Advertisment

WATCH: ಆಲಿಕಲ್ಲು ಮಳೆಗೆ ತತ್ತರಿಸಿದ ಗುಜರಾತ್ ಜನತೆ.. ಸಿಡಿಲು ಬಡಿದು ಕನಿಷ್ಠ 20 ಮಂದಿ ಸಾವು

author-image
admin
Updated On
WATCH: ಆಲಿಕಲ್ಲು ಮಳೆಗೆ ತತ್ತರಿಸಿದ ಗುಜರಾತ್ ಜನತೆ.. ಸಿಡಿಲು ಬಡಿದು ಕನಿಷ್ಠ 20 ಮಂದಿ ಸಾವು
Advertisment
  • ಅಕಾಲಿಕ ಮಳೆಯಿಂದ ಗುಜರಾತ್‌ನ ಹಲವೆಡೆ ಭಾರೀ ಅವಾಂತರ
  • ರಕ್ಷಣಾ ಕಾರ್ಯಾಚರಣೆಗೆ ಕರೆ ಕೊಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಹಲವು ಜಿಲ್ಲೆಗಳಲ್ಲಿ 16 ಗಂಟೆಗಳಲ್ಲಿ 50-117 ಮಿಲಿ ಮೀಟರ್‌ ಮಳೆ

ಅಹಮದಾಬಾದ್: ಅಕಾಲಿಕ ಮಳೆ ಗುಜರಾತ್‌ನ ಹಲವೆಡೆ ಭಾರೀ ಅವಾಂತರ ಸೃಷ್ಟಿಸಿದೆ. ಕಳೆದ ಎರಡು ದಿನದಲ್ಲಿ ಸುರಿದ ಆಲಿಕಲ್ಲು ಮಳೆ ಹಾಗೂ ಸಿಡಿಲು ಬಡಿದು 20 ಮಂದಿ ಸಾವನ್ನಪ್ಪಿದ್ದಾರೆ. ಮಳೆರಾಯನ ಅಬ್ಬರಕ್ಕೆ ಗುಜರಾತ್ ರಾಜ್ಯದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೈಸರ್ಗಿಕ ವಿಕೋಪಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

Advertisment

ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ಗುಜರಾತ್‌ನ ವಿವಿಧ ನಗರಗಳಲ್ಲಿ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ. ಗುಡುಗು ಮತ್ತು ಸಿಡಿಲಿನಿಂದಾಗಿ ಜನರು ಸಾವನ್ನಪ್ಪಿದ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ತುಂಬಲಾರದ ನಷ್ಟಕ್ಕಾಗಿ ನಾನು ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಗುಜರಾತ್‌ನ ಸ್ಥಳೀಯ ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಭರವಸೆ ನೀಡಿದ್ದಾರೆ.


">November 26, 2023

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ಗುಜರಾತ್‌ನ ವಿವಿಧ ಜಿಲ್ಲೆಗಳಿಂದ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ. ದಾಹೋಡ್‌ನಲ್ಲಿ ನಾಲ್ವರು, ಭರೂಚ್‌ನಲ್ಲಿ ಮೂವರು, ತಾಪಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಹಮದಾಬಾದ್, ಅಮ್ರೇಲಿ, ಬನಸ್ಕಾಂತ, ಬೊಟಾಡ್, ಖೇಡಾ, ಮೆಹ್ಸಾನಾ, ಪಂಚಮಹಲ್, ಸಬರ್ಕಾಂತ, ಸೂರತ್, ಸುರೇಂದ್ರನಗರ, ಮತ್ತು ದೇವಭೂಮಿ ದ್ವಾರಕಾದಲ್ಲಿ ತಲಾ ಒಬ್ಬರು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

Advertisment

ಎಸ್‌ಇಒಸಿ ಮಾಹಿತಿ ಪ್ರಕಾರ ಗುಜರಾತ್‌ನ ಸೂರತ್, ಸುರೇಂದ್ರನಗರ, ಖೇಡಾ, ತಾಪಿ, ಭರೂಚ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ 16 ಗಂಟೆಗಳಲ್ಲಿ 50-117 ಮಿಲಿ ಮೀಟರ್‌ ಮಳೆಯಾಗಿದೆ. ಇಂದಿನಿಂದ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ  ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment