newsfirstkannada.com

GT vs CSK: ಎರಡೂ ತಂಡದಲ್ಲಿ ಇದ್ದಾರೆ ಕ್ವಾಲಿಟಿ ಸ್ಪಿನ್ನರ್ಸ್.. ಯಾರಾಗಲಿದ್ದಾರೆ ಇಂದಿನ ವಿನ್ನರ್ಸ್​?

Share :

23-05-2023

    ಧೋನಿಗೆ ಜಡ್ಡು, ತೀಕ್ಷಣ, ಮೋಯಿನ್ ಅಸ್ತ್ರ..!

    ಗೆಲ್ಲೋದು, ಟೈಟನ್ಸ್​ಗೆ ಹೇಳಿಕೊಳ್ಳುವಷ್ಟು ಸುಲಭವಲ್ಲ..!​

    ಸಿಎಸ್​​ಕೆ ಸ್ಪಿನ್ನರ್ಸ್ V/S ಗುಜರಾತ್ ಸ್ಪಿನ್ ಸ್ಪಿನ್ನರ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-16, ಮಹತ್ವದ ಹಂತ ತಲುಪಿದೆ. ಇವತ್ತು ಚೆನ್ನೈ ಸೂಪರ್​​ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್​, ಫೈನಲ್​​ ಪ್ರವೇಶಿಸೋಕೆ ಬಿಗ್ ಫೈಟ್ ನಡೆಸಲಿವೆ. ಆದ್ರೆ ಟೂರ್ನಿಯ ಟಾಪ್-2 ತಂಡಗಳ ಫೈನಲ್ ಎಂಟ್ರಿ, ಸ್ಪಿನ್ನರ್ಸ್ ಕೈಯಲ್ಲಿದೆ.​​

ಐಪಿಎಲ್​​​​ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ, ಚೆನ್ನೈನ ಚೆಪಾಕ್ ಮೈದಾನ ಸಜ್ಜಾಗಿದೆ. ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಡೋಕೆ, ಎರಡು ಬಲಿಷ್ಟ ತಂಡಗಳು ತುದಿಗಾಲಲ್ಲಿ ನಿಂತಿವೆ. ಒಂದೆಡೆ ತವರಿನ ಲಾಭ ಪಡೆಯೋಕೆ ಚೆನ್ನೈ ಸೂಪರ್​​ಕಿಂಗ್ಸ್​​ ರೆಡಿಯಾಗಿದ್ರೆ, ಮತ್ತೊಂದೆಡೆ ಹಾಲಿ ಚಾಂಪಿಯನ್ಸ್​ ಗುಜರಾತ್ ಟೈಟನ್ಸ್​, ಟೈಟಲ್ ಡಿಫೆಂಡ್ ಮಾಡಿಕೊಳ್ಳೋಕೆ ಮುಂದಾಗಿದೆ.

ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್​​​ ಟೈಟನ್ಸ್​, ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿದೆ. ಆದ್ರೆ ಧೋನಿ ಪಡೆ, ಸೋಲು-ಗೆಲುವು ಎರಡೂ ಕಂಡಿದೆ. ಇದೀಗ ಮಹತ್ವದ ಹಂತದಲ್ಲಿ, ಯಾವ ತಂಡ ಒತ್ತಡವನ್ನ ಸುಲಭವಾಗಿ ನಿಭಾಯಿಸುತ್ತೆ..? ಯಾವ ತಂಡ ಪ್ಯಾನಿಕ್ ಬಟನ್ ಪ್ರೆಸ್ ಮಾಡುತ್ತೆ ಅನ್ನೋ ಲೆಕ್ಕಾಚಾರ ಕೂಡ ಶುರುವಾಗಿದೆ. ಒಂದಂತೂ ನಿಜ..! ಉಭಯ ತಂಡಗಳ ಫೈನಲ್ ಎಂಟ್ರಿ, ಸ್ಪಿನ್ನರ್ಸ್​ ಕೈಯಲ್ಲಿದೆ.!!

ಚೆನ್ನೈ ಪಿಚ್​ನಲ್ಲಿ ಸ್ಪಿನ್ ಟೆಸ್ಟ್..?​​ 
ಚೆನ್ನೈನ ಚೆಪಾಕ್​​ ಮೈದಾನ, ಸ್ಲೋ ಟ್ರ್ಯಾಕ್​​​ ಹೊಂದಿದೆ. ಹಾಗಾಗಿ ಈ ಪಿಚ್​​,​ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗೋ ಸಾಧ್ಯತೆ ಇದೆ. ಈ ಪಿಚ್​ನಲ್ಲಿ ಸ್ಪಿನ್ನರ್ಸ್​, ಮ್ಯಾಚ್ ಡಿಸೈಡ್ ಮಾಡ್ತಾರೆ. ಸಿಎಸ್​​ಕೆ ಮತ್ತು ಗುಜರಾತ್ ತಂಡಗಳು ಕ್ವಾಲಿಟಿ ಸ್ಪಿನ್​​​ ಅಟ್ಯಾಕ್ ಹೊಂದಿರೋದ್ರಿಂದ, ಬ್ಯಾಟ್ಸ್​ಮನ್​​ಗಳಿಗೆ ಈ ಪಿಚ್​ನಲ್ಲಿ ಟೆಸ್ಟಿಂಗ್ ಟೈಮ್ ಪಕ್ಕಾ..!

ಧೋನಿಗೆ ಜಡ್ಡು, ತೀಕ್ಷಣ, ಮೋಯಿನ್ ಅಸ್ತ್ರ..!
ಧೋನಿ ಸಾರಥ್ಯದ ಚೆನ್ನೈ ಸೂಪರ್​ಕಿಂಗ್ಸ್​, ಅನುಭವಿ ಸ್ಪಿನ್ನರ್​ಗಳನ್ನ ಹೊಂದಿದೆ. ರವೀಂದ್ರ ಜಡೇಜಾ, ಮೋಯಿನ್ ಅಲಿ, ಮಹೀಶ್ ತೀಕ್ಷಣ, ಮಿಚೆಲ್ ಸ್ಯಾಂಟ್ನರ್​, ಸಿಎಸ್​​ಕೆ ಕ್ಯಾಂಪ್​​​ನಲ್ಲಿದ್ದಾರೆ. ಇವ್ರೇ ಕ್ಯಾಪ್ಟನ್ ಧೋನಿಯ, ಪ್ರಮುಖ ಅಸ್ತ್ರ. ಸಿಎಸ್​​ಕೆ ಸ್ಪಿನ್ ಚಾಲೆಂಜ್.

ಹಾಲಿ ಚಾಂಪಿಯನ್ಸ್​​ ಅಫ್ಘಾನಿಸ್ತಾನ್ ಸ್ಪಿನ್ನರ್​ಗಳನ್ನೇ ಹೆಚ್ಚು ನಂಬಿಕೊಂಡಿದೆ. T20 ಕ್ರಿಕೆಟ್​​ನ ಟಾಪ್ ಸ್ಪಿನ್ನರ್​ ರಶೀದ್ ಖಾನ್ ಮತ್ತು ಎಡಗೈ ಮಿಸ್ಟ್ರಿ ಸ್ಪಿನ್ನರ್​​ ನೂರ್​ ಅಹ್ಮದ್, ಟೈಟನ್ಸ್​ ಪರ ಟೈಟ್ ಸ್ಪೆಲ್ ಹಾಕ್ತಿದ್ದಾರೆ. ರಶೀದ್ ಮತ್ತು ನೂರ್ ಅಹ್ಮದ್​​ ಬೌಲಿಂಗ್ ಫೇಸ್ ಮಾಡೋದು, ಎದುರಾಳಿಗಳಿಗೆ ಟಫ್ ಟಾಸ್ಕ್.

CSK ಸ್ಪಿನ್ನರ್ಸ್ V/S ಗುಜರಾತ್ ಸ್ಪಿನ್ ಸ್ಪಿನ್ನರ್ಸ್
ಲೀಗ್ ಸ್ಟೇಜ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್ ಸ್ಪಿನ್ನರ್ಸ್​ ಆಡಿರೋ 14 ಪಂದ್ಯಗಳಲ್ಲಿ, 38 ಬ್ಯಾಟ್ಸ್​ಮನ್​​ಗಳ ವಿಕೆಟ್ ಪಡೆದಿದ್ರೆ, ಗುಜರಾತ್ ಟೈಟನ್ಸ್​ ಸ್ಪಿನ್ನರ್ಸ್​ 37 ವಿಕೆಟ್ ತೆಗೆದಿದ್ದಾರೆ. ಎರಡೂ ತಂಡಗಳ ಸ್ಪಿನ್ನರ್ಸ್​ ಸಮಬಲ ತಾಖತ್ತು ಪ್ರದರ್ಶಿಸಿದ್ದಾರೆ ಅನ್ನೋದಕ್ಕೆ, ಈ ಅಂಕಿ ಅಂಶಗಳೇ ಸಾಕ್ಷಿ..!

ಸ್ಪಿನ್ನರ್ಸ್ ಆಗ್ತಾರಾ ಮ್ಯಾಚ್ ವಿನ್ನರ್ಸ್​..?
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಸ್ಪಿನ್ನರ್ಸ್​, ಪೇಸರ್ಸ್​ಗಿಂತ ಹೆಚ್ಚು ದರ್ಬಾರ್ ನಡೆಸಿದ್ದಾರೆ. ರಾಜಸ್ಥಾನ್ ರಾಯಲ್ಸ್​ನ ಯುಜುವೇಂದ್ರ ಚಹಲ್ ಮತ್ತು ಆರ್​.ಅಶ್ವಿನ್, ಮುಂಬೈ ಇಂಡಿಯನ್ಸ್​ನ ಪಿಯೂಷ್ ಚಾವ್ಲಾ, ಕೆಕೆಆರ್​ನ ವರುಣ್ ಚಕ್ರವರ್ತಿ, ಲಕ್ನೋ ತಂಡದ ರವಿ ಬಿಷ್ನಾಯ್, ಸೂಪರ್​ಸ್ಟಾರ್ ಬ್ಯಾಟ್ಸ್​ಮನ್​​ಗಳ ಪಾಲಿಗೆ, ವಿಲನ್​ಗಳಾಗಿದ್ದಾರೆ.

ಒಟ್ನಲ್ಲಿ..! ಚೆನ್ನೈನಲ್ಲಿ ನಡೆಯೋ ಹೈವೋಲ್ಟೇಜ್ ಪಂದ್ಯದಲ್ಲಿ, ಯಾರು ಮೇಲುಗೈ ಸಾಧಿಸ್ತಾರೆ..! ಬ್ಯಾಟ್ಸ್​ಮನ್​​ಗಳಾ…? ಪೇಸರ್​ಗಳಾ…? ಅಥವಾ ಸ್ಪಿನ್ನರ್​ಗಳಾ..? ಪಂದ್ಯವನ್ನ ಡಿಸೈಡ್ ಮಾಡೋದು ಯಾರು ಅಂತ, ಕಾದುನೋಡೋಣ..!

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

GT vs CSK: ಎರಡೂ ತಂಡದಲ್ಲಿ ಇದ್ದಾರೆ ಕ್ವಾಲಿಟಿ ಸ್ಪಿನ್ನರ್ಸ್.. ಯಾರಾಗಲಿದ್ದಾರೆ ಇಂದಿನ ವಿನ್ನರ್ಸ್​?

https://newsfirstlive.com/wp-content/uploads/2023/05/GT-VS-CSK-1.jpg

Load More