ಕುದುರೆ ರೇಸ್, ಆನ್‌ಲೈನ್ ಗೇಮ್ ಆಡೋರೆ ಎಚ್ಚರ!
ಇನ್ಮುಂದೆ ಎರಡಕ್ಕೂ ಕೇಂದ್ರ ಸರ್ಕಾರ ವಿಧಿಸಲಿದೆ ತೆರಿಗೆ
10 ಅಲ್ಲ, 15 ಅಲ್ಲ, ಬರೋಬ್ಬರಿ ಶೇ. 28 ರಷ್ಟು ಟ್ಯಾಕ್ಸ್!
ನವದೆಹಲಿ: ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ರೇಸ್ ಕ್ಲಬ್ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಕೇಂದ್ರಿಯ ಮತ್ತು ಸಮಗ್ರ ಜಿಎಸ್‌ಟಿ ಕಾನೂನು ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ ಎಂದು ವರದಿಯಾಗಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿಯನ್ನು ‘ಅಶಿಸ್ತಿನ’ ನಡವಳಿಕೆ ತೋರಿದ್ದಾರೆ ಎಂದು ಸಂಸತ್ನಿಂದ ಅಮಾನತು ಮಾಡಲಾಗಿದೆ. ಖುದ್ದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರೇ ಅಮಾನತು ನಿರ್ಣಯ ಮಂಡಿಸಿದ್ದಾರೆ. ಸದನದಲ್ಲಿ ಅಧೀರ್ ರಂಜನ್ ಚೌಧರಿ ಅಮಾನತು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಭಾರೀ ಗದ್ದಲದ ಮಧ್ಯೆಯೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ GST ಮಸೂದೆ ಮಂಡಿಸಿದರು.
ಸದ್ಯ GST ಮಸೂದೆಯನ್ನು ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಕ್ಯಾಸಿನೊ, ಕುದುರೆ ರೇಸಿಂಗ್, ಆನ್‌ಲೈನ್ ಗೇಮಿಂಗ್ ಮೇಲಿನ ತೆರಿಗೆ ಕುರಿತು ಸ್ಪಷ್ಟತೆ ನೀಡಲು ಈ ಹಿಂದೆಯೇ ಜಿಎಸ್ಟಿಗೆ ತಿದ್ದುಪಡಿ ತರಲಾಗಿದೆ. ಈಗ ಇದನ್ನು ಅಂಗೀಕಾರ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ