newsfirstkannada.com

ವಿಶ್ವನಾಥ್ ಕ್ಯಾರೆಕ್ಟರ್​ಗಾಗಿ ಹೇರ್ ಸ್ಟೈಲ್ ಚೇಂಜ್‌.. ಕಡೂರಲ್ಲಿ ಚೈತ್ರಾ ಕುಂದಾಪುರ ಗ್ಯಾಂಗ್‌ ಮಾಡಿದ್ದೇನು ಗೊತ್ತಾ?

Share :

13-09-2023

  ಅಪರಿಚಿತ ವ್ಯಕ್ತಿಗೆ ಮೇಕಪ್‌ ಮಾಡಿಸಿ ವಿಶ್ವನಾಥ್​​ಜೀ ಎಂದ್ರಾ?

  ಕಬಾಬ್ ಮಾರುವ ವ್ಯಕ್ತಿಗೆ ವಿಶ್ವನಾಥ್ ಜೀ ವೇಷಭೂಷಣವಂತೆ

  ವಿಶ್ವನಾಥ್ ಕ್ಯಾರೆಕ್ಟರ್​ಗಾಗಿ ಕಡೂರಲ್ಲಿ ಹೇರ್ ಸ್ಟೈಲ್ ಚೇಂಜ್‌!

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಉದ್ಯಮಿಗೆ 5 ಕೋಟಿ ರೂಪಾಯಿ ವಂಚಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ ಚೈತ್ರಾ ಗ್ಯಾಂಗ್ 5 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ದೂರಿನ ಮೇಲೆ ಭರ್ಜರಿ ಕಾರ್ಯಾಚರಣೆಗಿಳಿದ ಸಿಸಿಬಿ ಅಧಿಕಾರಿಗಳು ಚೈತ್ರಾ ಕುಂದಾಪುರ ಅವರ ಗ್ಯಾಂಗ್‌ ಅನ್ನು ಅರೆಸ್ಟ್ ಮಾಡಿದ್ದೇ ರೋಚಕವಾಗಿದೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಸಾಲು ಸಾಲು ಆರೋಪ! ಹಣಕ್ಕಾಗಿ ಇಷ್ಟೆಲ್ಲಾ ಬೇಡಿಕೆ ಇಟ್ಟಿದ್ರಾ ಹಿಂದೂ ಕಾರ್ಯಕರ್ತೆ?

ಚೈತ್ರಾ ಕುಂದಾಪುರ ಅವರ ವಂಚನೆ ಕೇಸ್​ನಲ್ಲಿ ಸಿಸಿಬಿ ಪೊಲೀಸರು ಒಟ್ಟು 3 ತಂಡಗಳಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಒಟ್ಟೊಟ್ಟಿಗೆ ಮೂರು ಜಿಲ್ಲೆಗಳಲ್ಲಿ ಆರೋಪಿಗಳು ಖಾಕಿ ಪಡೆಗೆ ಲಾಕ್​ ಆಗಿದೆ. ಚಿಕ್ಕಮಗಳೂರಲ್ಲಿ ಗಗನ್, ರಮೇಶ್, ಧನರಾಜ್​ ಬಂಧನವಾಗಿದ್ರೆ, ಉಡುಪಿಯಲ್ಲಿ ಚೈತ್ರಾ, ಶ್ರೀಕಾಂತ್, ಪ್ರಜ್ವಲ್‌ರನ್ನು ವಶಕ್ಕೆ ಪಡೆಯಲಾಗಿದೆ. ಚೈತ್ರಾ ಕುಂದಾಪುರ ವಂಚನೆ ಕೇಸ್​​ನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ವಿಶ್ವನಾಥ್ ಕ್ಯಾರೆಕ್ಟರ್​ಗಾಗಿ ಹೇರ್ ಸ್ಟೈಲ್ ಚೇಂಜ್‌!

ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರನ್ನು ಚೈತ್ರಾ ಕುಂದಾಪುರ ಅವರ ತಂಡ ನಂಬಿಸಿತ್ತು. ಕಬಾಬ್‌ ಮಾರುವ ವ್ಯಕ್ತಿಗೆ ವಿಶ್ವನಾಥ್‌ ಜೀ ಅನ್ನೋ ಪ್ರಚಾರಕನ ವೇಷ ತೊಡಿಸಿದ್ದರು. ಅಪರಿಚಿತ ವ್ಯಕ್ತಿಗೆ ಮೇಕಪ್‌ ಮಾಡಿಸಿ ವಿಶ್ವನಾಥ್​​ಜೀ ಎಂದು ಪರಿಚಯಿಸಿದ್ದ ಚೈತ್ರಾ ಎನ್ನಲಾಗಿದೆ. ಅಸಲಿಗೆ ವಿಶ್ವನಾಥ್‌ ಜೀ ಅನ್ನೋರೇ ಆರ್‌ಎಸ್‌ಎಸ್‌ನಲ್ಲಿ ಯಾರೂ ಇಲ್ಲ. ಹೀಗಾಗಿ ಕೆ.ಆರ್‌. ಪುರಂನಲ್ಲಿ ಕಬಾಬ್‌ ಮಾರುವ ರಮೇಶ್ ಅನ್ನೋ ವ್ಯಕ್ತಿಗೆ ಪ್ರಚಾರಕನ ವೇಷ ತೊಡಿಸಿದ್ದರು ಎನ್ನಲಾಗಿದೆ.

ಬನಶಂಕರಿ ಬೀದಿಯಲ್ಲಿನ ಸಲೂನ್​ ಶಾಪ್‌ನ ಸಿಬ್ಬಂದಿ

ವಿಶ್ವನಾಥ್​ ಹೆಸರಲ್ಲಿ ಕಬಾಬ್ ಮಾರುವ ರಮೇಶ್ ಅನ್ನೋ ವ್ಯಕ್ತಿಯ ಲುಕ್​ ಬದಲಿಸಿದ್ದರು. ವಿಶ್ವನಾಥ್ ಕ್ಯಾರೆಕ್ಟರ್​ಗಾಗಿ ಕಡೂರಿನ ಕಟಿಂಗ್ ಶಾಪ್‌ಗೆ ಹೋಗಿ ಹೇರ್ ಸ್ಟೈಲ್ ಚೇಂಜ್ ಮಾಡಲಾಗಿತ್ತು. ಧನರಾಜ್, ರಮೇಶ್ ಕಟಿಂಗ್ ಶಾಪ್​ಗೆ ಹೋಗಿ ಬೇರೆಯವರ ಫೋಟೋ ತೋರಿಸಿ ಹೀಗೆ ಕಟಿಂಗ್ ಮಾಡುವಂತೆ ತಾಕೀತು ಮಾಡಿದ್ದಾರೆ. ಅವರು ಹೇಳಿದ್ದಂತೆ ರಮೇಶ್​ ಹೇರ್ ಸ್ಟೈಲ್ ಮಾಡಿದ್ದಾಗಿ ಕಟಿಂಗ್ ಶಾಪ್‌ ಸಿಬ್ಬಂದಿ ರಾಮು ಹೇಳಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರಿನ ಬನಶಂಕರಿ ಬೀದಿಯಲ್ಲಿನ ಮಿಸ್ಟರ್ ಹೇರ್‌ ಕಟ್‌ ಸಲೂನ್​ ಶಾಪ್‌ನಲ್ಲಿ ರಮೇಶ್ ಅನ್ನೋ ವ್ಯಕ್ತಿ ವಿಶ್ವನಾಥ್ ಜೀ ಆಗಿ ಬದಲಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವನಾಥ್ ಕ್ಯಾರೆಕ್ಟರ್​ಗಾಗಿ ಹೇರ್ ಸ್ಟೈಲ್ ಚೇಂಜ್‌.. ಕಡೂರಲ್ಲಿ ಚೈತ್ರಾ ಕುಂದಾಪುರ ಗ್ಯಾಂಗ್‌ ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2023/09/Chaitra-Kundapura-1-1.jpg

Load More