newsfirstkannada.com

ದುಡ್ಡು ಕೊಟ್ರೆ ಮಾತ್ರ ಗೃಹಲಕ್ಷ್ಮಿ ಅರ್ಜಿ ಅಪ್ಲೈ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ನೋಡಲೇ ಬೇಕಾದ ಸ್ಟೋರಿ ಇದು

Share :

29-07-2023

    ಗೃಹಲಕ್ಷ್ಮಿ ಅರ್ಜಿಗೆ ದುಡ್ಡು ಕೊಡಲೇಬೇಕು ಅಂತಿರೋ ಗ್ರಾಮ ಒನ್​ ಸಿಬ್ಬಂದಿ

    ಸಚಿವೆಯಾಗಲಿ, ನೀವಾಗಲಿ 18 ಸಾವಿರ ರೂ. ಕೊಡಿ ಫ್ರೀಯಾಗಿ ಮಾಡ್ತೇನೆ

    ನಾವು ದುಡಿಯೋದು ಬೇಡ್ವಾ, ಬರೀ ಫ್ರೀಯಾಗಿ ಕೆಲಸ ಮಾಡಬೇಕಾ?

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವುದು ಉಚಿತ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಈ ಫ್ರೀಗೆ ಗ್ಯಾರಂಟಿ ಕೊಟ್ಟಿದ್ದರು. ಆದರೆ ಸಚಿವರ ತವರು ಜಿಲ್ಲೆ ಬೆಳಗಾವಿಯ ಈ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬೇಕು ಎಂದರೆ 100 ರೂಪಾಯಿ ಕೊಡಲೇಬೇಕು. ಇದನ್ನು ಪ್ರಶ್ನಿಸಿದ್ರೆ ಗ್ರಾಮ ಒನ್ ಸಿಬ್ಬಂದಿ ದರ್ಪದಿಂದ ಅವಾಜ್ ಹಾಕುತ್ತಿದ್ದಾರಂತೆ.

ಜಿಲ್ಲೆಯ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿನ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಹಾಲಪ್ಪ ಲೋಕೂರು ಅರ್ಜಿ ಹಾಕಲು 100 ರೂಪಾಯಿ ಕೊಡಲೇಬೇಕು ಎನ್ನುತ್ತಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ನೀವಾದ್ರೂ ತಿಂಗಳಿಗೆ 18 ಸಾವಿರ ರೂಪಾಯಿ ಕೊಡಿ. ಆಗ ಬೇಕಾದ್ರೆ ಉಚಿತವಾಗಿ ಕೆಲಸ ಮಾಡಿಕೊಡುತ್ತೇನೆ. ನಾವು ಕುಳಿತು ದುಡಿಯೋದು ಬೇಡ್ವಾ, ಬರೀ ಫ್ರೀಯಾಗಿಯೇ ಕೆಲಸ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ನಾನೇನು ಪುಕ್ಕಟ್ಟೆ ದುಡಿಯಬೇಕಾ ಹೇಳಿ, ಫ್ರೀ ದುಡಿದರೆ ನಮ್ಮ ಜೀವನ ಹೇಗೆ ನಡೆಯಬೇಕು. ನೀವಾಗಲಿ ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ಆಗಲಿ ನನಗೆ ತಿಂಗಳಿಗೆ 18,000 ಕೊಡಿ. ಆಗ ಮಾತ್ರ ಕೆಲಸ ಮಾಡಿಕೊಡುತ್ತೇನೆ ಎಂದು ಗ್ರಾಮ ಒನ್​ ಸಿಬ್ಬಂದಿ ದರ್ಪ ಹಾಕುತ್ತಿದ್ದಾನೆ ಎನ್ನಲಾಗಿದೆ. ನ್ಯೂಸ್​ ಫಸ್ಟ್​ ಚಾನೆಲ್​ನಲ್ಲಿ ವರದಿಯಾದ 2 ಗಂಟೆಯಲ್ಲೇ ಅವರಖೋಡ ಗ್ರಾಮಕ್ಕೆ ಅಥಣಿ ತಹಶೀಲ್ದಾರ್​ ಭೇಟಿ ನೀಡಿ ಗ್ರಾಮದಲ್ಲಿನ ಗ್ರಾಮ ಒನ್ ಕೇಂದ್ರ ಸಿಜ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಡ್ಡು ಕೊಟ್ರೆ ಮಾತ್ರ ಗೃಹಲಕ್ಷ್ಮಿ ಅರ್ಜಿ ಅಪ್ಲೈ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ನೋಡಲೇ ಬೇಕಾದ ಸ್ಟೋರಿ ಇದು

https://newsfirstlive.com/wp-content/uploads/2023/06/Lakshmi-Hebbalkar.jpg

Load More