/newsfirstlive-kannada/media/post_attachments/wp-content/uploads/2024/11/CHANDRASHEKHAR-KAMBAR.jpg)
ನಮ್ಮ ಭಾರತ ದೇಶದಲ್ಲಿ ಗುರುವಿನ ಮೇಲೆ ಇರುವ ಭಕ್ತಿ ಎಂದಿಗೂ ಕಡಿಮೆಯಾಗುವಂತದ್ದಲ್ಲ ಎಂದು ಜ್ಞಾನಪೀಠ ಪುರಸ್ಕೃತ ನಾಡೋಜ ಡಾ.ಚಂದ್ರಶೇಖರ ಕಂಬಾರ ಅವರು ಹೇಳಿದ್ದಾರೆ. ಘಟಪ್ರಭಾದ ಎಸ್​ಡಿಟಿ ಹೈಸ್ಕೂಲ್​ನ 1995ನೇ ವರ್ಷದ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ ಅವರು, ಅನ್ನಕ್ಕೆ ದಾರಿ ದೀಪವಾದ ಗುರುಗಳನ್ನು ದೇವರೆಂದು ಭಾವಿಸುತ್ತೇವೆ. ದೇವರಿಗೆ ಸಮಾನನಾದ ಗುರುಗಳನ್ನು 30 ವರ್ಷಗಳ ನಂತರವೂ ತಾವೆಲ್ಲರೂ ಸೇರಿ ನೆನಪಿಸಿಕೊಂಡು ಗೌರವಿಸುತ್ತಿರುದೇ ಈ ನೆಲದ ನಾಡಿನ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದರು.
ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಬೈಲಹೊಂಗಲ ಎ ಸಿ ಪ್ರಭಾವತಿ ಪಕೀರಪೂರ ಅವರು ನಡೆದು ಬಂದ ಹಾದಿ ಮರೆತು ನಡೆಯುವುದು ಆದರ್ಶವಲ್ಲ. ಹಳೇ ವಿದ್ಯಾರ್ಥಿಗಳಿಗೆ ಶಾಲೆ, ಗುರುಗಳ ಮೇಲಿರುವ ಪ್ರೀತಿ ನಿಜಕ್ಕೂ ಶ್ಲಾಘನೀಯ ಎಂದು ಹಳೆಯ ವಿದ್ಯಾರ್ಥಿಗಳನ್ನು ಹಾಡಿ ಹೊಗಳಿದರು .
ಇದನ್ನೂ ಓದಿ:ಕಲ್ಯಾಣ ಚಾಲುಕ್ಯರ ಎರಡು ಶಾಸನ ಪತ್ತೆ.. ಅವುಗಳಲ್ಲಿ ಏನು ಬರೆಯಲಾಗಿದೆ..?
/newsfirstlive-kannada/media/post_attachments/wp-content/uploads/2024/11/CHANDRASHEKHAR-KAMBAR-1.jpg)
30 ವರ್ಷಗಳ ನಂತರದಲ್ಲಿಯೂ ಕೂಡ ಹಳೆ ವಿದ್ಯಾರ್ಥಿಗಳು ನಮ್ಮ ಶಾಲೆ ಎಂದು ಬಂದು ಈ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ವಿದ್ಯಾರ್ಥಿಗಳ ಸಂಘವನ್ನು ಅಭಿನಂದಿಸಿದ ಶ್ರೀ ಕ್ಷೇತ್ರ ಅರಭಾವಿ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಹಳೆಯ ವಿದ್ಯಾರ್ಥಿಗಳನ್ನು ಕುರಿತು ಆಶೀರ್ವಚನ ನೀಡಿ, ಈ ಸಂಘದ ಮೂಲಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿ ಸುಗಮವಾಗಲಿ ಎಂದು ಆಶೀರ್ವದಿಸಿದರು.
/newsfirstlive-kannada/media/post_attachments/wp-content/uploads/2024/11/CHANDRASHEKHAR-KAMBAR-1-1.jpg)
ಇನ್ನು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಕೆ.ಎಸ್​. ನಾಗರಾಜ್ ಮಾತನಾಡಿ ಸಂಘ ಮತ್ತು ಸಂಸ್ಥೆ ಮಠ ಹಾಗೂ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ತರಬೇತಿ ಹೀಗೆ ಹಲವಾರು ಶಾಶ್ವತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೈಸ್ಕೂಲ್​ನಲ್ಲಿ ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಸಮಾರಂಭದ ಪ್ರಮುಖ ಘಟ್ಟವಾದ ಗುರುವಂದನೆಗೆ ಸುಮಾರು 30 ವರ್ಷಗಳಲ್ಲಿ ಪಾಠ ಮಾಡಿದ್ದ ನಿವೃತ್ತ ಶಿಕ್ಷಕರು, ಉಪನ್ಯಾಸಕರನ್ನು ಪ್ರೀತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us