಿದೆ. ಗೃಹಲಕ್ಷ್ಮಿ ಯೋಜನೆಯು ಜಾರಿಗೆ ಬಂದ ಮೂರನೇ ದಿನವೂ ತಾಂತ್ರಿಕ ಗೊಂದಲ ಮುಂದುವರೆದಿದೆ.

ಇದನ್ನು ಓದಿ: ಗೃಹಲಕ್ಷ್ಮೀಯರೇ.. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ.. ಗೊಂದಲವಿದ್ರೆ ಪರಿಹಾರ ಇಲ್ಲಿದೆ

ರಾಜ್ಯದ ಹಲವೆಡೆ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಮಹಿಳೆಯರು ನೋಂದಣಿ ಕೇಂದ್ರದ ಕಡೆ ಸಾಕಷ್ಟು ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಜೊತೆಗೆ ರೇಷನ್ ಕಾರ್ಡ್, ಆಧಾರ್, ಬ್ಯಾಂಕ್ ಪಾಸ್ ಬುಕ್ ತಂದು ನೋಂದಣಿಗೆ ಮುಂದಾಗುತ್ತಿದ್ದಾರೆ. ಮಹಿಳೆಯರು ಮೆಸೇಜ್ ಬಾರದಿದ್ದರೂ ಸೇವಾಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಬರ್ತಿದ್ದಾರೆ. ಗೃಹಲಕ್ಷ್ಮಿ ಜಾರಿಗೆ ಬಂದ ಮೊದಲ ದಿನ ಸರ್ವರ್ ಸಮಸ್ಯೆ ಆಗಿತ್ತು. ಆದರೆ ಜನರಿಗೆ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದರಿಂದ ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರ್ಜಿ ಸಲ್ಲಿಕೆಗೆ ಆಗುತ್ತಿರೋ ಸಮಸ್ಯೆಗಳೇನು?

 1. ಇಲಾಖೆಯ ನಂಬರ್​ಗೆ SMS ಮಾಡಿ, ಗಂಟೆಗಟ್ಟಲೆ ಕಾದ್ರು SMS ಬಂದಿಲ್ಲ
 2. ಮೆಸೇಜ್ ಸರಿಯಾಗಿ ಮಾಡಿದ್ದೀವಾ ಇಲ್ವಾ, ಅನ್ನೋ ಗೊಂದಲ ಜನರಲ್ಲಿ
 3. ಇಲಾಖೆಯಿಂದ ಒಂದಿಷ್ಟು ಜನರ ಫೋನ್​ ನಂಬರ್​ಗೆ ಮೆಸೇಜ್ ಬಂದಿದೆ
 4. ಮೆಸೇಜ್​​ನಲ್ಲಿ ಇರುವ ಅಡ್ರೆಸ್ ಯಾವುದು ಅಂತಾ ಸಾಕಷ್ಟು ಜನರಿಗೆ ಗೊತ್ತಿಲ್ಲ
 5. ಕೆಲಸ ಬಿಟ್ಟು ಅಡ್ರೆಸ್ ಹುಡುಕಿ ಹೋಗೋಕೆ ಆಗುತ್ತಾ ಅಂತಾ ಮಹಿಳೆಯರ ಪ್ರಶ್ನೆ

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ಮೊದಲ ದಿನವೇ 60 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸರ್ಕಾರ ತಿಳಿಸಿದೆ. ಮೊಬೈಲ್‌ ಅಪ್ಲಿಕೇಶನ್ ಮೂಲಕ 15,276 ಮಂದಿ ಅರ್ಜಿ ಸಲ್ಲಿಸಿದ್ದರೆ, ಸೇವಾ ಸಿಂಧು ವೆಬ್‌ ಸೈಟ್ ಮೂಲಕ 44,946 ಮಹಿಳೆಯರಿಂದ ನೋಂದಣಿಯಾಗಿದೆ. ಕೆಲವು ಕಡೆ ಮೊದಲ ದಿನ ಕೂಡ ಹಲವೆಡೆ ಸರ್ವರ್‌ ಸಮಸ್ಯೆ ಎದುರಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮೂರು ದಿನ ಕಳೆದ್ರೂ ಗೃಹಲಕ್ಷ್ಮಿಯರಿಗೆ ಬಗೆಹರಿಯದ ಗೊಂದಲ; ಎದುರಾಗ್ತಿರೋ ಸಮಸ್ಯೆಗಳು ಯಾವುವು?

https://newsfirstlive.com/wp-content/uploads/2023/06/laxmi-5.jpg

Load More