newsfirstkannada.com

WATCH: ಬಿಜೆಪಿ, ಜೆಡಿಎಸ್ ಮೈತ್ರಿಯಾದ್ರೆ ಮಂಡ್ಯದಲ್ಲಿ ಸುಮಲತಾ ಅತಂತ್ರ ಆಗ್ತಾರಾ? HDK ಹೇಳಿದ್ದೇನು?

Share :

10-09-2023

  ಬಿಜೆಪಿ ಜೊತೆ ಮೈತ್ರಿಗೆ ಕೆಲ ಜೆಡಿಎಸ್ ಶಾಸಕರಿಂದ ಅಸಮಾಧಾನ

  ಚರ್ಚೆನೇ ಆಗದೇ ಯಾಕೆ ಹೀಗೆ ಮಾಡ್ತಾ ಇದ್ದೀರಿ ಎಂದ ಹೆಚ್‌ಡಿಕೆ

  ಬಿಜೆಪಿ, ಜೆಡಿಎಸ್ ಮೈತ್ರಿಯಾದ್ರೆ ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ?

ಬೆಂಗಳೂರು: ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ರಾಜ್ಯ ರಾಜಕೀಯದಲ್ಲಿ ಬೆಂಕಿ, ಬಿರುಗಾಳಿಯನ್ನೇ ಸೃಷ್ಟಿಸಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಮೂರು ಪಕ್ಷದ ನಾಯಕರು ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಮೈತ್ರಿಯ ಮಾತುಕತೆಯಿಂದ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಅಧ್ಯಾಯ ಆರಂಭವಾಗೋ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರೇ ಇಂದು ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈತ್ರಿ ಬಗ್ಗೆ ಚರ್ಚೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ. ಬಿಜೆಪಿ ಜೊತೆ ಮೈತ್ರಿಗೆ ಕೆಲ ಜೆಡಿಎಸ್ ಶಾಸಕರ ಅಸಮಾಧಾನ ಇಲ್ಲ. ನಮಗೆಲ್ಲ ಅನ್ಯಾಯ ಆಗಿದೆ ಅಂತ ವೈಯಕ್ತಿಕ ಭಾವನೆ ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದರು.

ಈ ವಿಚಾರವನ್ನ ಯಾಕೆ ಅಷ್ಟು‌ ದೊಡ್ಡದು ಮಾಡುತ್ತಾ ಇದ್ದೀರಿ. ಜೆಡಿಎಸ್‌ ಶಾಸಕರು ವೈಯಕ್ತಿಕವಾಗಿ ಅವರ ಭಾವನೆ ಹೇಳಿದ್ದಾರೆ. ಹಿಂದಿನ ಕೆಲವು ಘಟನೆಗಳಿಂದ ಹೀಗೆ ಹೇಳಿಕೊಂಡಿದ್ದಾರೆ. ನಮ್ಮ ಮನೆಯ ಹುಡುಗ, ಸರಿಯಾಗುತ್ತಾರೆ. ಅದೆಲ್ಲ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ನಮ್ಮನೆ ಮಕ್ಕಳು, ಅದನ್ನೆಲ್ಲ ಸರಿಪಡಿಸುತ್ತೇವೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: ತೆನೆಯೊಳಗೆ ಅರಳುತ್ತ ಕಮಲ..? ಇಂದು ನಡೆಯುವ ಜೆಡಿಎಸ್​​ ಸಮಾವೇಶದತ್ತ ಇಡೀ ಕರ್ನಾಟಕದ ಚಿತ್ತ!

ಮಂಡ್ಯದಲ್ಲಿ ಸುಮಲತಾ ಅತಂತ್ರ?

ಬಿಜೆಪಿ, ಜೆಡಿಎಸ್ ಮೈತ್ರಿಯಾದ್ರೆ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅತಂತ್ರ ಆಗ್ತಾರೆ ಎನ್ನುವ ಪ್ರಶ್ನೆಗೆ ಹೆಚ್‌.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆನೇ ಆಗಿಲ್ಲ. ಇವೆಲ್ಲ ಪ್ರಾಥಮಿಕ ಹಂತದಲ್ಲಿದೆ ಎಂದು ನಿನ್ನೆಯೇ ಹೇಳಿದ್ದೀನಿ. ಇವ್ರು ಅತಂತ್ರ ಆದ್ರು, ಅವರು ಅತಂತ್ರ ಆಗ್ತಾರೆ ಅಂತಾ ಪ್ರಚಾರ ಯಾಕೆ ಮಾಡ್ತಿದ್ದೀರಿ? ಚರ್ಚೆನೇ ಆಗದೇ ಯಾಕೆ ಹೀಗೆ ಮಾಡ್ತಾ ಇದ್ದೀರಿ ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ.

ಇನ್ನು, ನನಗೆ ಮೊದಲು ರಾಜ್ಯದ ರೈತರ ಸಮಸ್ಯೆ ಬೇಕು. ರೈತರು ಈಗ ಸಂಕಷ್ಟದಲ್ಲಿ ಇದ್ದಾರೆ. ಇವತ್ತು ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ರೈತರ ಪರಿಸ್ಥಿತಿ ಏನಾಗಿದೆ? ನಂಗೆ ಅದರ ಬಗ್ಗೆ ಚಿಂತೆಯಾಗಿದೆ. ಇಲ್ಲಿ ಯಾರು ಅತಂತ್ರ ಅನ್ನೋದು ಪ್ರಶ್ನೆಯಲ್ಲ ಎಂದು ಮಾಜಿ‌ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಬಿಜೆಪಿ, ಜೆಡಿಎಸ್ ಮೈತ್ರಿಯಾದ್ರೆ ಮಂಡ್ಯದಲ್ಲಿ ಸುಮಲತಾ ಅತಂತ್ರ ಆಗ್ತಾರಾ? HDK ಹೇಳಿದ್ದೇನು?

https://newsfirstlive.com/wp-content/uploads/2023/09/HDK-Sumalatha-Mandya.jpg

Load More