ಪ್ರತಿ ಮನೆಗೆ ತಿಂಗಳು 200 ಯೂನಿಟ್ ಉಚಿತ ವಿದ್ಯುತ್
ಸರ್ಕಾರದ 'ಗೃಹ ಜ್ಯೋತಿ' ಯೋಜನೆ ಜಾರಿ ಯಾವಾಗ?
ಇಂಧನ ಇಲಾಖೆ ಹೊರಡಿಸಿರೋ ಪ್ರಕಟಣೆ ಹೀಗಿದೆ..!
ಬೆಂಗಳೂರು: ವಿದ್ಯುತ್ ಬಿಲ್ ಬಾಕಿಯಿದ್ದರೂ ಗೃಹಜ್ಯೋತಿ ಯೋಜನೆ ಪ್ರಯೋಜನ ಸಿಗಲಿದೆ ಎಂದು ಇಂಧನ ಇಲಾಖೆ ವಿಶೇಷ ಪ್ರಕಟಣೆ ಹೊರಡಿಸಿದೆ.
ಗ್ರಾಹಕರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆ ಪ್ರಯೋಜನ ಸಿಗಲಿದೆ. ಹಿಂದಿನ ಬಾಕಿಯನ್ನು ಸೆಪ್ಟೆಂಬರ್ 30ರ ಒಳಗೆ ಪಾವತಿಸಬೇಕು. ಮೂರು ತಿಂಗಳು ಕಾಲಾವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ. ಜುಲೈ 25ರೊಳಗೆ ಯೋಜನೆಗೆ ನೋಂದಾಯಿಸಿಕೊಂಡರೆ ಆಗಸ್ಟ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25ನೇ ದಿನಾಂಕದಿಂದ ಮುಂದಿನ ತಿಂಗಳ 25 ನೇ ದಿನಾಂಕದವರೆಗೆ ಇರುತ್ತದೆ. ಈ ಪ್ರಯೋಜನ ಪಡೆಯಲು ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು.
ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್‌ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ. ಹಾಗಾಗಿ ಯೋಜನೆಯ ನೋಂದಣಿಗೆ ವಿಳಂಬ ಬೇಡ. ಪ್ರಯೋಜನೆ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ ಎಂದು ಇಂಧನ ಸಚಿವರ ಇಲಾಖೆ ಪ್ರಕಟಣೆ ತಿಳಿಸಿದೆ. ಇನ್ನು ಈ ಯೋಜನೆಯನ್ನು ನೋಂದಣಿ ಮಾಡಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.. https://sevasindhugs.karnataka.gov.in/