ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ನನ್ನು ಹೊಡೆದುರುಳಿಸಿದ ಇಸ್ರೇಲ್
ಕಳೆದ ಅಕ್ಟೋಬರ್ 7 ರಂದು ಹಮಾಸ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ಉಗ್ರ
ದುಷ್ಟನ ಮಟ್ಟ ಹಾಕಿದ್ದು ಡಿಎನ್ಎನಲ್ಲಿ ಸ್ಪಷ್ಟವಾಗಿದೆ ಎಂದ ಇಸ್ರೇಲ್ ಪ್ರಧಾನಿ
ಹಮಾಸ್ ಉಗ್ರರರನ್ನು ನಿತ್ಯ ಒಬ್ಬೊಬ್ಬರನ್ನಾಗಿ ಹೊಡೆದುರುಳಿಸುತ್ತಿರವ ಇಸ್ರೇಲ್ ಈಗ ಅದರ ಮುಖ್ಯಸ್ಥ ಯಾಹ್ಯಾ ಸಿನ್ವರ್ನನ್ನು ಮುಗಿಸಿ ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಸ್ರೇಲಿನ ವಿದೇಶಾಂಗ ಸಚಿವ ಇಸ್ರೇಲ್ ಕಟ್ಜ್, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿಗೆ ಕರೆ ನೀಡಿದ್ದ ಯಾಹ್ಯಾ ಸಿನ್ವರ್ನನ್ನು ಇಸ್ರೇಲ್ ರಕ್ಷಣಾ ಪಡೆ ಹೊಡೆದು ಹಾಕಿದೆ ಎಂದು ಹೇಳಿದ್ದಾರೆ. ಡಿಎನ್ಎ ಟೆಸ್ಟ್ನಲ್ಲಿ ಇಸ್ರೇಲ್ ದಾಳಿಯಲ್ಲಿ ಯಾಹ್ಯಾ ಸಿನ್ವರ್ ಮೃತಪಟ್ಟಿದ್ದು ಖಚಿತಗೊಂಡಿದೆ. ದುಷ್ಟನೊಬ್ಬನನ್ನು ಇಸ್ರೇಲ್ ಹೊಡೆದು ಹಾಕಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೂಡ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಹಮಾಸ್ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಒಟ್ಟು 1200 ಇಸ್ರೇಲ್ ಪ್ರಜೆಗಳು ಮೃತಪಟ್ಟಿದ್ದರು. ಇದು ಇಸ್ರೇಲ್ ಮೇಲೆ ಹಿಂದೆಂದೂ ನಡೆಯದ ಘನಘೋರ ದಾಳಿಯಾಗಿತ್ತು. ಅಂದಿನಿಂದಲೇ ಹಮಾಸ್ನ್ನು ಮುಗಿಸಿ ಹಾಕಲು ಇಸ್ರೇಲ್ ಪಡೆ ಸನ್ನದ್ಧವಾಗಿತ್ತು. ಈ ಒಂದು ಸಾಮೂಹಿಕ ಹತ್ಯಾಕಾಂಡದ ರೂವಾರಿಯಾಗಿದ್ದ ಯಾಹ್ಯಾ ಸಿನ್ವರ್ಗಾಗಿ ಅಂದನಿಂದಲೇ ಹುಡುಕಾಟ ನಡೆಸಿದ್ದ ಇಸ್ರೇಲ್ ಕಳೆದ ರಾತ್ರಿ ಗಾಜಾದಲ್ಲಿ ಅಡಗಿದ್ದ ಸಿನ್ವರ್ನನ್ನು ಪತ್ತೆ ಮಾಡಿ ಹೊಡೆದು ಹಾಕಿದೆ.
ಇದನ್ನೂ ಓದಿ: ಗೆದ್ದ ಮಗಳ ತಬ್ಬಿ ಕಣ್ಣೀರು ಹಾಕಿದ ಅಬುಧಾಬಿ ರಾಜಕುಮಾರ; ತಂದೆ ಮಮತೆ ಕಂಡು ಭಾವುಕರಾದ ಜನ
ಇಸ್ರೇಲ್ ನೀಡಿದ ಮಾಹಿತಿ ಪ್ರಕಾರ, ಇಸ್ರೇಲಿ ಫೋರ್ಸ್ ಗಾಜಾದಲ್ಲಿ ನಡೆಸಿದ ದಾಳಿಯಲ್ಲಿ ಒಟ್ಟು ಮೂವರು ಹಮಾಸ್ ಉಗ್ರರ ಹತ್ಯೆಯಾಗಿದೆ. ಗಾಜಾದ ಒತ್ತೆಯಾಳುಗಳನ್ನು ಇರಿಸಲಾಗಿದ್ದ ಕಟ್ಟಡದಲ್ಲಿಯೇ ಈ ಮೂವರು ಇದ್ದ ಖಚಿತ ಮಾಹಿತಿ ಸಿಕ್ಕಿತ್ತು. ಇದನ್ನು ಅರಿತ ಪಡೆ ಬಹಳ ಸೂಕ್ಷ್ಮವಾಗಿ ಈ ಒಂದು ಆಪರೇಷನ್ ಮಾಡಿ ಮುಗಿಸಿದೆ. ಇಸ್ರೇಲ್ ಪಡೆ ನಡೆಸಿದ ದಾಳಿಯಲ್ಲಿ ಯಾಹ್ಯಾ ಸಿನ್ವರ್ ಸೇರಿ ಒಟ್ಟು ಮೂವರನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಈ ಒಂದು ಆಪರೇಷನ್ನಲ್ಲಿ ಅತ್ಯಾಧುನಿಕ ಸ್ಫೋಟಕಗಳನ್ನು ಬಳಸಿ ತುಂಬಾ ಚತುರತೆಯಿಂದ ಈ ಮೂವರು ಉಗ್ರರನ್ನು ಮುಗಿಸಲಾಗಿದೆ ಎಂದು ಇಸ್ರೇಲ್ನ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಂಟಾರ್ಟಿಕಾದಲ್ಲೊಂದು ರಹಸ್ಯ ದ್ವಾರ! ವೈರಲ್ ಆದ ಫೋಟೋದ ಅಸಲಿ ಸಂಗತಿಯೇನು?
ಯಾಹ್ಯಾ ಸಿನ್ವರ್ನನ್ನು ಹೊಡೆದುರುಳಿಸಲು ಇಸ್ರೇಲ್ ಯಾವ ಮಾರ್ಗವನ್ನು ಬಿಟ್ಟಿಲ್ಲ. ಎಲ್ಲಾ ಪಡೆಗಳ ನೆರವನ್ನು ಪಡೆದು ಈ ಒಂದು ಆಪರೇಷನ್ ಮುಗಿಸಿದೆ. ಕಳೆದ ಒಂದು ವರ್ಷದಿಂದ ಗುಪ್ತಚರ ಇಲಾಖೆ ಪಡೆ,ಮಿಲಿಟರಿ ಇಂಜನೀಯರ್ಸ್, ಸೆಕ್ಯೂರಿಟಿ ಎಜೆನ್ಸಿ ಹೀಗೆ ಎಲ್ಲಾ ಇಲಾಖೆಗಳು ಯಾಹ್ಯಾ ಸಿನ್ವರ್ನ ಪತ್ತೆಗಾಗಿ ಜಾಲ ಬೀಸಿ ಕಾಯುತ್ತಿದ್ದವು. ನಿನ್ನೆ ಸರಿಯಾದ ಸಮಯ ನೋಡಿ ಯಹೂದಿ ನಾಡಿಗೆ ಕಂಟಕವೆನಿಸಿದ್ದ ಯಾಹ್ಯಾ ಸಿನ್ವರ್ನನ್ನು ಹೊಡೆದುರುಳಿಸಿದೆ.
ಯಾರು ಈ ಯಾಹ್ಯಾ ಸಿನ್ವರ್?
ಇನ್ನು ಇಸ್ರೇಲ್ ದಾಳಿಯಲ್ಲಿ ಮಡಿದ ಯಾಹ್ಯಾ ಸಿನ್ವರ್ ಯಾರು ಎಂದು ನೋಡುವುದಾದ್ರೆ. 1962ರಲ್ಲಿ ಜನ್ಮತಾಳಿದ್ದ ಈತನನ್ನು ಮುಂದೊಂದು ದಿನ ಹಮಾಸ್ ಸಂಸ್ಥಾಪಕ ಶೇಖ್ ಅಹ್ಮದ್ ಯಾಸೀನ್ ತನ್ನ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಬಳಿಕ ಹಮಾಸ್ದೇ ಒಂದು ಶಾಖೆಯಾದ. ಆಂತರಿಕ ರಕ್ಷಣಾ ಘಟಕವಾದ ಅಲ್ ಮಜ್ದ್ಗೆ ಇವನನ್ನು ಮುಖ್ಯಸ್ಥನನ್ನಾಗಿ ಮಾಡಲಾಗುತ್ತದೆ. ಯಾರು ಇಸ್ಲಾಂನ ನೈತಿಕ ಕಾನೂನುಗಳನ್ನು ಮೀರುತ್ತಾರೋ ಅವರನ್ನು ಪತ್ತೆ ಮಾಡಿ ಶಿಕ್ಷಿಸುವ ಕಾರ್ಯ ಯಾಹ್ಯಾ ಸಿನ್ವರ್ದಾಗಿತ್ತು. ಅದರ ಜೊತೆಗೆ ಇಸ್ರೇಲಿ ಪಡೆಯೊಂದಿಗೆ ಹಮಾಸ್ ನಡೆಸುತ್ತಿದ್ದ ಆಪರೇಷನ್ಗಳಿಗೆ ಸಹಕರಿಸುವ ಕಾರ್ಯವೂ ಇವನದಾಗಿತ್ತು. 1988 ಇಸ್ರೇಲ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಕೆಲವು ಪ್ಯಾಲಿಸ್ತೇನಿಗಳನ್ನು ಯಾಹ್ಯಾ ಸಿನ್ವರ್ ಹತ್ಯೆ ಮಾಡಿದ್ದ ಆರೋಪದಲ್ಲಿ ಈತ ಇಸ್ರೇಲ್ನ ಜೈಲಿನಲ್ಲಿ 20 ವರ್ಷ ಕಳೆದಿದ್ದ. 2011ರಲ್ಲಿ ಕೈದಿಗಳ ವಿನಿಮಯದ ವೇಳೆ ಯಹೂದಿ ರಾಷ್ಟ್ರದ ವಿರುದ್ಧ ಶಸ್ತ್ರ ಹಿಡಿಯುವುದಿಲ್ಲ ಎಂಬ ಷರತ್ತಿನ ಮೇರೆಗೆ ಯಾಹ್ಯಾ ಸಿನ್ವರ್ನನ್ನು ಬಿಡುಗಡೆ ಮಾಡಲಾಗಿತ್ತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ