ಹೆಚ್.ಡಿ ಕುಮಾರಸ್ವಾಮಿ ಅವರು ನಾಳೆ ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಟಾರ್ಚ್
ಪ್ರಜ್ವಲ್ ರೇವಣ್ಣರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್
ಮಾವಿನಕೆರೆ ರಂಗನಾಥ ದೇವಸ್ಥಾನದಲ್ಲಿ ಹೆಚ್‌ಡಿಡಿ ಕುಟುಂಬ ವಿಶೇಷ ಪೂಜೆ
ಹಾಸನ: ಜೆಡಿಎಸ್ ನಾಯಕರಿಗೆ ಶುಕ್ರವಾರದ ಆಘಾತ ಎದುರಾಗಿದೆ. ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ವಿಧಾನಸಭಾ ಚುನಾವಣೆಯ ಸೋಲಿಗೆ ಕಂಗಾಲಾಗಿದ್ದ ದೇವೇಗೌಡರ ಕುಟುಂಬಕ್ಕೆ ಇತ್ತೀಚೆಗೆ ಒಂದಾದ ಮೇಲೊಂದು ವಿಘ್ನ ಎದುರಾಗ್ತಿದೆ. ಈ ವಿಘ್ನಗಳ ನಿವಾರಣೆಗೆ ದೇವೇಗೌಡರ ಕುಟುಂಬಕ್ಕೆ ಇಂದು ದೇವರ ಮೊರೆ ಹೋಗಿದೆ. ಹಾಸನದ ಮಾವಿನಕೆರೆ ರಂಗನಾಥ ದೇವಸ್ಥಾನದಲ್ಲಿ ಹೆಚ್‌ಡಿಡಿ ದಂಪತಿ ಹಾಗೂ ಹೆಚ್.ಡಿ ರೇವಣ್ಣ ಕುಟುಂಬ ಸದಸ್ಯರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ದೇವೇಗೌಡರ ಕುಟುಂಬಕ್ಕೆ ಒಂದಾದ ಮೇಲೊಂದು ವಿಘ್ನ ಎದುರಾಗ್ತಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ಕೈಕೊಟ್ಟಿತ್ತು. ಚುನಾವಣೆಯಲ್ಲಿ ಜೆಡಿಎಸ್ಗೆ ಹೀನಾಯವಾದ ಸೋಲು ಎದುರಾಯ್ತು. ಜೆಡಿಎಸ್ ಪಕ್ಷದ ಮಿಷನ್ 123 ಟಾರ್ಗೆಟ್ ಮಿಸ್ ಆಯ್ತು. ದಳಪತಿಗಳ ಕರ್ಮ ಭೂಮಿ ರಾಮನಗರದಲ್ಲೇ ನಿಖಿಲ್ ಸೋಲು ಅನುಭವಿಸಿದರು. ಇದಾದ ಬಳಿಕ ಮತ್ತೆ ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಶಾಕ್ ನಡುವೆಯೇ ನಿನ್ನೆ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಲಾಗಿದೆ. ಇಷ್ಟೆಲ್ಲಾ ವಿಘ್ನಗಳ ಬಳಿಕ ಹೆಚ್‌ಡಿಡಿ ಕುಟುಂಬ ದೇವರ ಮೊರೆ ಹೋಗಿದೆ.
ಹೊಳೆನರಸೀಪುರದ ಮಾವಿನಕರೆ ರಂಗನಾಥನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇವೇಗೌಡರು ಸುದ್ದಿಗೋಷ್ಟಿ ನಡೆಸಿದರು. ಮೊದಲನೇ ಶ್ರಾವಣ ಶನಿವಾರ ದೆಹಲಿಯಲ್ಲಿ ಇದ್ದ ಕಾರಣ ಇಲ್ಲಿಗೆ ಬರಲು ಆಗಲಿಲ್ಲ. ಎರಡನೇ ಶ್ರಾವಣ ಶನಿವಾರ ಬಂದಿದ್ದೇನೆ. ನಾನು, ಶ್ರೀಮತಿಯವರು, ರೇವಣ್ಣ, ಭವಾನಿ, ಸೂರಜ್ ನಾವೆಲ್ಲ ಆನಂದವಾಗಿ ಪೂಜೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಲೋಕಸಭಾ ಸ್ಥಾನದಿಂದ ಅನರ್ಹ; ಕುತೂಹಲ ಮೂಡಿಸಿದ ಪ್ರಜ್ವಲ್ ಮುಂದಿನ ನಡೆಯೇನು?
ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಅವರು ನಾಳೆ ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗ್ತಾರೆ. ನಾಲ್ಲೈದು ದಿನ ವಿಶ್ರಾಂತಿ ಮಾಡಲು ಸಲಹೆ ನೀಡಿದ್ದೇನೆ. ಹಾಸನ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿದ ಹೈಕೋರ್ಟ್ ಆದೇಶದ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಮುಚ್ಚು ಮರೆಯಿಂದ ಮಾತನಾಡುವುದು ಏನು ಇಲ್ಲ. ಅನರ್ಹಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ. ಸುಪ್ರೀಂಕೋರ್ಟ್‌ನಲ್ಲಿ ಸ್ಟೇ ತರಲು ಪ್ರಯತ್ನ ಮಾಡುತ್ತೇವೆ. ಜಡ್ಜ್ಮೆಂಟ್ ಆರ್ಡರ್ ಓದದೇ ರಿಯಾಕ್ಟ್ ಮಾಡುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ