‘ಕುಮಾರಸ್ವಾಮಿ ವರ್ಚಸ್ಸು ಹಾಳು ಮಾಡುವ ಯತ್ನ ನಡಿಯುತ್ತಿದೆ‘
ಮೈತ್ರಿಯಲ್ಲಿ ಬಿರುಕು ಮೂಡಿಸಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ರಾಜ್ಯ ಕಮಲ ನಾಯಕರ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ
ರಾಜ್ಯದ 3 ಕ್ಷೇತ್ರಗಳ ಬೈ ಎಲೆಕ್ಷನ್ಗೆ ಭರದ ಸಿದ್ಧತೆ ನಡೀತಿದೆ. ಈ ನಡುವೆ ದೋಸ್ತಿಗಳ ಒಗ್ಗಟ್ಟಿನ ಕೋಟೆಯಲ್ಲಿ ಬಿರುಕು ಕಾಣಿಸಿದೆ. ದಳಪತಿಯ ವರ್ಚಸ್ಸು ಹಾಳು ಮಾಡೋ ಯತ್ನ ಕೆಲವು ಬಿಜೆಪಿ ನಾಯಕರಿಂದಲೇ ನಡೀತಿದ್ಯಾ ಅನ್ನೋ ಅನುಮಾನ ಮಾಡಿದೆ. ಇಂಥದ್ದೊಂದು ಪ್ರಶ್ನೆ ಹುಟ್ಟಿಸಿರೋದು ಕುಮಾರಸ್ವಾಮಿಯ ನೇರ ಆರೋಪ.
ಕುಮಾರಸ್ವಾಮಿ ಹೀಗೆ ಕಿಡಿಕಾರ್ತಿರೋದು ತಮ್ಮದೇ ಮೈತ್ರಿ ಪಕ್ಷ ಬಿಜೆಪಿ ನಾಯಕರ ವಿರುದ್ಧ. ಚನ್ನಪಟ್ಟಣದ ಟಿಕೆಟ್ ಗೊಂದಲ ಮೈತ್ರಿಯ ಒಗ್ಗರಣೆಯಲ್ಲಿ ಚಟಪಟ ಎನ್ನುವಂತೆ ಮಾಡಿದೆ. ದೋಸ್ತಿಯಲ್ಲಿ ಹುಳಿ ಹಿಂಡ್ತಿರೋರ ವಿರುದ್ಧ ಕುಮಾರಸ್ವಾಮಿ ಅಕ್ಷರಶಃ ಕೆಂಡ ಕಾರಿದ್ದಾರೆ.
ಇದನ್ನೂ ಓದಿ: ಒಂದೇ ಪ್ರಕರಣ, ಮೂರು ತನಿಖೆ; ಸಿಎಂ ಸಿದ್ದರಾಮಯ್ಯಗೆ ಮುಳ್ಳಾಗಲಿದೆಯಾ ಮುಡಾ ಪ್ರಕರಣ
ರಾಜ್ಯದ ಮೂರು ಬೈ ಎಲೆಕ್ಷನ್ನಲ್ಲೇ ಬಹಳಷ್ಟು ಕುತೂಹಲ ಕೆರಳಿಸಿದ್ದ ಕ್ಷೇತ್ರ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ. ಈಗಾಗಲೇ ಎರಡೂ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದ್ದ ಬಿಜೆಪಿ ಹೈಕಮಾಂಡ್, ಚನ್ನಪಟ್ಟಣವನ್ನ ಜೆಡಿಎಸ್ ತೆಕ್ಕೆಗೆ ನೀಡಿದೆ. ಆದರೆ ಚನ್ನಪಟ್ಟಣದಲ್ಲಿ ಟಿಕೆಟ್ ಘೋಷಣೆ ಮಾಡಲು ಕುಮಾರಸ್ವಾಮಿ ಇಕ್ಕಟ್ಟಲ್ಲಿ ಸಿಲುಕಿದ್ದಾರೆ. ಆದರೆ ಇದೇ ಸಮಯವನ್ನ ಕೆಲ ಬಿಜೆಪಿ ನಾಯಕರು ಲಾಭಕ್ಕೆ ಬಳಸಿಕೊಳ್ತಿದ್ದಾರಂತೆ. ಇಂಥದ್ದೊಂದು ಆರೋಪ ಮಾಡಿರೋದು ಖುದ್ದು ದಳಪತಿ
ಕಮಲ ನಾಯಕರ ವಿರುದ್ಧವೇ ಕೇಂದ್ರ ಸಚಿವ ಕುಮಾರಸ್ವಾಮಿ ಗರಂ
ಬಿಜೆಪಿ ಹೈಕಮಾಂಡ್ ಹಾಗೂ ನನ್ನ ನಡುವಿನ ಬಾಂಧವ್ಯಕ್ಕೆ ಕೆಲ ಬಿಜೆಪಿ ನಾಯಕರು ಹುಳಿ ಹಿಂಡುತ್ತಿದ್ದಾರೆ ಅಂತಾ ನೇರಾನೇರ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಉಪಚುನಾವಣೆಯ ಸಮಯದ ಈ ಪರಿಸ್ಥಿಯಲ್ಲಿ ವರ್ಚಸ್ಸು ಹಾಳು ಮಾಡೋ ಯತ್ನ ನಡೀತಿದೆ ಅನ್ನೋ ಜ್ವಾಲಾಮುಖಿ ಸ್ಫೋಟಿಸಿದೆ. ಇಷ್ಟು ಮಾತ್ರವಲ್ಲೇ ಕಾಂಗ್ರೆಸ್ ಜೊತೆಗಿನ ಬಿಜೆಪಿ ನಾಯಕರ ಒಪ್ಪಂದದ ಬಗ್ಗೆಯೂ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ಸಿ.ಪಿ ಯೋಗೇಶ್ವರ್ ನಡೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯನ್ನು ತಬ್ಬಿ ಅತ್ತ ಸುದೀಪ್.. ಅಮ್ಮನನ್ನು ಕಳೆದುಕೊಂಡ ಮಾಣಿಕ್ಯ
ನಾನೇಕೆ ಬಲಿಯಾಗಬೇಕು ಅಂತಾ ಪ್ರಶ್ನಿಸಿರೋ ಕುಮಾರಸ್ವಾಮಿ ಮಾತು ಕಮಲಪಡೆಗೆ ರವಾನಿಸಿರೋ ನೇರ ಸಂದೇಶ. ಸದ್ಯ. ಈ ಈ ಹೇಳಿಕೆಯಿಂದ ಬೈ ಎಲೆಕ್ಷನ್ಗೂ ಡ್ಯಾಮೇಜ್ ಆಗುವ ಸಾಧ್ಯತೆ ಇದೆ. ಚುನಾವಣೆಯ ಹೊತ್ತಲ್ಲಿ ಇದನ್ನ ಬಿಜೆಪಿ ನಾಯಕರು ಹೇಗೆ ನಿಭಾಯಿಸ್ತಾರೆ ಅನ್ನೋದೇ ಮುಂದಿರೋ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ