ಬಜರಂಗಬಲಿ ದೇವರೇ ಅಲ್ಲ ಅಂದಿದ್ದೇಕೆ ಆದಿಪುರುಷ ಸಂಭಾಷಣೆಗಾರ?
ಶ್ರೀರಾಮ, ರಾವಣ, ಸೀತೆ ಕುರಿತ ವಿವಾದ ಆಯ್ತು ಈಗ ಹನುಮನ ಸರದಿ
ಆದಿಪುರುಷ ಸಿನಿಮಾದ ವಿವಾದಗಳ ಪಟ್ಟಿಗೆ ಜೈ ಬಜರಂಗಬಲಿ ಎಂಟ್ರಿ!
ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿರುವ ಆದಿಪುರುಷ ಸಿನಿಮಾ ತಂಡ ಮತ್ತೊಂದು ಇಕ್ಕಟ್ಟಿಗೆ ಸಿಲುಕಿದೆ. ರಾಮ, ರಾವಣ, ಸೀತೆ ಕುರಿತಾದ ಆದಿಪುರುಷನ ರಾಮಾಯಣಕ್ಕೆ ಬಹಳಷ್ಟು ಟೀಕೆಗಳು ವ್ಯಕ್ತವಾಗಿದೆ. ಇದೀಗ ರಾಮನ ಭಂಟ ಹನುಮನ ಬಗ್ಗೆ ಆದಿಪುರುಷ ಚಿತ್ರ ತಂಡ ವಿವಾದಾತ್ಮಕ ಹೇಳಿಕೆ ನೀಡಿದ್ದು ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಆದಿಪುರುಷ ಚಿತ್ರದ ವಿವಾದಾತ್ಮಕ ಸಂಭಾಷಣೆಯ ಬಗ್ಗೆ ಗೀತ ರಚನೆಕಾರ ಮನೋಜ್ ಮುಂತಾಶಿರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಬಜರಂಗಬಲಿ ಹನುಮಾನ್ ಭಗವಾನ್ ನಹೀ ಹೈ. ಭಕ್ತ್ ಹೈ ಎಂದಿದ್ದಾರೆ. ಅಂದ್ರೆ ಮನೋಜ್ ಮುಂತಾಶಿರ್ ಪ್ರಕಾರ ಹನುಮಾನ್ ದೇವರಲ್ಲ, ಕೇವಲ ಭಕ್ತ. ಅವನ ಭಕ್ತಿಗೆ ಆ ಶಕ್ತಿ ಇದ್ದುದ್ದರಿಂದ ನಾವು ಅವನನ್ನು ಭಗವಾನ್ ರೀತಿ ಕಾಣುತ್ತೇವೆ ಎಂದು ವಾದಿಸಿದ್ದಾರೆ.
ಬಜರಂಗಬಲಿ ದೇವರೇ ಅಲ್ಲ ಅನ್ನೋ ಮನೋಜ್ ಮುಂತಾಶಿರ್ ಅವರ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ. ಹನುಮನ ಭಕ್ತರು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂಥವರು ಮೊದಲು ಮಾಡಬೇಕಾದ ಕೆಲಸವೇನೆಂದರೆ ಸಂದರ್ಶನಗಳನ್ನ ನೀಡುವುದನ್ನೇ ನಿಲ್ಲಿಸಬೇಕು. ಇವರು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದೆಲ್ಲಾ ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾ ಹೊಸ ವಿವಾದ.. ಭಾರತ ಚಿತ್ರಗಳ ಮೇಲೆ ನಿಷೇಧ ಹೇರಿದ ನೇಪಾಳ ಸರ್ಕಾರ!
ಆದಿಪುರುಷ ಚಿತ್ರ ಈಗಾಗಲೇ ಹಲವು ವಿಷಯಗಳಲ್ಲಿ ವಿವಾದಕ್ಕೆ ಗುರಿಯಾಗಿದೆ. ಆದಿಪುರುಷ ಚಿತ್ರದ ರಾಮ, ರಾವಣ, ಸೀತೆಯ ಕಥೆಗೂ ರಾಮಾಯಣಕ್ಕೂ ಸಂಬಂಧವೇ ಇಲ್ಲ ಎನ್ನಲಾಗುತ್ತಿದೆ. ಹೀಗಿರುವಾಗ ಆಂಜನೇಯನನ್ನು ಪೂಜಿಸಿ, ಆರಾಧಿಸುವವರ ಮಧ್ಯೆ ಹನುಮ ದೇವರೇ ಅಲ್ಲ ಅನ್ನೋ ಹೇಳಿಕೆಯಿಂದ ಮತ್ತೊಂದು ಕಿಚ್ಚು ಹಚ್ಚಿದೆ. ಆದಿಪುರುಷ ಸಿನಿಮಾದ ಈ ವಿವಾದಗಳ ಸರಮಾಲೆ ಮತ್ತಷ್ಟು ಬೆಳೆಯುವ ಸಾಧ್ಯತೆಯೇ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ