newsfirstkannada.com

ಮಚ್ಚು ಬಿಟ್ಟು ನೆಮ್ಮದಿ ಬೇಕು ಎಂದವನ ಮೇಲೆ ಲಾಂಗ್​ನಿಂದ ಹಲ್ಲೆ; ಕೊಲೆ ಯತ್ನಕ್ಕೆ ಕಾರಣವೇನು?

Share :

05-09-2023

  ಮಚ್ಚು ಬಿಟ್ಟು ನೆಮ್ಮದಿ ಬೇಕು ಎಂದವನಿಗೆ ಮುಹೂರ್ತ ಫಿಕ್ಸ್​​​!

  ಹೊಟೆಲ್​​ ಒಂದರಲ್ಲಿ ಡೆಡ್ಲಿ ಅಟ್ಯಾಕ್,ಕೂಡಲೇ ಆಸ್ಪತ್ರೆಗೆ ದಾಖಲು! ​​​

  ಬೆಂಗಳೂರಲ್ಲಿ ತಲೆಮರೆಸಿಕೊಳ್ಳಲು ಬಂದ ಗುರುಸ್ವಾಮಿಗೆ ಸ್ಕೆಚ್​​​!

ಬೆಂಗಳೂರು: ಎರಡು ದಶಕಗಳ ದ್ವೇಷ. ಎರಡು ದಶಕದಷ್ಟು ಮಾರಣಹೋಮ. ಅವತ್ತು ಮಧುರೈನ ಗಲ್ಲಿ ಗಲ್ಲಿಗಳಲ್ಲಿ ಶುರುವಾಗಿದ್ದ ರಕ್ತಚರಿತ್ರೆ. ಬೆಂಗಳೂರಿನ ಹೋಟೆಲ್​​ ಒಂದರ ಮೂಲೆಗೂ ತಲುಪಿದೆ. ಪ್ಲಾನ್​​ ಮಾಡಿ ತಮಿಳುನಾಡಿನ ಗ್ಯಾಂಗ್​​ಸ್ಟರ್​​​​ ಮೇಲೆ ಭೀಕರ ದಾಳಿ ನಡೆದಿದೆ. ನೆತ್ತರು ಕೋಡಿ ಹರಿಸುವವನ ಅಂತ್ಯ ನೆತ್ತರಲ್ಲೇ ಅನ್ನೋದಕ್ಕೆ ಈ ದಿನದ ಈ ಸ್ಟೋರಿಯೇ ಸಾಕ್ಷಿ.

ಮಧುರೈ ನಟೋರಿಯಸ್ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್!

ಮಧುರೈನ ಬೀದಿಯಲ್ಲಿ ಶುರುವಾಗಿದ್ದ ರಕ್ತಚರಿತ್ರೆ, ಆ ಕಾಲಕ್ಕೆ ಇಡೀ ರಾಜಕೀಯ ವಲಯದಲ್ಲಿ, ತಮಿಳುನಾಡಲ್ಲಿ ನಡುಕ ಹುಟ್ಟಿಸಿದ್ದವ ಈ ವಿ.ಕೆ. ಗುರುಸ್ವಾಮಿ ಆಡಳಿತರೂಢ ಡಿಎಂಕೆ ಪಕ್ಷದ ಪ್ರಬಲ ನಾಯಕ ಎಂ.ಕೆ ಅಳಗಿರಿ ಆಪ್ತ ಕೂಡ, ಎಷ್ಟೋ ಶಿರಚ್ಚೇದನಗಳು, ಎಷ್ಟೋ ಅಟ್ಯಾಕ್​ಗಳು, ಅದೆಷ್ಟೋ ಹಾಫ್​​​ ಮರ್ಡರ್​​​ಗಳು, ಇವೆಲ್ಲವೂ ಪಾಪದ ಮೂಟೆಯಂತೆ ಗುರುಸ್ವಾಮಿ ಬೆನ್ನತ್ತಿದ್ದವು. ಈತನ ದ್ವೇಷಕ್ಕೆ ದಶಕಗಳ ಇತಿಹಾಸ ಇದೆ. ಹಾಗೆ ಎರಡು ದಶಕದಷ್ಟು ಹತ್ಯೆಗಳ ಲಿಸ್ಟ್​​ ಇದೆ. ಇನ್ನೂ ಮುಂದೆ ಈ ರಕ್ತಪಾತವೇ ಸಾಕು ಅಂತ ಶಸ್ತ್ರಗಳನ್ನ ಸೈಡ್​​ಗೆ ಇಟ್ಟು, ನೆಮ್ಮದಿಯ ಬದುಕು ಬೇಕು ಅಂತ ಬೆಂಗಳೂರು ಸೇರಿಕೊಂಡವನಿಗೆ ನೆತ್ತರಿನ ವಾಸನೆ ಹಿಡಿದು ಶತ್ರುತ್ವ ಬೆನ್ನಿಂದೆನೇ ಬಂದಿತ್ತು. ತಮಿಳುನಾಡಿನ ಈ ಸೇಡಿನ ಪಾತಕನಿಗೆ ಬೆಂಗಳೂರಿನ ಬಾಣಸವಾಡಿ ಕೆಫೆಯಲ್ಲಿ ಮುಹೂರ್ತ ಇಡಲಾಗಿತ್ತು. ಎಲ್ಲಾ ಬಿಟ್ಟವನ ಮೇಲೆ ಹಳೆಯ ಹಗೆ ಸಾಧಿಸಲು ಅಲ್ಲೇ ದ್ವೇಷದ ಹೆಡೆ ಎತ್ತಿ ನಿಂತಿತ್ತು. ಹೊಂಚಾಕಿ ಕೂತಿದ್ದ ಗ್ಯಾಂಗ್​​​​ ಗುರುಸ್ವಾಮಿ ಮೇಲೆ ಡೆಡ್ಲಿ ಅಟ್ಯಾಕ್​​​ ನಡೆದು ಹೋಗಿದೆ.

20ರ ಹರೆಯದಲ್ಲಿ ಉದ್ಯೋಗ ಅರಸಿ ಮಧುರೈಗೆ ವಲಸೆ!
ಮಾಜಿ ಸಿಎಂ ಕರುಣಾನಿಧಿ ಪುತ್ರನ ಆಪ್ತನಾಗಿ ನಂಬಿಕೆ!

ಗುರುಸ್ವಾಮಿಗೆ 20ರ ಹರೆಯ ಸಮಯದಲ್ಲೇ. ಉದ್ಯೋಗ ಅರಸಿ ಕಮುತಿಯಿಂದ ಮಧುರೈಗೆ ವಲಸೆ ಬಂದಿದ್ದನಂತೆ. ಆದರೆ ಮಧುರೈನ ಕೀರತುರೈನಲ್ಲಿ ಜೀವನದ ದಿಕ್ಕು ಬೇರೆ ಕಡೆ ತಿರುಗಿದೆ. ಮಾಜಿ ಸಿಎಂ ಕರುಣಾನಿಧಿ ಪುತ್ರ ಅಳಗಿರಿಯ ಆಪ್ತನಾಗಿ ನಂಬಿಕೆ ಗಳಿಸಿದ್ದ ಗುರುಸ್ವಾಮಿ. ವಿರೋಧಿ ಎಐಎಡಿಎಂಕೆನ ರಾಜಪಾಂಡಿಯನ್‌ ಜೊತೆಗೆ ಜಿದ್ದು ಶುರುವಾಗಿತ್ತು. 2001ರಲ್ಲಿ ರಾಜಕೀಯ ದ್ವೇಷ, ವೈಯಕ್ತಿಕ ಮಟ್ಟಕ್ಕೆ ತಿರುಗಿತ್ತು. ಅದೇ ದ್ವೇಷ ಗ್ಯಾಂಗ್‌ಸ್ಟರ್‌ ಲೋಕ ಸೃಷ್ಟಿಸೋಕೆ ಕಾರಣವಾಯ್ತು. ಅದೇ 2001ರಲ್ಲಿ ಮಧುರೈನಲ್ಲಿ ಪೋಸ್ಟರ್‌ ಅಂಟಿಸುವ ವಿಚಾರವಾಗಿ ಶುರುವಾದ ಗಲಾಟೆ, ಮುಂದೆ ನೆತ್ತರು ಕೋಡಿ ಹರಿಸುವ ಮಟ್ಟಕ್ಕೆ ತಿರುಗಿತ್ತು.

ಈಗ ಮಚ್ಚಿನ ಕುರುಪಿಗೆ ತುತ್ತಾದ ಈ 77 ವಯಸ್ಸಿನ ವಿ.ಕೆ. ಗುರುಸ್ವಾಮಿ. ಸಾಮಾನ್ಯ ವ್ಯಕ್ತಿಯಂತೂ ಅಲ್ಲ. ಫ್ಯಾಕ್ಷನಿಸಂಗೆ ಮತ್ತೆ ಕೆಂಡವನ್ನ ಸುರಿದು, ಬಿಳಿ ಪಂಚೆಯಲ್ಲಿ ಮಚ್ಚು ಹಿಡಿದು ಮಧುರೈನ ಗಲ್ಲಿ ಗಲ್ಲಿಗಳಲ್ಲಿ ಮರಣ ಶಾಸನ ಬರೆದ ನಟೋರಿಯಸ್​. ದ್ವೇಷದ ಕಿಚ್ಚಿಗೆ ತಲ ತಲಾಂತರದ ಇತಿಹಾಸ ಬರೆದ ಗ್ಯಾಂಗ್​ಸ್ಟರ್​​​. ವಯಸ್ಸಲ್ಲಿದ್ದಾಗ ಎಷ್ಟೋ ಅನಾಹುತಗಳಿಗೆ ಕಿಂಗ್​​ಪಿನ್​​ ಆಗಿದ್ದ. ಆದರೆ ಈಗ ಹೊಡಿಬಡಿ ವಯಸ್ಸಿಗೂ ಮುಪ್ಪು ಆವರಿಸಿತ್ತು. ಹೀಗಾಗಿ ಮುಪ್ಪಿನ ವಯಸ್ಸು ವಿಶ್ರಾಂತಿ ಬಯಸಿತ್ತು. ನೆಮ್ಮದಿಯ ಹಾದಿ ಹುಡುಕಿತ್ತು. ಆಗ 2001ರಲ್ಲಿ ಶುರುವಾದ ಈ ನಾನ್​​ಸ್ಟಾಪ್​​​ ವಾರ್​​ಗೆ 2 ದಶಕಗಳೇ ಉರುಳಿವೆ. ಹೀಗೆ ಉರುಳಿದ ದಿನಗಳಷ್ಟೇ ಹೆಣಗಳು ಕೂಡ ಉರುಳಿವೆ. ಗುರುಸ್ವಾಮಿ ಮತ್ತು ರಾಜಪಾಂಡಿಯನ್‌ ಗ್ಯಾಂಗ್‌ವಾರ್​​ನಲ್ಲಿ ಲೆಕ್ಕಕ್ಕೆ ಸಿಕ್ಕಿದ್ದು 20 ಜೀವಗಳ ಬಲಿಯಷ್ಟೇ. ಆದರೆ ಮರೆಯಲ್ಲಿ ಅದೆಷ್ಟೋ ಆಗಿವೆಯೋ ದೇವರೇ ಬಲ್ಲ. ಅದೆಷ್ಟರ ಮಟ್ಟಿಗೆ ದ್ವೇಷ ತಾಂಡವ ಆಡುತ್ತಿತ್ತು ಅನ್ನೋದಕ್ಕೆ ಇಲ್ಲಿ ನಡೆದ ಭೀಕರ ರಿವೇಂಜ್​​​ ಕೊಲೆಗಳೇ ಸಾಕ್ಷಿ.

ವಾನಪ್ರಸ್ತಕ್ಕಾಗಿ ಬೆಂಗಳೂರಿಗೆ ಬಂದವನು ಹೊಟೇಲ್​​​ನಲ್ಲಿ ಬ್ರೋಕರ್​​ ಜೊತೆ ಮನೆ ವಿಚಾರವಾಗಿ ಚರ್ಚೆಗೆ ಕುಳಿತಿದ್ದ. ಬೆಂಗಳೂರಿನ ಗಲ್ಲಿಗಳಲ್ಲಿ ತಲೆಮರೆಸಿಕೊಂಡು ಹೇಗೊ ಮುಂದಿನ ಬದುಕು ನಡೆಸುವ ಲೆಕ್ಕಾಚಾರದಲ್ಲಿದ್ದವನಿಗೆ. ಆ ದಿನವೇ ಕೊನೆ ದಿನ ಅಂತ ಅರಿವಾಗಲೇ ಇಲ್ಲ. ಜೊತೆಗಿದ್ದವರಿಂದಲೇ ಬೆನ್ನಿಗೆ ಚೂರಿ ಬೀಳುತ್ತೆ ಅಂತ ತಿಳಿಯಲೇ ಇಲ್ಲ. ಹೌದು ಜೊತೆಗಿದ್ದವರೇ ವಿರೋಧಿ ಪಡೆಗೆ ಮೆಸೇಜ್​​ ಪಾಸ್​​ ಮಾಡಿದ್ದರಂತೆ. ಮೆಸೇಜ್​​​​ ಸಿಕ್ಕಿದ್ದೇ ತಡ ಈಗ ನೀವು ನೋಡ್ತಿರುವ ಈ ರೀತಿ ಭಯಾನಕ ದಾಳಿ ಮಾಡಿಬಿಟ್ಟಿದ್ದರು. ಸುಮಾರು ಐದು ಮಂದಿ ಎಂಟ್ರಿಯಾಗಿ ಏಕಾಏಕಿ ಮಚ್ಚು ಬೀಸಿದ್ದಾರೆ.

ಅಟ್ಯಾಕ್​ನಲ್ಲಿ ಗುರುಸ್ವಾಮಿ ತಲೆಗೆ ಗಂಭೀರ ಗಾಯ ಆಗಿದೆ. ಹಲ್ಲೆಗೊಳಗಾದ ಗುರುಸ್ವಾಮಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸಿಪಿ ಭೀಮಾ‌ಶಂಕರ್ ಗುಳೇದ್​ರಿಂದ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಳೆದ 2018ರಿಂದ ಈ ಗ್ಯಾಂಗ್​ವಾರ್​ ಸ್ವಲ್ಪಮಟ್ಟಿಗೆ ಹದ್ದುಬಸ್ತಿಗೆ ತರಲಾಗಿತ್ತು. ಕಾರಣ ರಾಜಪಾಂಡಿಯನ್​​​ ಜೈಲು ಪಾಲಾಗಿದ್ದ. ಇತ್ತ, ಗುರುಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದ. ಈಗ ಗ್ಯಾಂಗ್​ನ ಲೀಡರ್​ ಮೇಲೆ ದಾಳಿ ಆಗಿರೋದು ಮಧುರೈನಲ್ಲಿ 2001ರ ರೀತಿ ಮತ್ತೆ ಲಾ ಆ್ಯಂಡ್​​ ಆರ್ಡರ್​ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಚ್ಚು ಬಿಟ್ಟು ನೆಮ್ಮದಿ ಬೇಕು ಎಂದವನ ಮೇಲೆ ಲಾಂಗ್​ನಿಂದ ಹಲ್ಲೆ; ಕೊಲೆ ಯತ್ನಕ್ಕೆ ಕಾರಣವೇನು?

https://newsfirstlive.com/wp-content/uploads/2023/09/death-44.jpg

Load More