newsfirstkannada.com

Gyanvapi Case: ವಾರಣಾಸಿ ಕೋರ್ಟ್​ನಿಂದ ಇವತ್ತು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು..!

Share :

21-07-2023

    ಎರಡೂ ಕಡೆ ವಾದವನ್ನು ಪೂರ್ಣಗೊಳಿಸಿರುವ ಕೋರ್ಟ್​

    ಎಎಸ್‌ಐ ಸಮೀಕ್ಷೆಯ ನಿರ್ಧಾರ ಇಂದು ಗೊತ್ತಾಗಲಿದೆ

    ಏನಿದು ಜ್ಞಾನವಾಪಿ ಮಸೀದಿ ಪ್ರಕರಣ?

ನವದೆಹಲಿ: ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಇವತ್ತು ಉತ್ತರ ಪ್ರದೇಶದ ವಾರಣಾಸಿ ಕೋರ್ಟ್​ನಿಂದ ಮಹತ್ವದ ತೀರ್ಪು ಪ್ರಕಟ ಆಗಲಿದೆ. ಮಸೀದಿಯ ಸಂಪೂರ್ಣ ಸಂಕೀರ್ಣವನ್ನು ವೈಜ್ಞಾನಿಕ ಪರೀಕ್ಷೆಗೆ (ಎಎಸ್‌ಐ ಸಮೀಕ್ಷೆ) ಒಳಪಡಿಸಬೇಕಾ? ಬೇಡವಾ ಅನ್ನೋದ್ರ ಬಗ್ಗೆ ಕೋರ್ಟ್​ ತೀರ್ಪು ನೀಡಲಿದೆ.

ಪ್ರಸಿದ್ಧ ಮಸಿದಿಯ ಒಳಗೆ ಹಿಂದೂ ದೇವರಿದ್ದು, ಈ ಹಿಂದೆ ಶಿವಲಿಂಗವೂ ದೊರೆತಿದೆ. ಆ ಹಿನ್ನಲೆ ಮಸೀದಿಯ ಪೂರ್ಣ ಪ್ರದೇಶವನ್ನು ವೈಜ್ಞಾನಿಕವಾಗಿ ಸರ್ವೇ ಮಾಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಆಗಿದೆ. ಭಾರತೀಯ ಪುರಾತತ್ವ ಇಲಾಖೆಯಿಂದ ಪರೀಕ್ಷೆ ನಡೆಸುವಂತೆ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಅರ್ಜಿಯ ವಿಚಾರಣೆಯನ್ನು ಜುಲೈ 14ರಂದು ಪೂರ್ಣಗೊಳಿಸಿರುವ ಕೋರ್ಟ್ ಇವತ್ತು ತೀರ್ಪು ಪ್ರಕಟಿಸಲಿದೆ. ಮಸೀದಿಗೆ ಸಂಬಂಧಿಸಿದ ಮುಸ್ಲಿಂ ಕಮಿಟಿ, ಐವರು ಮಹಿಳಾ ಭಕ್ತರು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ತನಿಖೆಯು ಅಗತ್ಯ ಇದೆ ಎಂದು ಹಿಂದೂ ಸಮೂದಾಯದ ಪರ ವಕೀಲರು ವಾದ ಮಾಡಿದ್ದರು. ಮತ್ತೊಂದು ಕಡೆ ಜ್ಞಾನವಾಪಿ ಮಸೀದಿ ಒಳಗೆ ಪತ್ತೆಯಾಗಿರುವ ಶಿವಲಿಂಗವನ್ನು ‘ಕಾರ್ಬನ್ ಡೇಟಿಂಗ್’ ಮೇ 12 ರಂದು ಕೋರ್ಟ್ ಆದೇಶ ನೀಡಿದೆ.

ಏನಿದು ಜ್ಞಾನವಾಪಿ ಪ್ರಕರಣ..?

ಈ ಸ್ಥಳವು ವರ್ಷಕ್ಕೆ ಒಮ್ಮೆ ಮಾತ್ರ ಪ್ರಾರ್ಥನೆಗೆ ತೆರೆಯುತ್ತದೆ. ಇಲ್ಲಿ ನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಹಳೆಯ ದೇವಸ್ಥಾನ ಸಂಕೀರ್ಣದೊಳಗೆ ಕಾಣಿಸುವ ಹಾಗೂ ಕಾಣಿಸದ ದೇವತೆಗಳಿಗೆ ಕೂಡ ಪೂಜೆಗೆ ಅನುಮತಿ ಕೊಡಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರು. ಆದರೆ ಇದು ದೇವಸ್ಥಾನವಲ್ಲ, ಇದು ಮಸೀದಿ, ಜೊತೆಗೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ ಎಂದು ಮುಸ್ಲೀಂರ ವಾದವಾಗಿದೆ. ಹೀಗಾಗಿ ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gyanvapi Case: ವಾರಣಾಸಿ ಕೋರ್ಟ್​ನಿಂದ ಇವತ್ತು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು..!

https://newsfirstlive.com/wp-content/uploads/2023/07/gyanvapi-case.jpg

Load More