ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಫೈಟ್
ಜೆಡಿಎಸ್ ಟಿಕೆಟ್ಗಾಗಿ ಶುರುವಾಗಿರುವ ಜಟಾಪಟಿ
ಜಿ.ಟಿ. ದೇವೇಗೌಡ, ಸಾ.ರಾ.ಮಹೇಶ್ ನಡುವೆ ಫೈಟ್
ಲೋಕಸಭೆ ಚುನಾವಣೆಗೆ ರಾಜಕಾರಣಿಗಳು ತಮ್ಮದೇ ರೀತಿಯಲ್ಲಿ ತಯಾರಿ ಶುರುಮಾಡಿದ್ದು, ಪಕ್ಷದ ಟಿಕೆಟ್ಗಾಗಿ ಒಳಗಿಂದೊಳಗೆ ಪೈಪೋಟಿ ಶುರು ಮಾಡಿದ್ದಾರೆ. ಅಂತೆಯೇ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಜೆಡಿಎಸ್ನ ಇಬ್ಬರು ನಾಯಕರು ಜಿದ್ದಿಗೆ ಬಿದ್ದಿದ್ದಾರೆ ಎಂಬ ಚರ್ಚೆ ರಾಜಕೀಯವಲಯದಲ್ಲಿ ಜೋರಾಗಿ ನಡೆಯುತ್ತಿದೆ.
ಮೈಸೂರು ಜಿಲ್ಲೆಯ ನಾಯಕತ್ವ ವಿಚಾರದಲ್ಲಿ ಜಿ.ಟಿ.ದೇವೇಗೌಡ ಹಾಗೂ ಸಾ.ರಾ. ಮಹೇಶ್ ಪೈಪೋಟಿಗೆ ಬಿದ್ದಿದ್ರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಗೆದ್ದು ಬೀಗಿದ್ರೆ, ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರಾ ಮಹೇಶ್ ಸೋಲು ಕಂಡಿದ್ದಾರೆ.
ಅವರು (ದೇವೇಗೌಡರು) ನನ್ನೇ ನಿಲ್ಲಿಸಬೇಕು ಅಂದರೆ ನಾನೇ ಚುನಾವಣೆಗೆ ಇಳಿಯಬೇಕಾಗುತ್ತದೆ. ಪಕ್ಷ ತೀರ್ಮಾನ ತೆಗೆದುಕೊಂಡರೆ ನಾನು ರೆಡಿ ಇರಬೇಕಾಗುತ್ತದೆ. ನಾನು ಎಲ್ಲದಕ್ಕೂ ರೆಡಿ ಇದ್ದೇನೆ-ಜಿಟಿ ದೇವೇಗೌಡ, ಮಾಜಿ ಸಚಿವ
ಇದೀಗ ಲೋಕಸಭಾ ಚುನಾವಣೆಗೆ ತಯಾರಿ ಹಿನ್ನೆಲೆ, ಸಾರಾ ಮಹೇಶ್ ಎಂಪಿ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪಕ್ಷ ಟಿಕೆಟ್ ನೀಡಿದ್ರೆ ಲೋಕಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಅಂತ ಜಿಟಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ ಮಹೇಶ್ಗೆ ಟಿಕೆಟ್ ತಪ್ಪಿಸಲು ಹಿರಿಯ ಶಾಸಕ ಜಿ.ಟಿ ದೇವೇಗೌಡ ಆಕಾಂಕ್ಷಿ ಎಂಬ ಅಸ್ತ್ರ ಪ್ರಯೋಗ ಮಾಡಿದ್ರಾ ಅನ್ನೋ ಚರ್ಚೆಗಳು ಆರಂಭವಾಗಿವೆ. ಸದ್ಯ ಹೆಚ್.ಡಿ. ಕುಮಾರಸ್ವಾಮಿ ಜೊತೆ ಮಹೇಶ್ ವಿದೇಶ ಪ್ರವಾಸದಲ್ಲಿದ್ದಾರೆ. ಈ ಮೂಲಕ ಲೋಕಸಭೆ ಟಿಕೆಟ್ಗಾಗಿ ಮಹೇಶ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಆಸೆ ವ್ಯಕ್ತಪಡಿಸಿದ ಜಿಟಿ ದೇವೇಗೌಡ #gtdevegowda #JDS @mepratap @hd_kumaraswamy pic.twitter.com/01CJowGNWr
— NewsFirst Kannada (@NewsFirstKan) August 13, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ