5 ದಿನದ ಗಣೇಶೋತ್ಸವಕ್ಕಾಗಿ 400 ಕೋಟಿ ರೂಪಾಯಿ ಇನ್ಸೂರೆನ್ಸ್
ಮುಂಬೈನ ಜಿಎಸ್ಬಿ ಗಣೇಶ ಮಂಡಳಿಯಿಂದ ದಾಖಲೆಯ ಪಾಲಿಸಿ
ಲಾಲ್ಬೌಗ್ಚಾ ಗಣೇಶ ಮಂಡಳಿಯಿಂದಲೂ ₹32.76 ಕೋಟಿ ಪಾಲಿಸಿ
ಮುಂಬೈ: ಗೌಡ ಸಾರಸ್ವತ ಬ್ರಾಹ್ಮಣ ಮಂಡಳ ಮುಂಬೈನ ಕಿಂಗ್ಸ್ ಸರ್ಕಲ್ನಲ್ಲಿಯೇ ಅತ್ಯಂತ ಶ್ರೀಮಂತ ಗಣೇಶ ಮಂಡಳಿ. ಈ ಬಾರಿ ಈ ಗಣೇಶ ಮಂಡಳಿ ಇನ್ಸೂರೆನ್ಸ್ ವಿಚಾರದಲ್ಲಿ ಎಲ್ಲಾ ದಾಖಲೆಯನ್ನು ಮುರಿದು ಹಾಕಿದೆ. ಐದು ದಿನದ ಅಂದ್ರೆ ಸೆಪ್ಟೆಂಬರ್ 7 ರಿಂದ 11ರವರೆಗೆ ನಡೆಯಲಿರುವ ಗಣೇಶೋತ್ಸವದ ಮೇಲೆ ಬರೋಬ್ಬರಿ 400 ಕೋಟಿ ರೂಪಾಯಿ ಇನ್ಸೂರೆನ್ಸ್ ಮಾಡುವ ಮೂಲಕ ದೇಶಾದ್ಯಂತ ಸುದ್ದಿ ಮಾಡಿದೆ. ಇತ್ತ ಲಾಲಬೌಗ್ಚಾ ರಾಜ ಗಣೇಶೋತ್ಸವಕ್ಕೆ 32.76 ಕೋಟಿ ರೂಪಾಯಿ ಇನ್ಸೂರೆನ್ಸ್ ಮಾಡಲಾಗಿದೆ. ಈ ಒಂದು ಗಣೇಶೋತ್ಸವ ಹತ್ತು ದಿನಗಳ ಕಾಲ ಅಂದ್ರೆ ಸೆಪ್ಟಂಬರ್ 7 ರಿಂದ 17ರವರೆಗೆ ನಡೆಯಲಿದೆ.
ಗೌಡ ಸರಸ್ವತ ಬ್ರಾಹ್ಮಣ ಮಂಡಳ ಪ್ರತಿ ವರ್ಷ ಇಡುವ ಗಣೇಶನ ಮೇಲೆ ಸುಮಾರು 66 ಕೆಜಿ ಬಂಗಾರದ ಆಭರಣ ಹಾಗೂ 325 ಕೆಜಿ ಬೆಳ್ಳಿಯ ಆಭರಣಗಳನ್ನು ಹಾಕುತ್ತಾರೆ. ಹೀಗಾಗಿ ಈ ಬಾರಿ 400.58 ಕೋಟಿ ರೂಪಾಯಿಯ ಇನ್ಸುರೆನ್ಸ್ ಪಾಲಿಸಿಯನ್ನು ಗಣೇಶನ ಮೇಲೆ ಮಾಡಿಸಲಾಗಿದೆ.
ಇದನ್ನೂ ಓದಿ: ನೌಕರರಿಗೆ ಕೇಂದ್ರ ಭರ್ಜರಿ ಗಿಫ್ಟ್: 10 ವರ್ಷಗಳ ನಂತರ ಕೆಲ್ಸ ಬಿಟ್ರೆ 10 ಸಾವಿರ; 25 ವರ್ಷದ ಸೇವೆಗೆ ಎಷ್ಟು ಪಿಂಚಣಿ?
ಮಂಡಳದ ಅಧ್ಯಕ್ಷ ಅಮಿತ್ ಪೈ ಹೇಳುವ ಪ್ರಕಾರ ಒಟ್ಟು 400.58 ಕೋಟಿ ರೂಪಾಯಿ ಇನ್ಸೂರೆನ್ಸ್ ಪಾಲಿಸಿಯಲ್ಲಿ 325 ಕೋಟಿ ರೂಪಾಯಿ ವೈಯಕ್ತಿಕ ಅಪಘಾತ ಅವಘಡಗಳಿಗೆ ಕವರ್ ಆಗಲಿದೆ. ಅಂದ್ರೆ ಅಡುಗೆಯವರು, ಸೇವೆಯಲ್ಲಿ ನಿರತರಾದವರು, ಪಾರ್ಕಿಂಗ್ ಜಾಗವನ್ನು ನೋಡಿಕೊಳ್ಳುವವರು, ಭದ್ರತಾ ಸಿಬ್ಬಂದಿ ಮತ್ತು ಗಣಪತಿ ಸ್ಟಾಲ್ ವರ್ಕರ್ಸ್ ಇವರಿಗೆ ಏನಾದರೂ ಅಪಾಯವಾದ್ರೆ ಈ 325 ಕೋಟಿ ರೂಪಾಯಿಯಲ್ಲಿ ಕ್ಲೇಮ್ ಆಗುತ್ತದೆ. ಇನ್ನುಳಿದಂತೆ 43.15 ಕೋಟಿ ರೂಪಾಯಿ ಗಣೇಶನ ಮೇಲಿರುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳುವಾದರೆ ಅದು ಪರಿಹಾರ ಸಿಗಲಿದೆ. ಉಳಿದಂತೆ 2 ಕೋಟಿ ರೂಪಾಯಿ ಬೆಂಕಿ ಅವಘಡ, ಭೂಕಂಪದಲ್ಲಿ ಮಂಡಳದ ಪೀಠೋಪಕರಣಗಳು ಕಂಪ್ಯೂಟರ್ಸ್, ಸಿಸಿಟಿವಿ ಕ್ಯಾಮಾರಗಳು ಸೇರಿದಂತೆ ಅನೇಕ ಸ್ಥಿರಾಸ್ತಿ ಹಾನಿಯಾದಲ್ಲಿ ಅದಕ್ಕೆ ಕವರ್ ಆಗಲಿದೆ. ಇನ್ನು 30 ಕೋಟಿ ರೂಪಾಯಿ ಪೆಂಡಾಲ್, ಸ್ಟೇಡಿಯಂ ಹಾಗೂ ಭಕ್ತರಿಗೆ ಹಾನಿಯಾದಲ್ಲಿ ಉಪಯೋಗಿಸಲು ಮಾಡಲಾಗಿದೆ ಎಂದು ಅಮಿತ್ ಪೈ ಹೇಳಿದ್ದಾರೆ.
ಇದನ್ನೂ ಓದಿ: 26 KG ಚಿನ್ನದ ಆಭರಣ ಕದ್ದ ಬ್ಯಾಂಕ್ ಮ್ಯಾನೇಜರ್.. ಗ್ರಾಹಕರ ಬಂಗಾರ ಗೋವಿಂದ ಗೋವಿಂದ
ಕಳೆದ ವರ್ಷ ಅಂದ್ರೆ 2023ರಲ್ಲಿ ಇದೇ ಗೌಡ ಸಾರಸ್ವತ ಬ್ರಾಹ್ಮಣ ಗಣೇಶ ಮಂಡಳ ಸುಮಾರು 360.40ಕೋಟಿ ರೂಪಾಯಿಗೆ ಇನ್ಸೂರೆನ್ಸ್ ಪಾಲಿಸಿ ಮಾಡುವ ಮೂಲಕ ಸುದ್ದಿಯಾಗಿತ್ತು. ಈ ವರ್ಷ ಅದನ್ನು ಮತ್ತೆ 40 ಕೋಟಿ ರೂಪಾಯಿಗೆ ಏರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಅಮೂಲ್ಯವಾದ ಬಂಗಾರ ಹಾಗೂ ಬೆಳ್ಳಿಯ ಬೆಲೆಯಲ್ಲಿ ಹೆಚ್ಚಾಗಿದೆ ಹೀಗಾಗಿ ಇನ್ಶುರೆನ್ಸ ಪಾಲಿಸಿಯೂ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಕಳೆದ 70 ವರ್ಷದಿಂದ ಗೌಡ ಸಾರಸ್ವತ ಬ್ರಾಹ್ಮಣ ಗಣೇಶ ಮಂಡಳಿ ಈ ಅದ್ದೂರಿ ಗಣೇಶೋತ್ಸವವನ್ನ ಆಚರಿಸಿಕೊಂಡು ಬಂದಿದೆ.
ಮತ್ತೊಂದು ಕಡೆ ಲಾಲ್ಬೌಗ್ಚಾ ಗಣೇಶ ಮಂಡಳಿಯೂ ಕೂಡ ಈ ಬಾರಿ 32.76 ಕೋಟಿ ರೂಪಾಯಿಯ ಇನ್ಶೂರೆನ್ಸ್ ಪಾಲಿಸಿ ಮಾಡಿಸಿದೆ. 10 ದಿನಗಳ ಕಾಲ ಈ ಮಂಡಳಿ ಗಣೇಶೋತ್ಸವ ಆಚರಿಸುತ್ತದೆ. ಮಂಡಳದ ಖಜಾಂಚಿ ಮಂಗೇಶ್ ದಳ್ವಿ ಹೇಳುವ ಪ್ರಕಾರ 12 ಕೋಟಿ ರೂಪಾಯಿಯನ್ನು ವ್ಯಕ್ತಿಗತ ಅಪಘಾತಗಳಿಗೆ ಇನ್ಶೂರೆನ್ಸ್ ಪಾಲಿಸಿ ಮಾಡಿಸಲಾಗಿದೆ. 10 ಕೋಟಿ ರೂಪಾಯಿ ಥರ್ಡ್ ಪಾರ್ಟಿ ಲೈಬಲಿಟಿ ಸೇರಿ ಪ್ರಸಾದದಲ್ಲಿ ವಿಷಕಾರಿ ಅಂಶ ಬಿದ್ದು ಏನಾದರೂ ಅನಾಹುತವಾದರೆ ಕವರ್ ಮಾಡಲು ಮೀಸಲಿಡಲಾಗಿದೆ. 2.5 ಕೋಟಿ ರೂಪಾಯಿ ಸೆಟ್, ಆಸ್ತಿ ಹಾಗೂ ವಿದ್ಯುತ್ ಫಿಟ್ಟಿಂಗ್ಗಳಿಗಾಗಿ ಪಾಲಿಸಿ ಮಾಡಿಸಲಾಗಿದ್ದು. ದೇವರ ಆಭರಣಗಳ ಮೇಲೆ 8.26 ಕೋಟಿ ರೂಪಾಯಿ ಇನ್ಸೂರೆನ್ಸ್ ಮಾಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ