newsfirstkannada.com

Breaking News: ಜ್ಞಾನವಾಪಿ ಸರ್ವೇಗೆ ಹೈಕೋರ್ಟ್​ನಿಂದಲೂ ಗ್ರೀನ್ ಸಿಗ್ನಲ್; ಮಸೀದಿಯ ಆಡಳಿತ ಮಂಡಳಿಗೆ ಹಿನ್ನಡೆ

Share :

03-08-2023

    ಅಲಹಾಬಾದ್ ಹೈಕೋರ್ಟ್​ನಿಂದ ಮಹತ್ವದ ತೀರ್ಪು

    ಮಸೀದಿಯ ASI ಸರ್ವೇಗೆ ತಡೆ ಇಲ್ಲ ಎಂದ ಕೋರ್ಟ್​

    ಜಿಲ್ಲಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಹೈಕೋರ್ಟ್​..!

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ಕೋರ್ಟ್​, ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಜೊತೆಗೆ ಮಸೀದಿಯ ಸಂಕೀರ್ಣವನ್ನು ವೈಜ್ಞಾನಿಕವಾಗಿ ಸಮೀಕ್ಷೆಗೆ ಒಳಪಡಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿದೆ.

ಕಳೆದ ಜುಲೈ 21 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ASI ಸರ್ವೇಗೆ ಅನುಮತಿ ನೀಡಿ ಆದೇಶ ನೀಡಿತ್ತು. ಅಂತೆಯೇ ಜುಲೈ 24 ರಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ತಂಡವು (Archaeological Survey of India) 30 ಸದಸ್ಯರ ನೇತೃತ್ವದಲ್ಲಿ ಮಸೀದಿಯ ಸರ್ವೇ ಕಾರ್ಯವನ್ನು ಆರಂಭಿಸಲಾಗಿತ್ತು. ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ಮೂಲಕ ಸರ್ವೇ ಶುರುವಾಗುತ್ತಿದ್ದಂತೆಯೇ ಮಸೀದಿಯ ಆಡಳಿತ ಮಂಡಳಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಬಳಿ ಮಸೀದಿ ಆಡಳಿತ ಮಂಡಳಿ ಮನವಿ ಮಾಡಿಕೊಂಡಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್​, ASI ಸರ್ವೇಗೆ ತಾತ್ಕಾಲಿಕ ತಡೆ ಕೊಟ್ಟು, ಮಸೀದಿ ಆಡಳಿತ ಮಂಡಳಿಗೆ ಗುಜರಾತ್​ನ ಅಲಹಾಬಾದ್​ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಸೂಚಿಸಿತ್ತು. ಜುಲೈ 27 ರಂದು ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ಇವತ್ತು, ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಮಾತ್ರವಲ್ಲ, ಎಎಸ್​ಐ ಸರ್ವೇ ನಡೆಸುವಂತೆ ಆದೇಶ ನೀಡಿದೆ.

ಜ್ಞಾನವಾಪಿ ಮಸೀದಿ ಪ್ರಕರಣ ಏನು..?

ಜ್ಞಾನವಾಪಿ ಮಸೀದಿ ಪ್ರಕರಣವು ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಕಾನೂನು ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. 1991ರಲ್ಲಿ ಮೊದಲ ಬಾರಿಗೆ ಹಿಂದೂ ಅರ್ಚಕರು ಪೂಜೆಗೆ ಅವಕಾಶ ಮಾಡಿಕೊಡುವಂತೆ ಕೋರಿ ಅಲ್ಲಿನ ಸಿವಿಲ್ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅವರ ಕಾಶಿ ವಿಶ್ವನಾಥ ದೇಗುಲದ ಭಾಗವನ್ನು ಕೆಡಗಿ ಮಸೀದಿಯನ್ನು ಕಟ್ಟಲಾಗಿದೆ ಎಂದು ವಾದಿಸಲಾಗಿತ್ತು. 1998ರಲ್ಲಿ ಅಲಹಾಬಾದ್ ಹೈಕೋರ್ಟ್​ ಇದರ ವಿಚಾರಣೆಗೆ ತಡೆ ನೀಡಿತ್ತು.

ಕಳೆದ ವರ್ಷ ವಾರಣಾಸಿ ಕೆಳ ನ್ಯಾಯಾಲಯವು ವಿಡಿಯೋಗ್ರಫಿಕ್ ಸರ್ವೇಗೆ ಆದೇಶ ನೀಡಿತ್ತು. ಇದನ್ನು ವಿರೋಧಿಸಿದ ಆಲ್​ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್​ ವಿರೋಧ ವ್ಯಕ್ತಪಡಿಸಿ ವಾರಣಸಿ ಹೈಕೋರ್ಟ್​ ಮೊರೆ ಹೋಗಿದ್ದರು. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬನು ಕಾಶಿ ವಿಶ್ವನಾಥ ದೇಗುಲವನ್ನು ಕೆಡವಿ, ಜ್ಞಾನವ್ಯಾಪಿ ಮಸೀದಿಯನ್ನು ಕೊಟ್ಟಿದ್ದಾನೆ ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ಮಸೀದಿ ಇರುವ ಜಾಗ ನಮ್ಮದು. ಪ್ರಾಚೀನ ಕಾಲದ ದೇವಾಲಯವನ್ನು ಕಡೆವಿ ಮಸೀದಿ ಕಟ್ಟಲಾಗಿದೆ. ಮಸೀದಿಯೊಳಗೆ ಇರುವ ಹಿಂದೂ ದೇವರ ವಿಗ್ರಹಗಳ ಪೂಜೆಗೆ ಸದಾಕಾಲ ಅವಕಾಶ ಮಾಡಿಕೊಡಬೇಕು ಎಂದು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಮಸೀದಿಯೊಳಗೆ ಹಿಂದೂ ದೇವರಂತೆ ಕಾಣಸಿಗುವ ವಿಗ್ರಹಗಳ ಪೂಜೆಗೆ ಮಸೀದಿಯ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿಕೊಂಡು ಬರ್ತಿದೆ.

ಹಿಂದೂಗಳ ವಾದವೇನು..?

ಸದ್ಯ ಈ ಸ್ಥಳವು ವರ್ಷಕ್ಕೆ ಒಮ್ಮೆ ಮಾತ್ರ ಪ್ರಾರ್ಥನೆಗೆ ತೆರೆಯುತ್ತದೆ. ಇಲ್ಲಿ ನಿತ್ಯವೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಹಳೆಯ ದೇವಸ್ಥಾನ ಸಂಕೀರ್ಣದೊಳಗೆ ಕಾಣಿಸುವ ಹಾಗೂ ಕಾಣಿಸದ ದೇವತೆಗಳಿಗೆ ಕೂಡ ಪೂಜೆಗೆ ಅನುಮತಿ ಕೊಡಬೇಕು ಎಂದು ಮಹಿಳೆಯರು ಮನವಿ ಮಾಡಿದ್ದರು. ಆದರೆ ಇದು ದೇವಸ್ಥಾನವಲ್ಲ, ಇದು ಮಸೀದಿ, ಜೊತೆಗೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ ಎಂದು ಮುಸ್ಲೀಂರ ವಾದವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಜ್ಞಾನವಾಪಿ ಸರ್ವೇಗೆ ಹೈಕೋರ್ಟ್​ನಿಂದಲೂ ಗ್ರೀನ್ ಸಿಗ್ನಲ್; ಮಸೀದಿಯ ಆಡಳಿತ ಮಂಡಳಿಗೆ ಹಿನ್ನಡೆ

https://newsfirstlive.com/wp-content/uploads/2023/07/gyanvapi-case.jpg

Load More