‘ಭಗತ್ ಸಿಂಗ್’ ಎಂದೊಡನೆ ಆಗುವ ರೋಮಾಂಚನ ವರ್ಣಿಸಲಾಗದು!
ಸಾವು ಹುತಾತ್ಮ ಭಗತ್ ಸಿಂಗ್ಗೆ ಭಯ ಹುಟ್ಟಿಸಲೇ ಇಲ್ಲ ನಂಬಲೇಬೇಕು
ಹುತಾತ್ಮ ಭಗತ್ ಎಂಬ ಈ ಕ್ರಾಂತಿ ಕಿಡಿ ಬಗ್ಗೆ ನಿಮಗೆಷ್ಟು ಗೊತ್ತು? ಲೇಖನ ಓದಿ
ಈಗಲೂ ‘ಭಗತ್ ಸಿಂಗ್’ ಎಂದೊಡನೆ ಆಗುವ ರೋಮಾಂಚನ ವರ್ಣಿಸಲಾಗದು. ನಮ್ಮ ನಿಮ್ಮಂತೆ ಶಾಲೆ ಕಾಲೇಜುಗಳಿಗೆ ಓಡಾಡಿ, ಪ್ರೀತಿ ಪ್ರೇಮದ ಹಾಡು ಹಾಡುತ್ತ, ಜಗತ್ತಿನ ಸುಖ, ಭೋಗಗಳನ್ನು ಕಣ್ಣರಳಿಸಿ ನೋಡುತ್ತಾ, ಬದುಕು ಅನುಭವಿಸಬೇಕಾದ ಭಗತ್; 24ರ ಹೊಸ್ತಿಲಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಜಗತ್ತಿಗೆ ಕೇಳುವಂತೆ ಗುನುಗುತ್ತಾ ನೇಣಿಗೆ ಕೊರಳಿಟ್ಟ ಭಗತ್ ಸಾವು ಕಣ್ಣಲ್ಲಿ ನೀರು ತರಿಸುತ್ತಿಲ್ಲ; ರಕ್ತ ಒಸರಿಸುತ್ತದೆ. ಅಳುವ ಧ್ವನಿ ಕೇಳುತ್ತಿಲ್ಲ; ಘೋಷಣೆಯ ಮೊಳಗು ಪ್ರತಿಧ್ವನಿಸುತ್ತದೆ. ಮನಸ್ಸಿಗೆ ಅಳುಕು ಆವರಿಸುತ್ತಿಲ್ಲ; ಪ್ರತಿಭಟಿಸುವ ಕೆಚ್ಚು ಉಕ್ಕುತ್ತದೆ. ಭಗತ್ ನಮ್ಮೊಂದಿಗಿಲ್ಲ ಎನ್ನಿಸುತ್ತಿಲ್ಲ; ಪ್ರತಿಕ್ಷಣ ನಮ್ಮೊಳಗೆ ಹುಟ್ಟಿಬರುವ ಅನುಭವವಾಗುತ್ತಿದೆ.
ವಂಶದ ಹಿರಿಮೆಯಿಂದ ಕೆಲವರು ನಾಯಕರಾಗುತ್ತಾರೆ; ಇನ್ನು ಕೆಲವರು ಹಣ, ಜಾತಿ ಇತ್ಯಾದಿ ಅನ್ಯ ಮಾರ್ಗಗಳಿಂದ ನಾಯಕರಾಗುತ್ತಾರೆ. ಇವರೆಲ್ಲಾ ನಾಯಕರೆಂದು ಸ್ವಯಂ ಘೋಷಿಸಲ್ಪಟ್ಟವರು. ಆದರೆ ಭಗತ್ ದೇಶಕ್ಕೆ ಪರಿಚಯವಾಗಿದ್ದು ವಂಶ, ಹಣ, ಈ ಸ್ವಯಂಘೋಷಿತ ಅಧಿಕಾರದಿಂದಲ್ಲ. ಬದಲಾಗಿ ಚಳುವಳಿಯ ಮೂಲಕ. ದೇಶವನ್ನು ಆಳಲು ಅಧಿಕಾರವೇ ಬೆಂಕೆಂದೇನಿಲ್ಲ. ಅಧಿಕಾರವ ಪಡೆದವರು ಹೇಳ ಹೆಸರಿಲ್ಲದಂತಾಗಿದ್ದಾರೆ. ಆದರೆ ಭಗತ್‍ಸಿಂಗ್ ನಿಜವಾದ ಅರ್ಥದಲ್ಲಿ ಈ ದೇಶವನ್ನು ಆಳಿದವನು; ದೇಶಪ್ರೇಮಿಗಳು, ಯುವಜನರು, ವಿದ್ಯಾರ್ಥಿಗಳು, ಶೋಷಿತರು ಭಗತ್‍ಸಿಂಗ್‍ನನ್ನು ಮನೆ ಮಗನನ್ನಾಗಿ ನೋಡಿದರು; ಒಡಹುಟ್ಟಿದ ಸೋದರನನ್ನಾಗಿ ನೋಡಿದರು. ಮಾರ್ಗದರ್ಶಕನನ್ನಾಗಿ ನೋಡಿದರು. ಹೋರಾಟದ ಪಡೆಯ ಸೇನಾನಿಯನ್ನಾಗಿ ನೋಡಿದರು. ಈತನೇ ನಮ್ಮ ನಾಯಕನಾಗಬೇಕೆಂದು ಹಂಬಲಿಸಿದರು.
ಸಾವು ಈತನಿಗೆ ಭಯ ಹುಟ್ಟಿಸಲೇ ಇಲ್ಲ. ನೇಣುಗಂಬಕ್ಕೆ ಏರುವ ಮೊದಲ ದಿನ ಪ್ರಾಣನಾಥ ನಿನ್ನ ಅಂತಿಮ ಇಚ್ಚೆ ಏನು? ಎಂದು ಭಗತ್‍ಸಿಂಗ್‍ಗೆ ಕೇಳಿದಾಗ ಇಷ್ಟೇ: ಮತ್ತೆ ನನಗೆ ಜನ್ಮ ಲಭಿಸಲಿ ಮತ್ತು ಮಾತೃಭೂಮಿಗೆ ಇನ್ನೂ ಅಧಿಕವಾದ ಸೇವೆ ಸಲ್ಲಿಸಲು ಅವಕಾಶ ದೊರೆಯಲಿ ಎಂದು ಸ್ವಲ್ಪವೂ ವಿಚಲಿತನಾಗದೆ ನುಡಿಯುತ್ತಾನೆ. ಸಾವಿಗೆ ಕೆಲವೇ ದಿನಗಳ ಮೊದಲು ತನ್ನ ಗೆಳೆಯರಿಗೆ ಬರೆದ ಪತ್ರದಲ್ಲಿ ಬದುಕಿರಬೇಕೆಂಬ ಆಸೆ ನನ್ನಲ್ಲೂ ಇರಬೇಕಾದದ್ದು ಸಹಜವಾಗಿದೆ. ನಾನಿದನ್ನು ಮುಚ್ಚಿಡ ಬಯಸುವುದಿಲ್ಲ. ಆದರೆ ಬದುಕಿರಬೇಕಾದರೆ ನನ್ನದೊಂದು ಶರತ್ತಿದೆ. ನಾನು ಕೈದಿಯಾಗಿ ಜೀವಿಸಲು ಬಯಸುವುದಿಲ್ಲ.
ನನ್ನ ಹೆಸರು ಭಾರತದ ಕ್ರಾಂತಿ ಪತಾಕೆ
ನನ್ನ ಹೆಸರು ಭಾರತದ ಕ್ರಾಂತಿಯ ಪತಾಕೆಯಾಗಿ ಹೋಗಿದೆ. ಮತ್ತು ನನ್ನ ಕ್ರಾಂತಿಕಾರಿ ಪಕ್ಷದ ಆದರ್ಶ ಹಾಗೂ ಬಲಿದಾನಗಳು ನನ್ನನ್ನು ಬಲು ಎತ್ತರಕ್ಕೇರಿಸಿದೆ. ಎಷ್ಟೊಂದು ಎತ್ತರಕ್ಕೆಂದರೆ ನಾನೇನಾದರೂ ಬದುಕಿದ್ದರೆ ಅಷ್ಟು ಎತ್ತರಕ್ಕೆ ಏರಲಾರದಷ್ಟು ಮಟ್ಟಿಗೆ, ಆದರೆ ನಾನು ಸ್ಥೈರ್ಯದಿಂದ ನಗುನಗುತ್ತಾ ನೇಣುಗಂಬವನ್ನೇರಿದರೆ ಭಾರತದ ಮಾತೆಯರು ತಮ್ಮ ಮಕ್ಕಳನ್ನು ಭಗತ್‍ಸಿಂಗನನ್ನಾಗಿ ಮಾಡಲು ತವಕಿಸಿಯಾರು ಮತ್ತು ದೇಶಕ್ಕಾಗಿ ಬಲಿದಾನ ಮಾಡಲು ತಯಾರಿರುವವರ ಸಂಖ್ಯೆ ಎಷ್ಟು ಹೆಚ್ಚಾಗುತ್ತದೆಯೆಂದರೆ ಕ್ರಾಂತಿಯನ್ನು ತಡೆಗಟ್ಟುವದು ಸಾಮ್ರಾಜ್ಯಶಾಹಿಯ ನಗ್ನ ರಾಕ್ಷಸೀ ಶಕ್ತಿಗೆ ಕೇವಲ ಅಸಾಧ್ಯವಾದ ಮಾತಾಗುತ್ತದೆ. (ಜಿ.ರಾಮಕೃಷ್ಣ 1997;ಪು.159) ಎಂದು ಕೊನೆಯ ಪರೀಕ್ಷೆಯಲ್ಲಿಯೂ ಉತ್ತೀರ್ಣನಾಗಲು ಎದುರು ನೋಡುವುದಾಗಿ ಬರೆದಿದ್ದ.
ತನ್ನ ಆದರ್ಶದ ಜಾರಿಗಾಗಿ ಆತ ‘ನೌಜವಾನ್ ಸಭಾ’ ಎನ್ನುವ ಯುವ ಸಂಘಟನೆಯನ್ನು ಕಟ್ಟಿಕೊಂಡ. ಸಮಗ್ರ ಭಾರತದ ಕಾರ್ಮಿಕ ಹಾಗೂ ರೈತರ ಸಂಪೂರ್ಣ ಸ್ವಾತಂತ್ರ್ಯದ ಸಮಾಜವಾದಿ ಗಣರಾಜ್ಯವೊಂದನ್ನು ಸ್ಥಾಪಿಸುವುದು; ಯುನೈಟೆಡ್ ಇಂಡಿಯನ್ ನೇಶನ್ಸ್ ಸ್ಥಾಪಿಸಲು ಯುವಕರ ಹೃದಯದಲ್ಲಿ ದೇಶಪ್ರೇಮವನ್ನು ತುಂಬುವುದು; ರೈತರನ್ನು ಮತ್ತು ಕಾರ್ಮಿಕರನ್ನು ಸಂಘಟಿಸುವದು ಮತ್ತು ಕೋಮುವಾದೀಕರಣದಿಂದ ಮುಕ್ತವಾದ ಆರ್ಥಿಕ ಸ್ವಾಲಂಬನೆಯ ಕೈಗಾರಿಕಾ ಹಾಗೂ ಸಾಮಾಜಿಕ ಚಳುವಳಿಯನ್ನು ಸಂಘಟಿಸುವು ಆತನ ಗುರಿಯಾಗಿತ್ತು.
ತಾನು ಮಾಡುವ ಕೆಲಸದ ಬಗ್ಗೆ ಹೆಮ್ಮೆ, ಸೈದ್ಧಾಂತಿಕ ಸ್ಪಷ್ಟತೆ, ತಾನು ಪ್ರತಿನಿಧಿಸುವ ರೈತ ಕಾರ್ಮಿಕ ಅಸ್ಪ್ರಶ್ಯ, ಮಹಿಳೆ ಇತ್ಯಾದಿ ಸಮುದಾಯದ ಕುರಿತಾದ ಕಾಳಜಿ ಇದ್ದಾತ ಮಾತ್ರ ಹೋರಾಟದ ಮಾರ್ಗದಲ್ಲಿ ಯಾವ ಕ್ಷಣವೂ ಬಂದೊದಗಬಹುದಾದ ‘ಸಾವು’ ನನ್ನ ಬದುಕಿನ ಅಂತ್ಯ ಎಂದು ಭಾವಿಸದೆ ಅದನ್ನು ತಾನು ಪಾಲ್ಗೊಂಡ ಜನ ಚಳುವಳಿಯ ಭಾಗವೆಂದು ಆಹ್ವಾನಿಸಬಲ್ಲ. ಪುಸ್ತಕ ಪ್ರಕಟಣೆ, ಕರಪತ್ರ ಹಂಚಿಕೆ, ಭಾಷಣ, ಮೆರವಣಿಗೆ , ಮುಷ್ಕರ, ಹರತಾಳಗಳ ಮೂಲಕ ಸ್ವಾತಂತ್ರ್ಯದ ಕುರಿತ ಹಂಬಲವನ್ನು, ಅಗತ್ಯತೆಯನ್ನು ಜನಸಾಮಾನ್ಯರಲ್ಲಿ ಬಿತ್ತಿ ಬೆಳೆಸುವ ಕ್ರಾಂತಿಕಾರಿಯು ತನ್ನ ಸಾವೂ ಕೂಡ ಈ ಕಾರ್ಯಕ್ರಮದ ನೂರು ಪಟ್ಟು ಸಾವಿರ ಪಟ್ಟು ಹೆಚ್ಚು ಪರಿಣಾಮಕಾರಿಯಾದದ್ದು ಎಂದು ತಿಳಿಯುತ್ತಾನೆ. ಭಗತ್ ಅದನ್ನೇ ಪ್ರತಿಪಾದಿಸುತ್ತಾನೆ.
“ಕ್ರಾಂತಿ ಎಂದರೆ ರಕ್ತಗೆಂಪಿನ ಸಂಘರ್ಷವೇ ಆಗಬೇಕೆಂಬ ನಿಯಮವೇನೂ ಇಲ್ಲ. ಕ್ರಾಂತಿಯು ಬಾಂಬು, ಪಿಸ್ತೂಲುಗಳ ಆರಾಧನೆಯಲ್ಲ.ಕ್ರಾಂತಿ ಎಂದರೆ ಸ್ಪಷ್ಟವಾಗಿ ಅನ್ಯಾಯದ ಬುನಾದಿಯ ಮೇಲೆ ರಚಿತವಾಗಿರುವ ಇಂದಿನ ವ್ಯವಸ್ಥೆ ಬದಲಾಗಬೇಕು ಎಂದರ್ಥ.” ಎಂದು ಹೇಳಿದ ಭಗತ್ ಹಿಂಸೆಯನ್ನು ಆರಾಧನೆ ಮಾಡಿದವನಲ್ಲ. ಪಾರ್ಲಿಮೆಂಟಿನ ಮೇಲೆ ಬಾಂಬ್ ಹಾಕುವಾಗಲೂ ಜನರಿಲ್ಲದ ಸ್ಥಳವನ್ನೇ ನೋಡಿ ಎಸೆಯುತ್ತಾನೆ. ‘ಇಂಕ್ವಿಲಾಬ್ ಜಿಂದಾಬಾದ್’ ಎನ್ನುವ ಘೋಷಣೆಯೊಂದಿಗೆ ಸಾಮ್ರಾಜ್ಯಶಾಹಿಗೆ ಸಿಂಹಸ್ವಪ್ನನಾಗಿದ್ದ ಈತ 1907 ಸಪ್ಟೆಂಬರ್ 27 ರಂದು ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದ. 24 ರ ಹರೆಯದ ಭಗತ್ ಸಿಂಗ್ ತನ್ನ ಸಾವು ಚಳುವಳಿಯ ಒಂದು ಭಾಗ ಎಂದುಕೊಂಡೇ ಹೋರಾಡುತ್ತಾ ಹೋರಾಡುತ್ತಾ 1931 ಮಾರ್ಚ 23 ರಂದು ಸಂಜೆ7 ಗಂಟೆ 33ನಿಮಿಷಕ್ಕೆ ಹುತಾತ್ಮನಾಗುತ್ತಾನೆ. ಈತನೊಂದಿಗೆ 22 ರ ಹರೆಯದ ರಾಜಗುರು, 23ರ ಹರೆಯದ ಸುಖದೇವ ಸುಖದೇವ ಕೂಡ.
ಹಿಂದಿನಿಂದಲೂ ಸಂಘ ಪರಿವಾರದವರು ಭಗತ್‍ಸಿಂಗ್‍ನನ್ನು (ಅವನ ಆಲೋಚನೆಯನ್ನು ಕೈಬಿಟ್ಟು) ತಮ್ಮ ಐಕೋನ್ ಮಾಡಿಕೊಂಡಿದ್ದಾರೆ. ಇದರಿಂದ ಸಂಘಪರಿವಾರಕ್ಕೆ ಯಾವ ತೊಂದರೆ ಆಗದಿದ್ದರೂ ಭಗತ್ ಸಿಂಗ್ ವ್ಯಕ್ತಿತ್ವಕ್ಕೆ ಮಸಿ ಬಳಿದಂತಾಗುತ್ತದೆ. ಭಗತ್‍ಸಿಂಗ್ ತಮ್ಮ 23 ನೇ ವಯಸ್ಸಿನಲ್ಲಿ ಬ್ರಿಟೀಷರಿಂದ ಗಲ್ಲಿಗೇರಿದ್ದು (ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಹುತಾತ್ಮ) ಮಾತ್ರ ಸತ್ಯ ಅಲ್ಲ: ಆತ ಪ್ರತಿಪಾದಿಸಿದ ಸ್ವಾತಂತ್ರ್ಯ ಯಾವುದು ಏನ್ನುವುದು ಮುಖ್ಯವಾಗುತ್ತದೆ. ಹಲವು ಜನ ಗಲ್ಲಿಗೇರಿಸಲ್ಪಟ್ಟು ಹುತಾತ್ಮರಾಗಿದ್ದಾರೆ. ಆದರೆ ಭಗತ್‍ಸಿಂಗ್, ಸುಖದೇವ, ರಾಜಗುರು ಮತ್ತು ಅವನ ಸಂಗಾತಿಗಳು ದೇಶದ ಯುವಜನರ ಕಣ್ಮಣಿ ಆಗಿದ್ದು ಕೇವಲ ಅವರು ಬ್ರಿಟೀಷರಿಂದ ಗಲ್ಲಿಗೇರಿದರು ಎಂಬ ಭಾವನಾತ್ಮಕ ಕಾರಣಕ್ಕಾಗಿ ಅಲ್ಲ. ಅವನು ಪ್ರತಿಪಾದಿಸಿದ ಜ್ಯಾತ್ಯಾತೀತ, ಸಮಾಜವಾದಿ ಸ್ವಾತಂತ್ರ್ಯದ ಸ್ವರೂಪದ ಕಾರಣದಿಂದಾಗಿ ಆವರೆಗಿನ ಸ್ವಾತಂತ್ರ್ಯದ ಕುರಿತ ಆಲೋಚನೆಗೆ ಪರ್ಯಾಯ ದಾರಿ ತೋರಿಸಿದ ಕಾರಣಕ್ಕೆ.
ದುಡಿಯುವ ವರ್ಗದ ಅಧಿಕಾರ ಅಸ್ತಿತ್ವಕ್ಕೆ ಬರಬೇಕು ಎಂದಿದ್ದ ಭಗತ್
ಭಗತ್ ಸಿಂಗ್ ಹೇಳುತ್ತಾರೆ ದುಡಿಯುವ ವರ್ಗದ ಅಧಿಕಾರ ಅಸ್ತಿತ್ವಕ್ಕೆ ಬರಬೇಕು. ಕ್ರಾಂತಿಯು ಮಾನವ ಜನಾಂಗದ ಪ್ರಶ್ನಾತೀತವಾದ ಹಕ್ಕು. ಸ್ವಾತಂತ್ರ್ಯವು ಎಂದೂ ಕ್ಷಯವಾಗದ ಆ ಜನ್ಮಸಿದ್ಧ ಹಕ್ಕು. ಸಮಾಜದ ನಿಜವಾದ ಆಧಾರಸ್ಥಂಭ ದುಡಿಮೆ. ದುಡಿಮೆಗಾರರ ಅಂತಿಮ ಗುರಿ ಜನತೆಯ ಸಾರ್ವಭೌಮ ಎನ್ನುವುದರೊಂದಿಗೆ ಸಾರ್ವಭೌಮ ಎಂದರೆ…… ಆಮೂಲಾಗ್ರವಾದ ಬದಲಾವಣೆ ಅತ್ಯವಶ್ಯಕ. ಅದನ್ನು ತಿಳಿದವರ ಕರ್ತವ್ಯ ಸಮಾಜವನ್ನು ಸಮಾಜವಾದಿ ಆಧಾರದ ಮೇಲೆ ಪುನರ್ ರಚಿಸುವುದಾಗಿದೆ ಎಂದು ಹೇಳುತ್ತಾನೆ. ಹಾಗಾಗಿಯೇ ಆತ ಬಂಡವಾಳಶಾಹಿ ಪದ್ಧತಿ ಮತ್ತು ಸಾಮ್ರಾಜ್ಯಶಾಹಿ ಯುದ್ಧಗಳ ಪಿಡುಗಿನಿಂದ ಮಾನವ ಜನಾಂಗಕ್ಕೆ ಮುಕ್ತಿ ದೊರಕಬೇಕು ಎಂದು ಹೇಳುತ್ತಾ ಬಂದಿದ್ದು.
ಭಗತ್‍ಸಿಂಗ್ ಕೇವಲ ಭಾವನಾತ್ಮಕ ಕಾರಣದಿಂದ ಸಿಡಿದೆದ್ದ ಕ್ರಾಂತಿಕಾರಿ ಯುವಕ ಆಗಿರಲಿಲ್ಲ. ಬದುಕಿನ ಕೊನೆಯವರೆಗೂ ಆತ ಹೆಚ್ಚೆಚ್ಚು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಲೇ ಇದ್ದ. 1917 ರಲ್ಲಿ ರಷ್ಯಾದಲ್ಲಿ ಸಂಭವಿಸಿದ ಸಮಾಜವಾದಿ ಕ್ರಾಂತಿಯಿಂದ ಆತ ಪ್ರೇರಿತಗೊಂಡಿದ್ದ. ಹಾಗಾಗಿ ಮುಂದೆ ತಮ್ಮ ಸಂಘಟನೆಗೆ ಹಿಂದೂಸ್ಥಾನ ಸಮಾಜವಾದಿ ಸಂಘಟನೆ ಎಂದು ಪುನರ್ನಾಮಕರಣ ಮಾಡಿದರು.
“ಧಾರ್ಮಿಕ ನಂಬಿಕೆಯು ಪ್ರತಿಯೊಬ್ಬನ ವೈಯಕ್ತಿಕ ಹಾಗೂ ಖಾಸಗಿ ವಿಷಯ ಎಂದೇ ನಂಬಿದ್ದ ಆತ ಹಿಂದೂ & ಮುಸಿಂ ಮೂಲಭೂತವಾದವನ್ನು ತಿರಸ್ಕರಿಸುತ್ತಲೇ ಬಂದಿದ್ದಾನೆ. ಅವನ ಬಗ್ಗೆ ಆತನ ಸಂಗಾತಿ ಅಜಯ್ ಘೋಷ್ ಹೇಳುವುದು ಹೇಗೆ: ಯಾವಾಗಲೂ ಅಧ್ಯಯನವೆಂದರೆ ಅವನಿಗೆ ಪ್ರಾಣ. ಜೈಲಿನಲ್ಲಿವನು ಸಮಾಜವಾದಿ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ. ನಮ್ಮ ಪೈಕಿ ಸಮಾಜವಾದಿ ಚಿಂತನೆಯಲ್ಲಿ ತೊಡಗಿದವರಲ್ಲಿ ಬಹುಶಃ: ಅವನೇ ಮೊದಲಿಗ.
ಕಟ್ಟಾ ನಾಸ್ತಿಕ ಹಿಂದಿನ ಕೆಲವು ಕ್ರಾಂತಿಕಾರಿಗಳಿಗಿದ್ದ ಧಾರ್ಮಿಕ ನಂಬಿಕೆ ಅವನಲ್ಲಿ ಸ್ವಲ್ಪವೂ ಇರಲಿಲ್ಲವೆನ್ನಬಹುದು. (ಸಂಪೂರ್ಣಾರ್ಥದಲ್ಲಿ ಅವನೊಬ್ಬ ಮಾಕ್ರ್ಸವಾದಿಯಾದವನೆಂದು ಹೇಳಿದರೂ ಅದು ಅತಿಶಯೋಕ್ತಿಯಾದೀತು. ಯಾಕೆಂದರೆ ಆಗ ತಾನೆ ಭಾರತದಲ್ಲಿ ಮಾಕ್ರ್ಸವಾದ ಪ್ರವೇಶಿಸುತ್ತಿದ್ದ ಕಾಲ ಅದು.) 1930 ಜನವರಿ 24 ರಂದು ಕೆಂಪು ಕರವಸ್ತ್ರವನ್ನು ಕುತ್ತಿಗೆಗೆ ಸುತ್ತಿಕೊಂಡು ಬಂದ ಭಗತ್‍ಸಿಂಗ್ ಮತ್ತು ಅವನ ಗುಂಪು ರಷ್ಯಾದಲ್ಲಿ ಕಮ್ಯುನಿಷ್ಠ ಆಡಳಿತವನ್ನು ಜಾರಿಗೆ ತಂದ ಕ್ರಾಂತಿಕಾರಕ ನಾಯಕ ಲೆನಿನ್ ಜನ್ಮ ದಿನಾಚರಣೆಯೆಂದು ಒಂದು ತಂತಿ ಸಂದೇಶವನ್ನು ಮಾಸ್ಕೋದಲ್ಲಿ ನಡೆಯುತ್ತಿರುವ ಮೂರನೇ ಅಂತರಾಷ್ಟ್ರೀಯಕ್ಕೆ ಕಳುಹಿಸಲು ನ್ಯಾಯಾಲಯವನ್ನು ಆಗ್ರಹಿಸುತ್ತಾರೆ. ಆದರೆ ನ್ಯಾಯಾಲಯ ಅವನನ್ನು ತಿರಸ್ಕರಿಸುತ್ತದೆ.
ಆ ತಂತಿ ಸಂದೇಶದಲ್ಲಿ ಲೆನಿನ್ ದಿನವಾದ ಇಂದು ಲೆನಿನ್‍ರ ಭಾವನೆಯನ್ನು ಕಾರ್ಯರೂಪಕ್ಕೆ ಇಳಿಸಲು ಯತ್ನಿಸುತ್ತಿರುವ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ರಷ್ಯಾ ನಡೆಸುತ್ತಿರುವ ಬೃಹತ್ ಪ್ರಯೋಗ ಯಶಸ್ವಿಯಾಗಲಿ ಜಾಗತಿಕ ದುಡಿಯುವ ವರ್ಗದೊಂದಿಗೆ ನಮ್ಮ ದನಿಯನ್ನೂ ಕೂಡಿಸುತ್ತೇವೆ. ದುಡಿಯುವ ವರ್ಗದೊಂದಿಗೆ ವಿಜಯಿಯಾಗುತ್ತದೆ ಎಂದಿತ್ತು. ಬಹುಶಃ ಈ ಸಂದೇಶವೇ ಅವನ ಸೈಂದ್ದಾಂತಿಕ ನಿಲುವನ್ನೂ ಸ್ಪಷ್ಟಪಡಿಸುತ್ತವೆ.
ಆದರೆ ಭಗತ್ ಹುತಾತ್ಮನಾಗಿ ಎಂಟು ದಶಕದ ನಂತರವೂ ಜಾತಿವಾದ, ಬ್ರಷ್ಟಾಚಾರ, ಸ್ವಜನ ಪಕ್ಷಪಾತ, ಹೆಣ್ಣಿನ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ, ಮೌಢ್ಯ-ಕಂದಾಚಾರಗಳು ದೇಶದ ಸಾರ್ವಭೌಮತೆಗೆ ಅಪಾಯಕಾರಿಯಾಗುತ್ತಿರುವ ಈ ಹೊತ್ತಿನಲ್ಲಿ ಎಲ್ಲ ಬಗೆಯ ಸಮಾನತೆ, ಸ್ವಾತಂತ್ರ್ಯ, ಸೋದರತೆಯುಳ್ಳ ಸಮಾಜವಾದಿ ವ್ಯವಸ್ಥೆಯನ್ನು ಪ್ರತಿಪಾದಿಸಿದ ಭಗತ್ ಸಿಂಗ್, ರಾಜಗುರು, ಸುಖದೇವ, ಅಜಾದ್ ಮುಂತಾದವರ ಆಲೋಚನೆಗಳು ಮತ್ತೆ ಮತ್ತೆ ನಮಗೆ ಪ್ರಸ್ತುತ ಆಗಬೇಕಾಗಿದೆ.
ಲೇಖಕರು: ವಿಠಲ್ ಭಂಡಾರಿ, ಸಾಮಾಜಿಕ ಹೋರಾಟಗಾರರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ