ಶಶಾಂಕ್ ಸಿಂಗ್ ಅರ್ಧಶತಕದಾಟಕ್ಕೆ ಪಂಜಾಬ್ ಫುಲ್ ಖುಷ್
ಗುಜರಾತ್ ವಿರುದ್ಧ ಮೂರು ವಿಕೆಟ್ಗಳ ಜಯ ಪಡೆದ ಪಂಜಾಬ್
ಶುಭ್ಮನ್ ಗಿಲ್ ಸವಾಲನ್ನು ಉಡೀಸ್ ಮಾಡಿದ ಶಶಾಂಕ್ ಸಿಂಗ್
ಗುಜರಾತ್ ನೀಡಿದ 199 ರನ್ಗಳ ಟಾರ್ಗೆಟ್ ಅನ್ನು ಪಂಜಾಬ್ ತಂಡ ಉಡೀಸ್ ಮಾಡಿದೆ. ಬ್ಯಾಟ್ಸ್ಮನ್ ಶಶಾಂಕ್ ಸಿಂಗ್ ಇಂದು ತಂಡವನ್ನು ಗೆಲುವಿನ ಗೆರೆ ದಾಟಿಸಿಬಿಟ್ಟಿದ್ದಾರೆ. ಆ ಮೂಲಕ ಅಭಿಮಾನಿಗಳ ಕಣ್ಣಿಗೆ ಪಂಜಾಬ್ ಹೀರೋ ಎಂದೆನಿಸಿಕೊಂಡಿದ್ದಾರೆ.
ಶುಭ್ಮನ್ ನಾಯಕತ್ವದ ಗುಜರಾತ್ ತಂಡ ನೀಡಿದ 199 ರನ್ಗಳ ಬೆನ್ನು ಹತ್ತಿದ ಪಂಜಾಬ್ ತಂಡ ಆರಂಭದಲ್ಲಿ ಎಡವಿತು. ನಾಯಕ ಶಿಖರ್ ಧವನ್ 2ನೇ ಎಸೆತಕ್ಕೆ ಔಟ್ ಆಗುವ ಮೂಲಕ ತಂಡಕ್ಕೆ ನಿರಾಸೆ ಮೂಡಿಸಿದರು. ನಾಯಕನ ಜೊತೆಯಾಟಗಾರ ಜಾನಿ ಬೈರ್ಸ್ಟೋವ್ ಮೇಲೆ ನಂಬಿಕೆ ಇತ್ತಾದರು 13 ಎಸೆತಕ್ಕೆ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಪ್ರಭುಸಿಮ್ರಾನ್ ಸಿಂಗ್ 24 ಎಸೆತಕ್ಕೆ 5 ಬೌಂಡರಿ 1 ಸಿಕ್ಸ್ ಸಿಡಿಸುವ ಮೂಲಕ 35 ರನ್ಗೆ ಔಟ್ ಆದರು. ನೂರ್ ಅಹ್ಮದ್ ಎಸೆತಕ್ಕೆ ಕ್ಯಾಚ್ ನೀಡಿ ಪೆವಿಲಿಯನತ್ತ ನಡೆದರು. ಬಳಿಕ ಬಂದ ಸ್ಯಾಮ್ ಕರ್ರಾನ್ 5 ರನ್, ಸಿಖಂದರ್ 15 ರನ್ ಬಾರಿಸಿ ಔಟ್ ಆಗಿದರು.
ಇನ್ನು ಶಶಾಂತ್ ಸಿಂಗ್ ತಂಡವನ್ನು ಗೆಲುವಿನ ಲಯಕ್ಕೆ ಕೊಂಡೊಯ್ಯಲು ಪ್ರಮುಖ ಕಾರಣರಾದರು. ಅರ್ಧ ಶತಕ ಬಾರಿಸುವ ಮೂಲಕ ಗಮನ ಸೆಳೆದರು. ಶಶಾಂತ್ 29 ಎಸೆತಕ್ಕೆ 6 ಫೋರ್ 4 ಸಿಕ್ಸ್ ಸಿಡಿಸುವ ಮೂಲಕ 61 ರನ್ ಬಾರಿಸಿದರು. ಜಿತೇಶ್ ಶರ್ಮಾ 8 ಎಸೆತಕ್ಕೆ 2 ಸಿಕ್ಸ್ ಬಾರಿಸುವ ಮೂಲಕ 16 ರನ್ ನೀಡಿ ಔಟಾದರು.
ಅಶುತೋಶ್ ಶರ್ಮಾ 17 ಎಸೆತಕ್ಕೆ 31 ರನ್ ಬಾರಿಸಿ ಪೆವಿಲಿಯನತ್ತ ಸಾಗಿದರು. ನಂತರ ಬಂದ ಹರ್ಪ್ರೀತ್ 2 ಎಸೆತಕ್ಕೆ ಒಂದು ರನ್ ಬಾರಿಸುವ ಮೂಲಕ ಶಶಾಂತ್ ಸಿಂಗ್ ಜೊತೆಗೆ ಗೆಲುವಿನ ಕೇಕೆ ಹಾಕಿದರು.
ಇನ್ನು ಗುಜರಾತ್ ಬೌಲಿಗರಾದ ನೂರ್ ಅಹ್ಮದ್ 2 ವಿಕೆಟ್ ಕಿತ್ತರೆ, ಅಜ್ಮತುಲ್ಲ ಒಮರ್ಜೈ, ಉಮೇಶ್ ಯಾದವ್, ಮೋಹಿತ್ ಶರ್ಮಾ 1 ವಿಕೆಟ್ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ