newsfirstkannada.com

ನಾಡಿನೆಲ್ಲೆಡೆ 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ.. ಎಲ್ಲೆಲ್ಲೂ ಪಸರಿಸಿದ ಕನ್ನಡದ ಕಂಪು..

Share :

01-11-2023

  ಬೆಂಗಳೂರು ಸೇರಿ ಎಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ

  ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ!

  ಸುವರ್ಣ ಕರ್ನಾಟಕ ಸಂಭ್ರಮ.. ಸಿಂಗಾರಗೊಂಡ ಗದಗ!

ಕನ್ನಡ ತಾಯಿಯ ಜನ್ಮದಿನ ನವೆಂಬರ್ 1 ಬಂದೇ ಬಿಟ್ಟಿದೆ. ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತೆ. ಆದ್ರೆ ಈ ಬಾರಿಯ ರಾಜ್ಯೋತ್ಸವ ಮತ್ತೊಂದು ವಿಶೇಷತೆಗೆ ಕಾರಣವಾಗಿದೆ.. ಚಲುವ ಕನ್ನಡನಾಡಿಗೆ ಸುವರ್ಣ ಸಂಭ್ರಮ.

ಉದಯವಾಗಲಿ ನಮ್ಮ ಚಲುವ ಕನ್ನಡನಾಡು… ಎಲ್ಲಾದರೂ ಇರು ಕನ್ನಡಿಗನಾಗಿರು.. ಮೈಸೂರು ರಾಜ್ಯ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಆಗಿ 50 ವರ್ಷಗಳು ಸಂದಿದೆ.. 50 ವರ್ಷಗಳ ಸಂಭ್ರಮಕ್ಕೆ ಕರುನಾಡು ಸಜ್ಜಾಗಿದೆ.. ಎಲ್ಲೆಲ್ಲೂ ಕನ್ನಡಕಂಪು ಮೈದಳೆದಿದೆ..

ಕರ್ನಾಟಕ ಸುವರ್ಣ ಮಹೋತ್ಸವಕ್ಕೆ ಕನ್ನಡಿಗರು ಸಜ್ಜು!

ಮಾಜಿ ಮುಖ್ಯಮಂತ್ರಿ, ದಿವಂಗತ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಅಂದ್ರೆ 1973ರ ನವೆಂಬರ್ 1ರಂದು ಮೈಸೂರು ರಾಜ್ಯ ಕರ್ನಾಟಕ ಆಗಿತ್ತು. 50 ವರ್ಷಗಳ ಸಂಭ್ರಮಕ್ಕೆ ಈಗ ಕರುನಾಡು ಸಜ್ಜಾಗಿದೆ. ಬೆಂಗಳೂರು ಸೇರಿ ಎಲ್ಲೆಡೆ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ.. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನಡೆಸಲಿದ್ದಾರೆ. ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲೂ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.

ಅತ್ತ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದೆ.. ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಘಟನೆಗಳು ಅದ್ಧೂರಿ ತಯಾರಿ ಮಾಡಿಕೊಂಡಿವೆ.. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಗ್ಯಾಲರಿ ಹಾಗೂ ಚನ್ನಮ್ಮ ಮೂರ್ತಿಗೆ ಬಣ್ಣ ಬಳಿದಿದ್ದು ಇಡೀ ಚನ್ನಮ್ಮ. ವೃತ್ತ ಕೆಂಪು ಮತ್ತು ಹಳದಿ ಬಣ್ಣ ಹೊದ್ದು ನವವಧುವಿನಂತೆ ಕಂಗೊಳಿಸುತ್ತಿದೆ. ರಾಜ್ಯೋತ್ಸವದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ.ಕರವೇ ಶಿವರಾಮೇಗೌಡ ಬಣ ಹಾಗೂ ಕರವೇ ನಾರಾಯಣಗೌಡ ಬಣ ಸೇರಿ ಸುಮಾರು 170ಕ್ಕೂ ಹೆಚ್ಚು ಸಂಘಟನೆಗಳಿಂದ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ಎಲ್ಲೆಲ್ಲೂ ಕನ್ನಡ ಧ್ವಜಗಳು ರಾರಾಜಿಸುತ್ತಿವೆ.

ಕೋಟೆನಾಡು ಚಿತ್ರದುರ್ಗದಲ್ಲಿ ಬರಗೇರಮ್ಮದೇವಿ ರಾಜ್ಯೋತ್ಸವ!

ಕೋಟೆನಾಡು ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವಿಗೆ ಕನ್ನಡಮಾತೆ ರಾಜರಾಜೇಶ್ವರಿ ರೀತಿ ವಿಶೇಷ ಅಲಂಕಾರ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯ್ತು. ದೇವಿಗೆ ಪುಷ್ಪಾಲಂಕಾರ ಮಾಡಿ ಅದರ ಮಧ್ಯೆ ಕರ್ನಾಟಕದ ಭೂಪಟದ ಮಧ್ಯೆ ಕೆಂಪು, ಹಳದಿ ಬಣ್ಣದ ಸೇವಂತಿಗೆ ಹಾಗೂ ಗುಲಾಬಿ ಹೂಗಳಿಂದ ದೇವಿಯು ಕಂಗೊಳಿಸುವ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಈ ವೇಳೆ ದೇವಿಯ ದರ್ಶನಕ್ಕೆ ಬಂದ ಭಕ್ತರು ರಾಜಮಾತೆ ಬರಗೇರಮ್ಮನಲ್ಲಿ ಕನ್ನಡತಾಯಿಯನ್ನು ಕಂಡು ಭಕ್ತರು ಧನ್ಯತಾಭಾವ ಮೆರೆದ್ರು.

ಸುವರ್ಣ ಕರ್ನಾಟಕ ಸಂಭ್ರಮ.. ಸಿಂಗಾರಗೊಂಡ ಗದಗ!

ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ನೆಲೆವೀಡು ಗದಗದಲ್ಲಿ ಕರ್ನಾಟಕ ಸುವರ್ಣ ರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತಿದೆ.. 50 ವರ್ಷಗಳ ಹಿಂದೆ ಜರುಗಿದ ಕರ್ನಾಟಕ ನಾಮಕರಣ ಸಂಭ್ರಮೋತ್ಸವದ ಐತಿಹಾಸಿಕ ಕಾರ್ಯಕ್ರಮದ ಮರುಸೃಷ್ಟಿಯ ಕಾರ್ಯಕ್ರಮಕ್ಕೆ ಗದಗ-ಬೆಟಗೇರಿ ಇಡೀ ನಗರ ದೀಪಾಲಂಕಾರ ಹಾಗೂ ಚಿತ್ತಾರಗಳೊಂದಿಗೆ ಮದುಮಗಳೇ ನಾಚುವಂತೆ ಸಿಂಗಾರಗೊಂಡಿದೆ. ಅವಳಿ ನಗರದ ವೃತ್ತಗಳು, ಬೀದಿಗಳು, ರಸ್ತೆಗಳು ಕನ್ನಡ ಭಾವುಟ ಹಾಗೂ ದೀಪಾಲಂಕರಗಳೊಂದಿಗೆ ಮೈಸೂರು ದಸರಾದಂತೆ ಝಗಮಗಿಸುತ್ತಿದೆ.

ಮೈಸೂರಿನಲ್ಲಿ ಡಿ.ದೇವರಾಜು ಅರಸು ನಾಮಫಲಕ!

ಕನ್ನಡಕ್ಕೆ ಆದ್ಯತೆ ನೀಡಿದ್ದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಕಾಲದಲ್ಲಿ ಮೈಸೂರು ರಾಜ್ಯ ಕರ್ನಾಟಕ ಆಗಿದ್ದು ಮೈಸೂರಿನಲ್ಲಿ ಅಳವಡಿಸಿರುವ ಶಿಲಾಫಲಕದಲ್ಲಿ ಇತಿಹಾಸ ದಾಖಲಾಗಿದೆ. 1979ರ ನವೆಂಬರ್ 1ರಂದು ಮೈಸೂರಿನ ಶೇಷಾದ್ರಿ ಅಯ್ಯರ್- ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಶಿಲಾಫಲಕ ನಿರ್ಮಾಣ ಮಾಡಲಾಗಿದೆ.. ದೇವರಾಜ ಅರಸುರಿಗೆ ಸನ್ಮಾನದ ನೆಪದಲ್ಲಿ ಈ ಶಿಲಾಫಲಕವನ್ನು ಅಳವಡಿಸಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ!

 • ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
 • 68 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ
 • ಈ ಬಾರಿಯ ಪ್ರಶಸ್ತಿಗೆ ಪತ್ರಿಕಾ ವಿತರಕರ ಪರಿಗಣನೆ
 • ಇಸ್ರೋ ಸಂಸ್ಥೆಯ ಮುಖ್ಯಸ್ಥ ಎಸ್​.ಸೋಮನಾಥ್
 • ದಿನೇಶ್ ಅಮೀನ್​​ಮಟ್ಟು ಸೇರಿ ಹಲವರಿಗೆ ಪ್ರಶಸ್ತಿ
 • ‘ಕರ್ನಾಟಕ ಸಂಭ್ರಮ 50’ ಶೀರ್ಷಿಕೆಯಡಿ ಪ್ರಶಸ್ತಿ

ಭೂತೆರಾ ನೃತ್ಯ.. ಮಂಗಳಮುಖಿಗೆ ರಾಜ್ಯೋತ್ಸವ ಪ್ರಶಸ್ತಿ!

ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೂತೆರಾ ನೃತ್ಯದ ಮೂಲಕ ಹೆಸರಾಗಿದ್ದ ಮಂಗಳಮುಖಿ ನರಸಪ್ಪನಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಚಿಕ್ಕ ವಯಸ್ಸಲ್ಲೇ ಮನೆಯಿಂದ ಹೊರಬಂದು ಶರಣಪ್ಪಾ ಭೂತೆರವರ ಜೊತೆಗೂಡಿ ಹಳ್ಳಿಹಳ್ಳಿಗೆ ತೆರಳಿ ನೃತ್ಯ ಮಾಡುವ ಕಲೆ ರೂಡಿಸಿಕೊಂಡಿದ್ದರು‌. ಜಾನಪದ ಕ್ಷೇತ್ರದಲ್ಲಿ 4೦ ವರ್ಷಗಳ ಸೇವೆಯನ್ನ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ..ಒಟ್ಟಿನಲ್ಲಿ 50 ವರ್ಷಗಳ ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಸ್ಮರಣೀಯವಾಗಿಸಲು ರಾಜ್ಯದೆಲ್ಲೆಡೆ ಸಂಭ್ರಮದ ಆಚರಣೆ ನಡೆಯುತ್ತಿದೆ.. ಎಲ್ಲೆಲ್ಲೂ ಕನ್ನಡದ ಕಂಪು ಪಸರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಡಿನೆಲ್ಲೆಡೆ 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ.. ಎಲ್ಲೆಲ್ಲೂ ಪಸರಿಸಿದ ಕನ್ನಡದ ಕಂಪು..

https://newsfirstlive.com/wp-content/uploads/2023/11/Kannada.jpg

Load More