newsfirstkannada.com

‘ಗೃಹಲಕ್ಷ್ಮಿ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್.. ರಾಜ್ಯ ಸರ್ಕಾರ ನಿನ್ನೆ ತೆಗೆದುಕೊಂಡ ಮಹತ್ವದ ನಿರ್ಧಾರಗಳೇನು..?

Share :

11-08-2023

  ಬೆಳಗಾವಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಹಸಿರು ನಿಶಾನೆ

  ‘ಗೃಹಲಕ್ಷ್ಮಿ’ ಕಾರ್ಯಕ್ರಮಕ್ಕೆ ರಾಗಾ, ಖರ್ಗೆ ಆಗಮನ..!

  ರಾಜ್ಯದ 11000 ಕಡೆ ಏಕಕಾಲದಲ್ಲಿ ಕಾರ್ಯಕ್ರಮ!

ಪಂಚ ಗ್ಯಾರಂಟಿಗಳನ್ನ ಅನುಷ್ಠಾನ ಮಾಡಿ ನುಡಿದಂತೆ ನಡೆಯಲು ಸಜ್ಜಾಗಿರೋ ರಾಜ್ಯ ಕಾಂಗ್ರೆಸ್​ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಕಾಂಗ್ರೆಸ್​ನ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್​ ಆಗಿದೆ. ಆಗಸ್ಟ್​ 27ಕ್ಕೆ ಮನೆಯೊಡತಿಯ ಖಾತೆಗೆ ಗೃಹಲಕ್ಷ್ಮಿ ಆಗಮನ ಖಚಿತವಾಗಿದೆ.

ರಾಜ್ಯ ಕಾಂಗ್ರೆಸ್​ ಸರ್ಕಾರ ಕರುನಾಡ ಲಕ್ಷ್ಮಿಯರ ಮಡಿಲಿಗೆ ಹಾಕಿರೋ ಗೃಹಲಕ್ಷ್ಮಿ ಯೋಜನೆ ಸದ್ಯ ಗೃಹಿಣಿಯರ ಬಾಳಿಗೆ ಬೆಳಕು ಚೆಲ್ಲಲು ಸಜ್ಜಾಗಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿಯನ್ನ ಮನೆ ತುಂಬಿಸಿಕೊಳ್ಳಲು ಮನೆಯೊಡತಿಯರು ತುದಿಗಾಲಲ್ಲಿ ನಿಂತಿದ್ದಾರೆ.. ಆಗಸ್ಟ್​​ 15ರ ಸ್ವತಂತ್ರ ದಿನದಂದು ಮನೆಯೊಡತಿಯರ ಮನಗೆಲ್ಲಲು ಸಜ್ಜಾಗಿದ್ದ ಯೋಜನೆ ಕೆಲ ಕಾರಣಗಳಿಂದ ತಡವಾಗಿ ಲಾಂಚ್ ಆಗ್ತಿದೆ.

ಆಗಸ್ಟ್​ 27ಕ್ಕೆ ‘ಗೃಹಲಕ್ಷ್ಮಿ’ಯ ಎಂಟ್ರಿ

ಆಗಸ್ಟ್​ 27ರಂದು ಕಾಂಗ್ರೆಸ್​ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಮುಹೂರ್ತ ಫಿಕ್ಸ್ ಮಾಡಲಾಗಿದೆ. ಬೆಳಗಾವಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಿ ಯೋಜನೆಗೆ ಚಾಲನೆ ನೀಡಲು ಕಾಂಗ್ರೆಸ್​ ಪಾಳಯದಲ್ಲಿ ಭರ್ಜರಿ ಸಿದ್ದತೆ ನಡೆದಿದೆ. ಕಾರ್ಯಕ್ರಮ ಪೂರ್ವಭಾವಿಯಾಗಿ ಡಿಸಿಎಂ ಡಿ.ಕೆ ಶಿವಕುಮಾರ್​ ಎಲ್ಲಾ ಜಿಲ್ಲೆಗಳ ಡಿಸಿ ಮತ್ತು ಸಿಇಓಗಳ ಜೊತೆ ವಿಡಿಯೋ ಕಾನ್ಪರೆನ್ಸ್​ ಮೂಲಕ ಸಭೆ ನಡೆಸಿದ್ರು. ಸಭೆಯಲ್ಲಿ ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​, ಕಂದಾಯ ಸಚಿವ ಕೃಷ್ಣಬೈರೇಗೌಡ, ಸಚಿವ ರಹೀಂ ಖಾನ್​ ಸಹ ಹಾಜರಿದ್ರು.

ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​ ಗೃಹಲಕ್ಷಿ ಯೋಜನೆಗೆ 1.5 ಕೋಟಿ ಗೃಹಿಣಿಯರು ನೋಂದಣಿ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಕೆಗೆ ಇನ್ನೂ ಕೂಡ ಅವಕಾಶ ಇದೆ. ಜನರಿಗೆ ಅನುಕೂಲವಾಗಲಿ ಅಂತ ಕಾರ್ಯಕ್ರಮವನ್ನ ಭಾನುವರವೇ ನಿಗಧಿ ಮಾಡಿದ್ದೇವೆ. ಗೃಹಲಕ್ಷ್ಮಿ ಆಗಮನಕ್ಕಾಗಿ ಕಾದುಕುಳಿತಿರೋ ರಾಜ್ಯದ ಗೃಹಿಣಿಯರಿಗೆ ಡಿಸಿಎಂ ಸಿಹಿ ಸುದ್ದಿಯೊಂದನ್ನ ಸಹ ನೀಡಿದ್ರು.. ಆಗಸ್ಟ್​ 27ಕ್ಕೆ ಗೃಹಲಕ್ಷಿ ಯೋಜನೆಗೆ ಅರ್ಜಿಸಲ್ಲಿಸಿರುವ ಗೃಹಿಣಿಯರ ಖಾತೆಗೆ 2000 ಹಣ ಜಮಾ ಆಗಲಿದೆ ಅಂತ ತಿಳಿಸಿದರು.

ಆಗಸ್ಟ್​ 27ಕ್ಕೆ ಬೆಳಗಾವಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಆಗಮಿಸಲಿದ್ದಾರೆ ಅಂತ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ ಅಂತ ಹೇಳಿದರು.

ರಾಜ್ಯದ 11000 ಕಡೆ ಏಕಕಾಲದಲ್ಲಿ ಕಾರ್ಯಕ್ರಮ!

ಗೃಹಲಕ್ಷ್ಮಿ ಯೋಜನೆ ಚಾಲನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​, ರಾಜ್ಯದ 11000 ಕಡೆಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ನಡೆಯಲಿದೆ. ನಮ್ಮ ಜಿಲ್ಲೆ ಎಂಬ ಕಾರಣಕ್ಕೆ ಸಿಎಂ ಹಾಗೂ ಡಿಸಿಎಂ ಅವರ ಬಳಿ ಮನವಿ ಮಾಡಿ ಬೆಳಗಾವಿಯಲ್ಲಿ ಕಾರ್ಯಕ್ರಮ ನಿಗಧಿ ಮಾಡಿದ್ದೇವೆ ಅಂತ ತಿಳಿಸಿದರು.
ಒಟ್ಟಿನಲ್ಲಿ ಆಗಸ್ಟ್​​ 27ಕ್ಕೆ ಕರುನಾಡ ಲಕ್ಷ್ಮಿಯರ ಖಾತೆಗೆ ಗೃಹಲಕ್ಷ್ಮಿ ಪಾದಾರ್ಪಣೆ ಮಾಡಲಿದ್ದಾಳೆ.. ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಪಾಳಯ ಈಗಾಗಲೇ ರೂಪುರೇಶೆ ಸಿದ್ದಪಡಿಸಿಕೊಂಡಿದ್ದು, ಕಾರ್ಯಕ್ರಮದ ಚಾಲನೆ ಮೂಲಕ ನುಡಿದಂತೆ ನಡೆದಿದ್ದೇವೆ ಅನ್ನೋದನ್ನ ಸಾಬೀತು ಪಡಿಸಲು ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗೃಹಲಕ್ಷ್ಮಿ’ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್.. ರಾಜ್ಯ ಸರ್ಕಾರ ನಿನ್ನೆ ತೆಗೆದುಕೊಂಡ ಮಹತ್ವದ ನಿರ್ಧಾರಗಳೇನು..?

https://newsfirstlive.com/wp-content/uploads/2023/08/Gruhalaxmi.jpg

Load More