newsfirstkannada.com

ಕೊನೆಗೂ ಗೃಹಲಕ್ಷ್ಮಿ ಯೋಜನೆ ಜಾರಿ; ಇಂದೇ ಬೀಳಲಿದೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ

Share :

30-08-2023

  ಲಕ್ಷ್ಮಿಯರ ಖಾತೆಯಲ್ಲಿ ಗೃಹಲಕ್ಷ್ಮಿ ಝಣ ಝಣ!

  ನಾಡದೇವತೆಗೆ ಸಿಎಂ, ಡಿಸಿಎಂ ಗೃಹಲಕ್ಷ್ಮೀ ಕಾಣಿಕೆ

  1 ಕೋಟಿ 30 ಲಕ್ಷ ಯಜಮಾನಿಯರಿಗೆ ಗೃಹಲಕ್ಷ್ಮಿ

‘ಶಕ್ತಿ’ಯ ಸದುಪಯೋಗ ಪಡೆಯುತ್ತಿರೋ ಮಹಿಳೆಯರು, ಗೃಹಲಕ್ಷ್ಮೀ ಯಾವಾಗ ಮನೆ ಬಾಗಿಲು ತಟ್ಟುತ್ತಾಳೆ ಅಂತಾ ಕಾದು ಕೂಳಿತ್ತಿದ್ದಾರೆ. ಸರ್ಕಾರದ ನಾಲ್ಕನೇ ಗ್ಯಾರಂಟಿಗೆ ಅರ್ಜಿ ಸಲ್ಲಿಕೆ ಮಾಡಿ ಹಣಕ್ಕಾಗಿ ತುದಿಗಾಲಲ್ಲಿ ನಿಂತಿದ್ದರು. ಇದೀಗ ಶ್ರಾವಣ ಮಾಸದಲ್ಲೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಎಂಟ್ರಿ ಕೊಡಲಿದ್ದಾಳೆ. ಇಂದೇ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ. ಮಹಿಳಾ ಮಣಿಗಳಿಗೆ ಶಕ್ತಿಯ ಮೂಲಕ ಭರ್ಜರಿ ಗಿಫ್ಟ್​ ಕೊಟ್ಟಿದ್ದ ಸರ್ಕಾರ ಈಗ ಮತ್ತೊಂದು ದೊಡ್ಡ ಗಿಫ್ಟ್​ ನೀಡೋಕೆ ಮುಂದಾಗಿದೆ. ಎಲ್ಲೆಂದರಲ್ಲಿ ಫ್ರೀ ಬರ್ಡ್​ನಂತೆ ಓಡಾಡಲು ಫ್ರೀ ಬಸ್​ ಕೊಟ್ಟಿರೋ ಕಾಂಗ್ರೆಸ್ ಸರ್ಕಾರ, ಇದೀಗ ಕರುನಾಡ ಗೃಹಲಕ್ಷ್ಮಿಯರ ಖಾತೆಗೆ ಧನಲಕ್ಷ್ಮೀಯನ್ನ ಹಾಕಲು ಮುಂದಾಗಿದೆ.

ಇಂದು ಸಾಂಸ್ಕೃತಿಕ ನಗರಿಯಲ್ಲಿ ‘ಗೃಹಲಕ್ಷ್ಮಿ’ಗೆ ಚಾಲನೆ
ಮನೆ ಯಜಮಾನಿಯ ಖಾತೆಗೆ ಬೀಳಲಿದೆ ₹2 ಸಾವಿರ

ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯದ ಬಳಿಕ ಗೃಹಲಕ್ಷ್ಮೀ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ. ಇಂದು ಅರಮನೆ ನಗರಿ ಮೈಸೂರಿನಲ್ಲಿ ಮನೆ ಯಜಮಾನಿಯರ ಮಹತ್ವದ ಯೋಜನೆಗೆ ಚಾಲನೆ ಸಿಗಲಿದೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಮಹತ್ವದ ನಾಲ್ಕನೇ ಗ್ಯಾರಂಟಿ ಯೋಜನೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಅಲ್ಲದೇ ರಾಜ್ಯದ 10 ಸಾವಿರ ಸ್ಥಳಗಳಲ್ಲಿ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಈ ಮೂಲಕ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ ಹಣ ಜಮಾ ಆಗಲಿದೆ.

ಮೇ.9ರಂದು ಚಾಮುಂಡಿಗೆ ಸಿದ್ದು, ಡಿಕೆ ‘ಗ್ಯಾರಂಟಿ’ ವಾಗ್ದಾನ
ಇವತ್ತು ನಾಡದೇವತೆಗೆ ಸಿಎಂ, ಡಿಸಿಎಂ ‘ಗೃಹಲಕ್ಷ್ಮೀ’ ಕಾಣಿಕೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮೇ 9ರಂದು ಚಾಮುಂಡೇಶ್ವರಿ ಮುಂದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ವಾಗ್ದಾನ ಮಾಡಿದ್ರು. ಇದೀಗ ನಾಡದೇವತೆ ಬಳಿ ಮಾಡಿದ್ದ ಕೋರಿಕೆ ಈಡೇರಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ಹಸಿರು ಮತ್ತು ಕೆಂಪು ಸೀರೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ ಮತ್ತು ಫಲ ಸಮರ್ಪಣೆ ಮಾಡಿ ಚಾಮುಂಡೇಶ್ವರಿಗೆ ಹೊತ್ತಿದ್ದ ಹರಕೆಯನ್ನು ತೀರಿಸಿದ್ರು. ಅಲ್ಲದೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಮೊದಲ ‘ಗೃಹಲಕ್ಷ್ಮೀ’ ಕಾಣಿಕೆಯಾಗಿ ಇಬ್ಬರೂ ತಲಾ 2 ಸಾವಿರ ರೂಪಾಯಿಯನ್ನ ದೇವಿಗೆ ಅರ್ಪಿಸಿದರು.

1 ಕೋಟಿ 30 ಲಕ್ಷ ಕುಟುಂಬದ ಯಜಮಾನಿಯರಿಗೆ ‘ಗೃಹಲಕ್ಷ್ಮಿ’
ನಾಲ್ಕನೇ ಗ್ಯಾರಂಟಿ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ

ಇನ್ನೂ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ನಾಲ್ಕನೇ ಗ್ಯಾರಂಟಿಯನ್ನ ಮೈಸೂರಿನಲ್ಲಿ ಜಾರಿ ಮಾಡುತ್ತೇವೆ. ಈ ಯೋಜನೆಯಿಂದ 1 ಕೋಟಿ 30 ಲಕ್ಷ ಕುಟುಂಬದ ಯಜಮಾನಿಯರ ಅಕೌಂಟ್‌ಗೆ 2 ಸಾವಿರ ರೂಪಾಯಿ ಹಣ ಹಾಕುತ್ತೇವೆ ಅಂತಾ ಮಾಹಿತಿ ನೀಡಿದ್ರು. ಜೊತೆಗೆ ಗ್ಯಾರಂಟಿ ಜಾರಿಗೊಳಿಸಲು ಶಕ್ತಿ ಕರುಣಿಸಿದ ಚಾಮುಂಡೇಶ್ವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನಮೋ ನಮಃ ಎಂದರು.  ಏಕಕಾಲದಲ್ಲಿ 10 ಸಾವಿರ ಸ್ಥಳಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ. ಅಲ್ಲದೇ ಮೈಸೂರಿನಲ್ಲಿ ನಡೆಯಲಿರೋ ಗೃಹಲಕ್ಷ್ಮೀ ಜಾರಿ ಕಾರ್ಯಕ್ರಮ ವೀಕ್ಷಿಸಿಲು 1 ಸಾವಿರಕ್ಕೂ ಹೆಚ್ಚು ಸ್ಕೀನ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, ಚುನಾವಣೆ ವೇಳೆ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ 5 ಭರವಸೆಯನ್ನ ಕೊಟ್ಟಿತ್ತು. ಇದೀಗ ಸರ್ಕಾರ 100 ದಿನ ಪೂರೈಸುವ ವೇಳೆಗೆ 4 ನೇ ಗ್ಯಾರಂಟಿಯನ್ನ ಅನುಷ್ಟಾನಕ್ಕೆ ತರಲು ಸಜ್ಜಾಗಿದೆ. ಇದೀಗ ಐದನೇ ಗ್ಯಾರಂಟಿಯತ್ತ ರಾಜ್ಯದ ಯುವಕರ ಚಿತ್ತ ನೆಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಗೃಹಲಕ್ಷ್ಮಿ ಯೋಜನೆ ಜಾರಿ; ಇಂದೇ ಬೀಳಲಿದೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ

https://newsfirstlive.com/wp-content/uploads/2023/06/SIDDARAMAIAH_DKS.jpg

Load More