newsfirstkannada.com

‘HDKಗೆ ಹುಚ್ಚು ಹಿಡಿಯೊದೊಂದೇ ಬಾಕಿ’- ಗುಬ್ಬಿ ಶಾಸಕ ಎಸ್.ಆರ್ ಶ್ರೀ‌ನಿವಾಸ್ ವ್ಯಂಗ್ಯ

Share :

14-08-2023

  ‘ಹೆಚ್.ಡಿ ಕುಮಾರಸ್ವಾಮಿ ದ್ವೇಷ ತುಂಬಿ ತುಳುಕುತ್ತಿರುವ ವ್ಯಕ್ತಿ’

  ದಳಪತಿ ಆರೋಪಗಳಿಗೆ ಕೌಂಟರ್ ಕೊಟ್ಟ ಗುಬ್ಬಿ ಕಾಂಗ್ರೆಸ್ ಶಾಸಕ

  ಕಮಿಷನ್ ಆರೋಪ ವಿಚಾರವಾಗಿ ಗುಡುಗಿದ S.R ಶ್ರೀ‌ನಿವಾಸ್

ತುಮಕೂರು: ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀ‌ನಿವಾಸ್ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೇಲೆ ನೇರವಾಗಿ ಆರೋಪ ಮಾಡಿದ್ದಾರೆ. ದ್ವೇಷ ತುಂಬಿ ತುಳುಕುತ್ತಿರುವ ವ್ಯಕ್ತಿ ಎಂದು ಹೇಳಿದ್ದಾರೆ.

ಗುಬ್ಬಿಯಲ್ಲಿ ಮಾತನಾಡಿದ ಎಸ್.ಆರ್ ಶ್ರೀ‌ನಿವಾಸ್, ಡಿ.ಕೆ.ಶಿವಕುಮಾರ್ ಮೇಲೆ ಕಮೀಷನ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ  ‘ಕೈ’ ನಾಯಕರ ಮೇಲೆ ಆರೋಪ ಮಾಡ್ತಾ ಇರೋರು ಯಾರು? ಮತ್ತೆ ನನ್ನ ಸಿಎಂ ಮಾಡ್ತಾರಂತ..? ಸಿಂಗಾಪುರದಲ್ಲಿ ಕೂತಿದ್ರು ಅಂತವರ ಆರೋಪಗಳಿಗೆ ಉತ್ತರ ಕೊಡುವುದು ಸರಿ ಅಲ್ಲ. ಹೆಚ್​ಡಿಕೆಗೆ ಹುಚ್ಚು ಹಿಡಿಯೊದೊಂದು ಬಾಕಿ ಇದೆ ಎಂದು ವ್ಯಂಗ್ಯವಾಡಿದ್ದಾರೆ.

ಏನಿದು ಘಟನೆ? 

ಕಾಂಬೋಡಿಯಾ ಪ್ರವಾಸ ಮುಗಿಸಿ ವಾಪಸ್ ಆದ ಮಾಜಿ ಸಿಎಂ ಕುಮಾರಸ್ವಾಮಿ ಏರ್‌ಪೋರ್ಟ್‌ನಲ್ಲಿ ರಾಜ್ಯದ ಸಚಿವರ ವಿರುದ್ಧ ಪ್ರತಿಕ್ರಿಯೆ ನೀಡಿದ್ದರು. ರಾಜ್ಯದ ಕೆಲವು ಸಚಿವರು, ನೀವು ವಿದೇಶದಲ್ಲಿ ಇದ್ಬಿಡಿ. ಎಲ್ಲಾ ವ್ಯವಸ್ಥೆ ಮಾಡಿಕೊಡ್ತೀವಿ ಅಂದಿದ್ರಲ್ಲ. ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನ ಬಿಟ್ಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಸಲಹೆ ಕೊಟ್ಟಿದ್ರಲ್ಲಾ. ಅದನ್ನ ಪಾಲಿಸಬೇಕಲ್ಲ, ಯಾಕೆಂದರೆ ಇಲ್ಲಿ ದರೋಡೆ ಮಾಡಿಕೊಂಡು ಕೂತವ್ರಲ್ಲಾ. ಮಾನ ಮಾರ್ಯಾದೆ ಇಲ್ಲದೆ. ಅವರಿಂದ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾ ನಾನು. ಆ ಪಾಪದ ಹಣ ತಗೊಂಡು ಹೋಗಬೇಕಾ ಎಂದು ಹೇಳಿದ್ದರು.

ನಂತರ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಇಟ್ಟಿದ್ದೆ. ದೇಶ ಸುತ್ತು, ಕೋಶ ಓದು ಅಂತಾ ಹಿರಿಯರ ಗಾದೆ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಅಂತಾ ತಿಳ್ಕೊಬೇಕಲ್ಲಾ. ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ಲಾ. ಅದ್ದರಿಂದ ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ. ಅಲ್ಲಿ 18-20 ಎಕರೆಯಲ್ಲಿ ಕಟ್ಟಿರುವ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ, ಅಂತ ದೇವಸ್ಥಾನ. ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನ. ಇತ್ತೀಚೆಗೆ ಆ ದೇಶ ಆರ್ಥಿಕವಾಗಿ ಬೆಳೆಯುತ್ತಾ ಇದೆ. ಒಂದು ಕಾಲದಲ್ಲಿ ಹಲವಾರು ಸಮಸ್ಯೆ ಇತ್ತು. ಈಗ ತುಂಬ ಅದ್ಭುತವಾಗಿ ಆ ದೇಶ ಬೆಳಿಯುತ್ತಾ ಇದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಹೆಚ್​ಡಿಕೆ, ಕಾಂಬೋಡಿಯಾದಲ್ಲಿ ಜಿಡಿಪಿ 7.7 ಅಂತಾ ಮೊನ್ನೆ ಮಂತ್ರಿಯೊಬ್ಬರು ಹೇಳ್ತಾ ಇದ್ರು. ನಮ್ಮಲ್ಲಿ ಹಣದ ಕೊರತೆ ಇಲ್ಲ, ಈಗ ಲೂಟಿ ಮಾಡ್ತಾವ್ರಲ್ಲ. ಈಗ ಒಳಗಡೆ ಟಿವಿಯಲ್ಲಿ ಮಧ್ಯಪ್ರದೇಶ 40% ಸರ್ಕಾರ ಅಂತಾ ಹೇಳಿ ಪೋಸ್ಟರ್ ಹಾಕ್ಕೊಂಡಿದ್ದಾರೆ. ದೇಶ ಎಲ್ಲಿಗೆ ತಗೊಂಡು ಹೋಗ್ತಿದ್ದಾರೆ. ಹಲವಾರು ಬಡತನದ ದೇಶಗಳು ಬೆಳಿತಾ ಇವೆ. ಈಗ ಸಮಯ ಸಿಕ್ಕಿದೆ. ಸ್ವಲ್ಪ ಬೇರೆ ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಅಭಿವೃದ್ಧಿ ಬಗ್ಗೆ ನೋಡ್ತಾ ಇದ್ದೀನಿ ಎಂದು ಹೇಳಿದ್ದರು.

ಇದೀಗ ಈ ವಿಚಾರವಾಗಿ ಗುಬ್ಬಿ ಶಾಸಕ ಎಸ್.ಆರ್ ಶ್ರೀ‌ನಿವಾಸ್ ಅವರು ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದು, ಅವರ ಬಗ್ಗೆ ವ್ಯಂಗ್ಯ ನುಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘HDKಗೆ ಹುಚ್ಚು ಹಿಡಿಯೊದೊಂದೇ ಬಾಕಿ’- ಗುಬ್ಬಿ ಶಾಸಕ ಎಸ್.ಆರ್ ಶ್ರೀ‌ನಿವಾಸ್ ವ್ಯಂಗ್ಯ

https://newsfirstlive.com/wp-content/uploads/2023/08/SR-Srinivas-rao.png

Load More