ಶಾಲೆಗೆ ಹೋಗೋ ಹೆಣ್ಣುಮಕ್ಕಳ ಬಗ್ಗೆ ಎಚ್ಚರ
ಪೋಷಕರೇ ನೀವು ಓದಲೇಬೇಕಾದ ಸ್ಟೋರಿ
ಪಾಪಾ! ವಿದ್ಯಾರ್ಥಿನಿ ಮೇಲೆ ಇದೆಂಥಾ ದೌರ್ಜನ್ಯ
ಬೆಂಗಳೂರು: ಮಕ್ಕಳು ತಾಯಿಯ ಮಡಿಲಲ್ಲಿ ಇದ್ದಷ್ಟೇ ಸೇಫ್ ಆಗಿ ಶಿಕ್ಷಕರ ಗರಡಿಯಲ್ಲಿ ಇರುತ್ತಾರೆ ಎಂದು ಹೆತ್ತವರು ಮಕ್ಕಳನ್ನ ಶಾಲೆಗೆ ಕಳಿಸುತ್ತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಶಿಕ್ಷಕ ಕಾಮುಕನಾಗಿದ್ದಾನೆ. 10 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಅಯ್ಯೊ ಅಮ್ಮಾ ಅಂತ ನರಳಾಡುತ್ತಿದ್ದಾಳೆ.
ವರ್ತೂರು ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾಮುಕನಂತೆ ಎರಗಿ ಅತ್ಯಾಚಾರವೆಸಗಿರೋ ಆರೋಪಿ. ನಿನ್ನೆ ಬೆಳಗ್ಗೆ 8.30 ಕ್ಕೆ ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ 3.30ಕ್ಕೆ ಮನೆಗೆ ವಾಪಸ್ ಆಗಿದ್ದಳು. ಬರ್ತಿದ್ದಂತೆ ತನ್ನ ತಾಯಿಯ ಬಳಿ ಹೊಟ್ಟೆ ನೋವು ಎಂದು ಹೇಳಿಕೊಂಡಿದ್ದಳು. ಬಳಿಕ ತಾಯಿ ಆಕೆಗೆ ಸ್ನಾನ ಮಾಡಿಸಲು ಹೋದಾಗ ರಕ್ತದ ಕಲೆಗಳು ಪತ್ತೆಯಾಗಿದೆ. ಈ ಬಗ್ಗೆ ಮಗುವನ್ನು ಕೇಳಿದಾಗ ನಡೆದ ಘಟನೆಯನ್ನ ಪುಟ್ಟ ಬಾಲಕಿ ವಿವರಿಸಿದ್ದಾಳೆ.
ಪಾಪಿ ಪ್ರಿನ್ಸಿಪಲ್
ವಿಶ್ರಾಂತಿ ಪಡೆಯುವಂತೆ ಹೇಳಿ ಅತ್ಯಾಚಾರ ಎಸಗಿದ್ದನಂತೆ ಈ ಪಾಪಿ ಪ್ರಿನ್ಸಿಪಲ್. ಅಷ್ಟೇ ಅಲ್ಲ ತನ್ನ ಕೆಲಸ ಮುಗಿದ ಮೇಲೆ ಮಗುವಿಗೆ ಕೇಕ್ ತಿನ್ನಿಸಿ, ಏನೂ ಆಗಿಲ್ಲವೆಂಬಂತೆ ಕಳುಹಿಸಿದ್ದನಂತೆ. ಇನ್ನು ಬಾಲಕಿಗೆ ರಕ್ತಸ್ರಾವ ಹೆಚ್ಚಾಗಿದ್ದಂತೆ ಆಕೆಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಪೊಲೀಸರೇನೋ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ ನೂರಾರು ಮಕ್ಕಳಿಗೆ ಶಿಕ್ಷಣ ಕೊಡುವ ಸಂಸ್ಥೆ ಕಟ್ಟಿದ ಸಂಸ್ಥಾಪಕ, ತಪ್ಪೇ ಮಾಡದ ಪುಟ್ಟ ಮಗುವಿನ ಬದುಕಿಗೆ ಮುಳ್ಳು ಚುಚ್ಚಿದ್ದು ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ