newsfirstkannada.com

Big Breaking: ಮಧ್ಯಾಹ್ನ 2 ಗಂಟೆವರೆಗೆ ಜ್ಞಾನವಾಪಿ ಮಸೀದಿ ಸರ್ವೇ ಬೇಡ -ಸುಪ್ರೀಂ ಕೋರ್ಟ್​ನಿಂದ ಮಧ್ಯಂತರ ಆದೇಶ

Share :

24-07-2023

  ಜ್ಞಾನವಾಪಿ ಮಸೀದಿಗೆ ಟೈಟ್ ಸೆಕ್ಯೂರಿಟಿ

  ಸರ್ವೇ ಬಾಯ್ಕಟ್ ಮಾಡಿದ ಮಸೀದಿ ಆಡಳಿತ

  ಜ್ಞಾನವಾಪಿ ಮಸೀದಿ ವಿವಾದದ ಇತಿಹಾಸ ಏನು..?

ವಾರಣಾಸಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೇಯು ಇವತ್ತಿನಿಂದ ಆರಂಭವಾಗಲಿದೆ. ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ತಂಡವು (Archaeological Survey of India) 30 ಸದಸ್ಯರ ನೇತೃತ್ವದಲ್ಲಿ ಮಸೀದಿಯ ಸರ್ವೇ ಕಾರ್ಯ ನಡೆಸಲಿದೆ. ಪ್ರಾಚೀನ ಕಾಲದಲ್ಲಿ ಮಸೀದಿ ನಿರ್ಮಿಸಿದ್ದ ಸ್ಥಳದಲ್ಲಿ ಹಿಂದೂ ದೇಗುಲವಿತ್ತು. ಅದನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಆರೋಪ ಸತ್ಯವೇ? ಇಲ್ಲ, ಅದು ಸತ್ಯಕ್ಕೆ ದೂರವಾದ ಆರೋಪವೇ ಅನ್ನೋದು ಈ ಸರ್ವೇಯು ಸಾಕ್ಷಿ ನೀಡಲಿದೆ.

ಇದನ್ನು ವಿರೋಧಿಸಿ ಮಸೀದಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ತುರ್ತು ವಿಚಾರಣೆ ನಡೆಸಿ ಆದೇಶ ನೀಡಿರುವ ಸುಪ್ರೀಂ ಇವತ್ತು ಮಧ್ಯಾಹ್ನ 2ಗಂಟೆಯವರೆಗೆ ಸಮೀಕ್ಷೆ ಬೇಡ ಎಂದು ಮಧ್ಯಂತ ಆದೇಶ ನೀಡಿದೆ.

ಸರ್ವೇಯಲ್ಲಿ ಎಷ್ಟು ತಜ್ಞರು..?

30 ಎಎಸ್​ಐ (ASI) ಸದಸ್ಯರುಳ್ಳ ತಂಡವು ಈ ಸಮೀಕ್ಷೆಯಲ್ಲಿ, ಕೋರ್ಟ್​ ಮೊರೆ ಹೋಗಿದ್ದ ನಾಲ್ವರು ಮಹಿಳೆಯರು ಹಾಗೂ ಅವರ ಜೊತೆ ನಾಲ್ವರು ವಕೀಲರನ್ನು ಸರ್ವೇ ಸ್ಥಳಕ್ಕೆ ಕರೆದುಕೊಂಡು ಹೋಗಲಿದೆ. ಅವರ ಸಮಕ್ಷಮದಲ್ಲಿ ಸರ್ವೇ ನಡೆಸಲಿದೆ. ಸರ್ವೇಕಾರ್ಯ ಇವತ್ತಿನಿಂದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಸೀದಿ ಸುತ್ತಮುತ್ತ ಭಾರೀ ಭದ್ರತೆ ಒದಗಿಸಲಾಗಿದೆ. ಕಾಂಪ್ಲೆಕ್ಸ್​ನ 2 ಕಿಲೋ ಮೀಟರ್​ ಸುತ್ತಮುತ್ತ ಯಾವುದೇ ವಾಹನಗಳು ಓಡಾಡದಂತೆ ನಿಷೇಧಿಸಲಾಗಿದೆ.

ಬಾಯ್ಕಟ್​ ಹೇಳಿದ ಮಸೀದಿ ಆಡಳಿತ

ಮತ್ತೊಂದು ಕಡೆ ಮಸೀದಿಯ ಆಡಳಿತ ಮಂಡಳಿ ಸರ್ವೆಗೆ ವಿರೋಧಿಸಿ ಬಾಯ್​​​ಕಾಟ್ ಮಾಡಿದೆ. ಅಂಜುಮನ್ ಇಂಟೆಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮೌಲನಾ ಅಬ್ದುಲ್ ಬಟಿನ್ ನೋಮನಿ ಸರ್ವೇ ಬಗ್ಗೆ ಪ್ರತಿಕ್ರಿಯಿಸಿ, ನಾವು ಯಾರೂ ಕೂಡ ಭಾಗಿಯಾಗುತ್ತಿಲ್ಲ. ನಮಗೆ ಮಸೀದಿ ಸರ್ವೇಗೆ ಒಳಪಡಿಸುತ್ತಿರೋದು ಸರಿ ಕಾಣುತ್ತಿಲ್ಲ. ಅಲ್ಲಿ ಯಾವುದೇ ಹಿಂದೂ ವಿಗ್ರಹಗಳು ಇಲ್ಲ. ಹೀಗಾಗಿ ನಾವು ವಿರೋಧಿಸುತ್ತಿದ್ದೇವೆ ಎಂದಿದ್ದಾರೆ.

ಸುಪ್ರೀಂನಿಂದ ತುರ್ತು ವಿಚಾರಣೆ 

ಮಾತ್ರವಲ್ಲ, ಮಸೀದಿಯನ್ನು ಸರ್ವೇ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ವಾರಣಾಸಿ ಕೋರ್ಟ್​, ಸರ್ವೇಗೆ ಅವಕಾಶ ಮಾಡಿಕೊಟ್ಟಿದ್ದನ್ನು ವಿರೋಧಿಸಿ, ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಮಸೀದಿ ಸರ್ವೇ ಆರಂಭಕ್ಕೂ ಮೊದಲು ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ಮಸೀದಿ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ. ತುರ್ತಾಗಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ಮಧ್ಯಾಹ್ನ 2 ಗಂಟೆಯವರೆಗೆ ವಿಚಾರಣೆ ಬೇಡ ಎಂದು ಮಧ್ಯಂತರ ಆದೇಶ ನೀಡಿದೆ.

ಹೈಕೋರ್ಟ್​ ಏನ್ ಹೇಳಿದೆ..?

ಕಳೆದ ಶುಕ್ರವಾರ ತೀರ್ಪು ನೀಡಿದ್ದ ವಾರಣಸಿ ಕೋರ್ಟ್​ನ ನ್ಯಾಯಧೀಶ ಎಕೆ ವಿಶ್ವೇಶ್​, ಮಸೀದಿಯನ್ನು ಸಂಪೂರ್ಣವಾಗಿ ಸರ್ವೇ ಮಾಡಬೇಕು. 15 ದಿನಗಳ ಒಳಗೆ ಫೋಟೋ ಮತ್ತು ವಿಡಿಯೋ ಮೂಲಕ ಸರ್ವೇ ನಡೆಸಿ ಕೋರ್ಟ್​ಗೆ ಹಾಜರುಪಡಿಸಬೇಕು. ಅಂದರೆ ಆಗಸ್ಟ್ 4ಕ್ಕೆ ನಿಮ್ಮ ಸರ್ವೇ ರಿಪೋರ್ಟ್​ ನಮಗೆ ತಲುಪಬೇಕು ಎಂದು ಎಎಸ್​ಐ ತಂಡಕ್ಕೆ ನಿರ್ದೇಶನ ನೀಡಿದ್ದಾರೆ. ಮಾತ್ರವಲ್ಲ ಸರ್ವೇಯಲ್ಲಿ GPR ತಂತ್ರಜ್ಞಾನವನ್ನು (Ground Penetrating Radar technology)ಬಳಸಿಕೊಳ್ಳುವಂತೆಯೂ ಸೂಚಿಸಿದೆ.

ಜ್ಞಾನವಾಪಿ ಮಸೀದಿ ಪ್ರಕರಣ ಏನು..?

ಜ್ಞಾನವಾಪಿ ಮಸೀದಿ ಪ್ರಕರಣವು ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಕಾನೂನು ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. 1991ರಲ್ಲಿ ಮೊದಲ ಬಾರಿಗೆ ಹಿಂದೂ ಅರ್ಚಕರು ಪೂಜೆಗೆ ಅವಕಾಶ ಮಾಡಿಕೊಡುವಂತೆ ಕೋರಿ ಅಲ್ಲಿನ ಸಿವಿಲ್ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅವರ ಕಾಶಿ ವಿಶ್ವನಾಥ ದೇಗುಲದ ಭಾಗವನ್ನು ಕೆಡಗಿ ಮಸೀದಿಯನ್ನು ಕಟ್ಟಲಾಗಿದೆ ಎಂದು ವಾದಿಸಲಾಗಿತ್ತು. 1998ರಲ್ಲಿ ಅಲಹಾಬಾದ್ ಹೈಕೋರ್ಟ್​ ಇದರ ವಿಚಾರಣೆಗೆ ತಡೆ ನೀಡಿತ್ತು.

ಕಳೆದ ವರ್ಷ ವಾರಣಾಸಿ ಕೆಳ ನ್ಯಾಯಾಲಯವು ವಿಡಿಯೋಗ್ರಫಿಕ್ ಸರ್ವೇಗೆ ಆದೇಶ ನೀಡಿತ್ತು. ಇದನ್ನು ವಿರೋಧಿಸಿದ ಆಲ್​ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್​ ವಿರೋಧ ವ್ಯಕ್ತಪಡಿಸಿ ವಾರಣಸಿ ಹೈಕೋರ್ಟ್​ ಮೊರೆ ಹೋಗಿದ್ದರು. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬನು ಕಾಶಿ ವಿಶ್ವನಾಥ ದೇಗುಲವನ್ನು ಕೆಡವಿ, ಜ್ಞಾನವ್ಯಾಪಿ ಮಸೀದಿಯನ್ನು ಕೊಟ್ಟಿದ್ದಾನೆ ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ಮಸೀದಿ ಇರುವ ಜಾಗ ನಮ್ಮದು. ಪ್ರಾಚೀನ ಕಾಲದ ದೇವಾಲಯವನ್ನು ಕಡೆವಿ ಮಸೀದಿ ಕಟ್ಟಲಾಗಿದೆ. ಮಸೀದಿಯೊಳಗೆ ಇರುವ ಹಿಂದೂ ದೇವರ ವಿಗ್ರಹಗಳ ಪೂಜೆಗೆ ಸದಾಕಾಲ ಅವಕಾಶ ಮಾಡಿಕೊಡಬೇಕು ಎಂದು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಮಸೀದಿಯೊಳಗೆ ಹಿಂದೂ ದೇವರಂತೆ ಕಾಣಸಿಗುವ ವಿಗ್ರಹಗಳ ಪೂಜೆಗೆ ಮಸೀದಿಯ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿಕೊಂಡು ಬರ್ತಿದೆ.

ಹಿಂದೂಗಳ ವಾದವೇನು..?

ಸದ್ಯ ಈ ಸ್ಥಳವು ವರ್ಷಕ್ಕೆ ಒಮ್ಮೆ ಮಾತ್ರ ಪ್ರಾರ್ಥನೆಗೆ ತೆರೆಯುತ್ತದೆ. ಇಲ್ಲಿ ನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಹಳೆಯ ದೇವಸ್ಥಾನ ಸಂಕೀರ್ಣದೊಳಗೆ ಕಾಣಿಸುವ ಹಾಗೂ ಕಾಣಿಸದ ದೇವತೆಗಳಿಗೆ ಕೂಡ ಪೂಜೆಗೆ ಅನುಮತಿ ಕೊಡಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರು. ಆದರೆ ಇದು ದೇವಸ್ಥಾನವಲ್ಲ, ಇದು ಮಸೀದಿ, ಜೊತೆಗೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ ಎಂದು ಮುಸ್ಲೀಂರ ವಾದವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Big Breaking: ಮಧ್ಯಾಹ್ನ 2 ಗಂಟೆವರೆಗೆ ಜ್ಞಾನವಾಪಿ ಮಸೀದಿ ಸರ್ವೇ ಬೇಡ -ಸುಪ್ರೀಂ ಕೋರ್ಟ್​ನಿಂದ ಮಧ್ಯಂತರ ಆದೇಶ

https://newsfirstlive.com/wp-content/uploads/2023/07/GYANVAPI.jpg

Load More