ಇನ್ನು ನಿಲ್ಲದ ಹಮಾಸ್-ಇಸ್ರೇಲ್ ನಡುವಿನ ಯುದ್ಧದ ಭೀತಿ
ಯುದ್ಧದಿಂದ ದಿನಲೂ ಸಾವನ್ನಪ್ಪುತ್ತಿದ್ದಾರೆ ಸಾಮಾನ್ಯ ಜನರು
ಏರ್ಸ್ಟ್ರೈಕ್ಗೆ ಪ್ರತೀಕಾರ ಇದು ಎಂದು ಒತ್ತೆಯಾಳುಗಳ ಕೊಲೆ
ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. 7 ಸಾವಿರಕ್ಕೂ ಅಧಿಕ ಅಮಾಯಕರು ಸಾವನ್ನಪ್ಪಿದರು 2 ದೇಶಗಳ ನಡುವಿನ ವೈರತ್ವ ಇನ್ನಷ್ಟು ಹೆಚ್ಚುತ್ತಲಿದೆ. ಅದರಂತೆ ಹಮಾಸ್ ಭಯೋತ್ಪಾದಕರ ಭೀಬತ್ಸ್ಯ ಕೃತ್ಯವೊಂದು ಮುನ್ನೆಲೆಗೆ ಬಂದಿದ್ದು, ಸುಮಾರು 50 ಇಸ್ರೇಲ್ನ ಒತ್ತೆಯಾಳುಗಳನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ನಿರಂತರವಾಗಿ ಗಾಜಾಸ್ಟ್ರಿಪ್ ಮೇಲೆ ಇಸ್ರೇಲ್ ಏರ್ಸ್ಟ್ರೈಕ್ ಮಾಡುತ್ತಿರುವ ಕಾರಣ ನಾವು 50 ಒತ್ತೆಯಾಳು ಇಸ್ರೇಲಿಗರನ್ನು ಕೊಲೆ ಮಾಡಿದ್ದೇವೆ ಎಂದು ಹಮಾಸ್ ಭಯೋತ್ಪಾದಕರು ಹೇಳಿದ್ದಾರೆ ಎನ್ನಲಾಗಿದೆ. ಹಮಾಸ್ ಭಯೋತ್ಪಾದಕರ ನಿಯಂತ್ರದಲ್ಲಿರುವ ಯುದ್ಧದ ಟ್ಯಾಂಕರ್, ಸ್ಫೋಟಕ ವಸ್ತುಗಳು, ದಳಗಳು ಇರುವ ಗಾಜಾದ ಪ್ರದೇಶದ ಮೇಲೆ ಇಸ್ರೇಲ್ ಬಾಂಬ್ ಹಾಕಿ ನಾಶ ಮಾಡಿದೆ. ಇದಕ್ಕೆ ಪ್ರತೀಕಾರವಾಗಿ ಹಮಾಸ್ ಉಗ್ರರು 50 ಇಸ್ರೇಲಿಗರನ್ನು ಬಲಿ ಪಡೆದಿದ್ದಾರೆ ಎಂದು ಎನ್ನಲಾಗಿದೆ.
ಇಲ್ಲಿವರೆಗೆ ಇಸ್ರೇಲ್ನ ಏರ್ಸ್ಟ್ರೈಕ್ನಿಂದ ಗಾಜಾದಲ್ಲಿ ಸುಮಾರು 7,028 ಜನ ಸಾವನ್ನಪ್ಪಿದ್ದಾರೆ ಎಂದು ಹಮಾಸ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಹಮಾಸ್ ಇಸ್ರೇಲ್ಗೆ ನುಗ್ಗಿ ದಾಳಿ ಮಾಡಲು ಪ್ರಾರಂಭದಿಂದ ಇಲ್ಲಿವರೆಗೆ 1,400 ಇಸ್ರೇಲಿಗರು ಮೃತಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ