newsfirstkannada.com

ಗಾಜಾ ನಗರ ಸುತ್ತುವರಿದ ಇಸ್ರೇಲ್​ ಸೇನೆ.. ಒತ್ತೆಯಾಳಾಗಿದ್ದ 74 ಅಮೆರಿಕನ್ನರು ಈಜಿಫ್ಟ್​ಗೆ ಶಿಫ್ಟ್​

Share :

04-11-2023

  ಲೆಬನಾನ್​ ಗಡಿಯಲ್ಲೂ ಇಸ್ರೇಲ್​ ಹೈ-ಅಲರ್ಟ್​ ಘೋಷಣೆ

  ಇಸ್ರೇಲ್​ ಪ್ರಧಾನಿ ಜೊತೆ ಬ್ಲಿಂಕಿನ್ ಮಹತ್ವದ ಮಾತುಕತೆ

  ಇಸ್ರೇಲ್​ಗೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಭೇಟಿ

ಹಮಾಸ್​ ವಿರುದ್ಧ ಇಸ್ರೇಲ್​ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಹಮಾಸ್​ ಉಗ್ರರ ಸಡೆಬಡಿಯಲು ಹೋಗಿರುವ ಇಸ್ರೇಲ್​, ಗಾಜಾ ನಗರವನ್ನು ಸುತ್ತುವರಿದು ನಿಂತಿದೆ. ಇತ್ತ ಲೆಬನಾನ್​ ಗಡಿಯಲ್ಲೂ ಇಸ್ರೇಲ್​ ಹೈ-ಅಲರ್ಟ್​ ಆಗಿದೆ. ಹಮಾಸ್​ ಮತ್ತು ಇಸ್ರೇಲ್​ ನಡುವೆ ಭೀಕರ ಕಾಳಗ ಶುರುವಾಗಿ ತಿಂಗಳಕ್ಕೆ ಹತ್ತಿರ ಆದ್ರೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಮಾಸ್ ಉಗ್ರ ಸಂಘಟನೆ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಇಸ್ರೇಲ್​ ಮಹತ್ವದ ಮುನ್ನಡೆ ಸಾಧಿಸಿದೆ.

ಇಡೀ ಗಾಜಾನಗರವನ್ನ ಸುತ್ತುವರಿದ ಇಸ್ರೇನ್​ ಸೇನೆ

ಹಮಾಸ್​ ಉಗ್ರರ ಹೆಡೆಮುರಿಕಟ್ಟಲು ದಂಡೆತ್ತಿ ಹೋಗಿರುವ ಇಸ್ರೇಲ್​ ಸೇನೆ, ಗಾಜಾ ನಗರದ ಮೇಲೆ ಬಿಗಿ ಹಿಡಿತ ಸಾಧಿಸ್ತಿದೆ. ಇಡೀ ಗಾಜಾ ಪಟ್ಟಿಯನ್ನ ಇಸ್ರೇಲ್​ ಸೇನೆ ಸುತ್ತುವರಿದಿದೆ. ಪೂರ್ಣ ಪ್ರಮಾಣದ ದಾಳಿ ಮಾಡಲು ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನ ನಿಯೋಜಿಸಿದೆ. ಈ ಮೂಲಕ ಕದನ ವಿರಾಮದ ಪ್ರಸ್ತಾವನೆಯು ಪ್ರಸ್ತುತ ನಮ್ಮ ಮುಂದೆ ಇಲ್ಲ ಎಂದು ಇಸ್ರೇಲ್​ ಸೇನೆ ಸ್ಪಷ್ಟಪಡಿಸಿದೆ.

ಒತ್ತೆಯಾಳಾಗಿದ್ದ 74 ಅಮೆರಿಕ ನಾಗರಿಕರು ಈಜಿಫ್ಟ್​ಗೆ ಶಿಫ್ಟ್​

ಇಸ್ರೇಲ್‌ ನಡೆಸುತ್ತಿರುವ ಸತತ ದಾಳಿಯಿಂದಾಗಿ ಗಾಜಾ ನಗರದಲ್ಲಿ ಇದುವರೆಗೆ 9 ಸಾವಿರಕ್ಕೂ ಅಧಿಕ ಜನ ಹತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಗಾಜಾದಲ್ಲಿ ಹಮಾಸ್ ಭಯೋತ್ಪಾದಕ ಗುಂಪಿನಿಂದ ಒತ್ತೆಯಾಳಾಗಿದ್ದ 74 ಅಮೆರಿಕಾದ ನಾಗರಿಕರು ಈಜಿಪ್ಟ್ ಕಡೆಗೆ ಆಗಮಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಗಾಜಾದಲ್ಲಿ ಸುಮಾರು 400 ಯುಎಸ್ ನಾಗರಿಕರು ಸಿಲುಕಿಕೊಂಡಿದ್ದಾರೆ.

ಇಸ್ರೇಲ್​ ಪ್ರಧಾನಿ, ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಭೇಟಿ

ಯುದ್ಧ ಆರಂಭವಾದ ಬಳಿಕ ಇಸ್ರೇಲ್​ಗೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೂರನೇ ಬಾರಿಗೆ ಭೇಟಿ ನೀಡಿದ್ದಾರೆ. ಟೆಲ್ ಅವಿವ್‌ನ ಕಿರಿಯಾದಲ್ಲಿ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಭೇಟಿಯಾಗಿ ಬ್ಲಿಂಕೆನ್ ಚರ್ಚೆ ನಡೆಸಿದ್ದಾರೆ. ಬ್ಲಿಂಕೆನ್​ ಭೇಟಿ ಹಿನ್ನೆಲೆ, ಅಮೆರಿಕಾ ಅಧ್ಯಕ್ಷ ಇಸ್ರೇಲ್​ ಕದನ ವಿರಾಮಕ್ಕೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಜೊತೆಗೆ ಸಚಿವ ಸಂಪುಟದ ಸದಸ್ಯರ ಜೊತೆಗೂ ಬ್ಲಿಂಕಿನ್​ ಮಾತುಕತೆ ನಡೆಸಲಿದ್ದಾರೆ. ಇಸ್ರೇಲ್​-ಲೆಬನಾನ್ ಗಡಿಯಲ್ಲಿ ಪರಿಸ್ಥಿತಿ ವಿಷಮಗೊಂಡಿದೆ. ಇಸ್ರೇಲ್​ ಮೇಲೆ ದಾಳಿಗೆ ಲೆಬನಾನ್​ನ ಹಿಜ್ಬುಲ್​​ಗಳಿಗೆ ರಷ್ಯಾ ಶಸ್ತ್ರಾಸ್ತ್ರ ಪೂರೆಕೈ ಮಾಡ್ತಿರುವ ಆರೋಪ ಕೇಳಿ ಬಂದಿದೆ.

ಇನ್ನು, ಇಸ್ರೇಲ್​ ಮೇಲೆ ಭೀಕರ ದಾಳಿಗೆ ಲೆಬನಾನ್ ಸಜ್ಜಾಗಿದೆ. ಹಿಜ್ಬುಲ್ಲಾ ಸರ್ವೋಚ್ಚ ನಾಯಕ, ಪ್ರಾರ್ಥನೆಯ ಬಳಿಕ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇಸ್ರೇಲ್​ನಲ್ಲಿರುವ ಕರ್ನಾಟಕದ ಕರಾವಳಿಗರಲ್ಲಿ ಮತ್ತೆ ಆತಂಕ ಮನೆ ಮಾಡಿದ್ದು, ತಾಯ್ನಾಡಿಗೆ ಮರಳಲು ಸಿದ್ಧರಾಗ್ತಿದ್ದಾರೆ. ಒಂದೆಡೆ ಹಮಾಸ್​ ಉಗ್ರರ ಸಂಹಾರಕ್ಕೆ ಇಸ್ರೇಲ್​, ಗಾಜಾ ನಗರವನ್ನು ಸುತ್ತುವರಿದಿದೆ. ಇತ್ತ ಲೆಬನಾನ್​ನ ಹಿಜ್ಬುಲ್​ ಉಗ್ರರು, ಇಸ್ರೇಲ್​ನತ್ತ ಭೀಕರ ದಾಳಿಗೆ ಸಜ್ಜಾಗಿದ್ದು, ಆತಂಕದ ಕಾರ್ಮೋಡ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಾಜಾ ನಗರ ಸುತ್ತುವರಿದ ಇಸ್ರೇಲ್​ ಸೇನೆ.. ಒತ್ತೆಯಾಳಾಗಿದ್ದ 74 ಅಮೆರಿಕನ್ನರು ಈಜಿಫ್ಟ್​ಗೆ ಶಿಫ್ಟ್​

https://newsfirstlive.com/wp-content/uploads/2023/11/israle.jpg

Load More