newsfirstkannada.com

‘ನಾನು ಇಸ್ರೋ ವಿಜ್ಞಾನಿ, ಲ್ಯಾಂಡರ್ ವಿನ್ಯಾಸ ಮಾಡಿದ್ದು ನಾನೇ’ ಎಂದು ಸಂದರ್ಶನ ಕೊಡ್ತಿದ್ದ ಕಿಲಾಡಿ ಲಾಕ್..!

Share :

Published August 30, 2023 at 9:29am

    ವಿಜ್ಞಾನಿಗಳ ಶ್ರಮದ ಕ್ರೆಡಿಟ್ ಪಡೆಯೋದೇ ಈತನ ಕೆಲಸ

    ನಕಲಿ ವಿಜ್ಞಾನಿ ಏನೆಲ್ಲ ಸುಳ್ಳು ಹೇಳ್ಕೊಂಡು ಓಡಾಡ್ತಿದ್ದ ಗೊತ್ತಾ?

    ಗುಜರಾತ್‌ನ ಸೂರತ್‌ನಲ್ಲಿ ಆರೋಪಿ ಬಂಧಿಸಿದ ಪೊಲೀಸರು

ನಾನು ಇಸ್ರೋ ವಿಜ್ಞಾನಿ, ಚಂದ್ರಯಾನ-3ರ ಲ್ಯಾಂಡರ್ ವಿನ್ಯಾಸ ಮಾಡಿದ್ದು ನಾನೇ ಅಂತಾ ಸುಳ್ಳು ಹೇಳ್ಕೊಂಡು ಸಂದರ್ಶನ ಕೊಡ್ತಿದ್ದ 40 ವರ್ಷದ ವ್ಯಕ್ತಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಮೆಹುಲ್ ತ್ರಿವೇದಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಸ್ರೋದ ಪುರಾತನ ವಿಜ್ಞಾನ ಅಪ್ಲಿಕೇಶನ್ ಇಲಾಖೆಯಲ್ಲಿ ಸಹಾಯಕ ಮುಖ್ಯಸ್ಥರಾಗಿರುವುದಾಗಿ ನಕಲಿ ನೇಮಕಾತಿ ಪತ್ರವನ್ನೂ ಈತ ಹೊಂದಿದ್ದ. ನನ್ನ ಟ್ಯೂಷನ್ ತರಗತಿಯನ್ನು ಜನಪ್ರಿಯಗೊಳಿಸಲು ಪ್ರಚಾರಕ್ಕಾಗಿ ವಿಜ್ಞಾನಿ ಅಂತಾ ಸುಳ್ಳು ಹೇಳಿದ್ದಾಗಿ ಪೊಲೀಸರ ಮುಂದೆ ತ್ರಿವೇದಿ ಬಾಯ್ಬಿಟ್ಟಿದ್ದಾನೆ.

ಅಂದ್ಹಾಗೆ ಭಾರತದ ಚಂದ್ರಯಾನ-3 ಜುಲೈ 14 ರಂದು ಉಡಾವಣೆಗೊಂಡಿತ್ತು. ಅದು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್​ ಲ್ಯಾಂಡ್ ಆಗಿದೆ. ಸಾಫ್ಟ್​ ಲ್ಯಾಂಡ್ ಬೆನ್ನಲ್ಲೇ, ಇಸ್ರೋ ವಿಜ್ಞಾನಿಗಳು ಚಂದ್ರನ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಏಕೈಕ ದೇಶ ಭಾರತವಾಗಿದ್ದು, ಇಡೀ ವಿಶ್ವವೇ ಕೊಂಡಾಡುತ್ತಿದೆ. ವಿಜ್ಞಾನಿಗಳ ಈ ಶ್ರಮದ ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದ ಆರೋಪಿ ಕೊನೆಗೂ ಲಾಕ್ ಆಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಇಸ್ರೋ ವಿಜ್ಞಾನಿ, ಲ್ಯಾಂಡರ್ ವಿನ್ಯಾಸ ಮಾಡಿದ್ದು ನಾನೇ’ ಎಂದು ಸಂದರ್ಶನ ಕೊಡ್ತಿದ್ದ ಕಿಲಾಡಿ ಲಾಕ್..!

https://newsfirstlive.com/wp-content/uploads/2023/08/CHANDRAYAN.jpg

Load More