ಕಳ್ಳನಾದ ಸಮಾಜ ಸೇವಕನ ಕಥೆ ತುಂಬಾ ದುರಾದೃಷ್ಟ!
ವಿಚಾರಣೆ ವೇಳೆ ಆರೋಪಿಯ ಸಾಧನೆ ತಿಳಿದು ಪೊಲೀಸರು ಶಾಕ್
ಸಾಧಕನ ಬಾಳಿಗೆ ಹೊಸ ದಾರಿದೀಪವಾದ ಬೆಂಗಳೂರು ಪೊಲೀಸ್
ಬೆಂಗಳೂರು: ಆತ ಇಡೀ ದೇಶವನ್ನೇ ಸೈಕಲ್ನಲ್ಲೇ ಸುತ್ತಿದ್ದ ಧೀರ. ಮಾರಕ ಖಾಯಿಲೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ ಹೀರೋ. ಭಷ್ಟಾಚಾರ ತಡೆಗೂ ಸೈಕಲ್ ಏರಿದ ಬೆಂಗಳೂರಿನ ಬಹದ್ದೂರ್. ಹಲವು ಗಣ್ಯರಿಂದ ಸನ್ಮಾನ ಮಾಡಿಸಿಕೊಂಡ ಗಿನ್ನಿಸ್ ವೀರ. ಆದ್ರೆ ಅದೇ ಧೀರ, ವೀರ ಶೂರನ ಈಗಿನ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನಿಸುತ್ತೆ. ಬೀದಿಗೆ ಬಿದ್ದ ಸಮಾಜ ಸೇವಕ ಕಳ್ಳನಾಗಿದ್ದೇ ದುರಾದೃಷ್ಟ.
ಕೈಯಲ್ಲಿ ಜೋಳಿಗೆ ಚೀಲ, ಮೈ ಮೇಲೆ ಕಾವಿ ಬಟ್ಟೆ, ತಲೆಯಲ್ಲಿ ಟೋಪಿ, ಸರತಿ ಸಾಲಲ್ಲಿ ನಿಂತಿರೋ ಈ ಜೀವವೇ ಗಿನ್ನಿಸ್ ದಾಖಲೆ ಬರೆದ ಸೈಕಲ್ ಸವಾರ. ತನ್ನ ಕಷ್ಟ, ದುಃಖವನ್ನ ಒಂದ್ಸಲ ದೂರ ಮಾಡು. ನೆಮ್ಮದಿಯ ನಿದ್ದೆ ಕೊಡು ಅಂತ ಭಕ್ತಿ ಭಾವದಿಂದ ನಮಿಸ್ತ. ಚಿಲ್ಲರೆ ಹಣವನ್ನ ಕಾಣಿಕೆಯನ್ನಾಗಿ ಹಾಕ್ತಾನೆ. ಎರಡ್ಮೂರು ನಿಮಿಷ ಆಗ್ತಿದ್ದಂತೆ ಸೀನ್ ಕಂಪ್ಲೀಟ್ ಚೇಂಜ್. ಕೈ ಮುಗಿದ ದೇವಸ್ಥಾನದಲ್ಲಿನ ದೇವರ ಬೆಳ್ಳಿ ಮುಕುಟವನ್ನೇ ಜೋಳಿಗೆಗೆ ಇಳಿಸಿಕೊಂಡು ಜೈ ಅಂತಾ ಹೊರಟೇ ಬಿಡ್ತಾನೆ. ವಿವಿ ಪುರಂ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಪ್ಪ ಸರ್ಕಲ್ನಲ್ಲಿರುವ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.
ಕ್ಷೇತ್ರಕ್ಕೆ ಭಕ್ತನ ಸೋಗಿನಲ್ಲಿ ಬಂದಿದ್ದ ಗಿನ್ನಿಸ್ ದಾಖಲೆಯ ರವಿನಾಯ್ಡು. ಒಂದೂವರೆ ಕೆಜಿ ತೂಕದ ದೇವರ ಮುಕುಟವನ್ನ ಎಗರಿಸಿ ಎಸ್ಕೇಪ್ ಆಗಿದ್ದ. ಈ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು 100 ಸಿಸಿಟಿವಿ ಪರಿಶೀಲಿಸಿ ಆರೋಪಿ ರವಿ ನಾಯ್ಡು ನನ್ನ ಬಂಧಿಸಿದ್ರು, ಆದ್ರೆ ಆತ ಯಾರು ಅಂತ ತಿಳಿತೋ ಪೊಲೀಸರೇ ಶಾಕ್ ಆಗಿದ್ದಾರೆ.
ಮೂಲತಃ ಬೆಂಗಳೂರಿನವರಾದ ರವಿ ನಾಯ್ಡು ಆಲಿಯಾಸ್ ರಾಮ್ ಬಹದ್ದೂರ್ ನಾಯ್ದು 2000ರಿಂದ 2006ರವರೆಗೂ ಸೈಕಲ್ ಏರಿ ದೇಶ ಸುತ್ತುತ್ತಿದ್ರು, ಮನೆಯವರನ್ನ ಕಳೆದ ಕಂಡ ರಾಮ್ HIV ಜನಜಾಗೃತಿ ಮೂಡಿಸುತ್ತಾ 150 ಕೆಜಿಯ ಸೈಕಲ್ನಲ್ಲಿ ಇಡೀ ದೇಶ ಸಂಚರಿಸ್ತಿದ್ರು. 2016ರಲ್ಲಿ ಸೈಕಲ್ ಸಾಧಕನಿಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ ಬೈಕ್ ಒಂದನ್ನ ಗಿಫ್ಟ್ ಮಾಡಿದ್ರಂತೆ. ಹೀಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತ ಸುತ್ತಾಡುತ್ತಿದ್ದವನಿಗೆ ಹಲವು ಗಣ್ಯರು ಸನ್ಮಾನವನ್ನೂ ಮಾಡಿದ್ದಾರೆ. ವಿಶ್ವ ಪರ್ಯಟನೆಗೆ ಹೊರಟ ರವಿ ನಾಯ್ಡು ಬಳಿಕ ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ. ನೆರವಿಗೆ ಯಾರೋಬ್ಬರೂ ಬಾರದೇ ಚಿಂದಿ ಆಯುತ್ತಾ ಬಂದ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ತಿದ್ರು. ಹೀಗಿದ್ದ ರಾಮ್ ಕಳ್ಳತನದ ಹಾದಿ ಹಿಡಿದು ಅರೆಸ್ಟ್ ಆಗಿದ್ರು, ಬಂಧಿತ ರವಿ ನಾಯ್ಡುನಿಂದ ಒಂದೂವರೆ ಕೆಜಿ ತೂಕದ ಬೆಳ್ಳಿ ದೇವರ ಮುಕುಟ ವಶಕ್ಕೆ ಪಡೆದುಕೊಂಡು ವಿಚಾರಣೆಯನ್ನೂ ನಡೆಸಿದ್ದಾರೆ.
ಇದರಲ್ಲಿ ಖುಷಿ ಪಡುವ ವಿಚಾರ ಏನಾಪ್ಪ ಅಂದ್ರೆ ಜೈಲು ಸೇರಿ ಬಿಡುಗಡೆಯಾದ ರವಿನಾಯ್ಡುಗೆ ವಿವಿ ಪುರಂ ಪೊಲೀಸರು ಠಾಣೆಯಲ್ಲೇ ಇರಿಸಿಕೊಂಡು ಊಟ, ವಸತಿ ನೀಡಲು ಮುಂದಾಗಿದ್ದಾರೆ. ಆರೋಪಿಯಾಗಿ ಅಲ್ಲ, ಓರ್ವ ಕೆಲಸಗಾರನಾಗಿ. ಅದೇನೆ ಇರಲಿ ಇಷ್ಟು ದಿವಸ ಕತ್ತಲಲ್ಲಿ ಬದುಕಿದ್ದ ವೀರನ ಬಾಳಲ್ಲಿ ಪೊಲೀಸರು ಬೆಳಕು ಚೆಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ