2010ರ ಏಷ್ಯಾಕಪ್ ಟೂರ್ನಿಯಲ್ಲಿ ನಡೆದ ಸ್ಲೆಡ್ಜಿಂಗ್ ವಾರ್
ಶೋಯೆಬ್ ಅಖ್ತರ್ ಹಾಗೂ ಹರ್ಭಜನ್ ಸಿಂಗ್ ನಡುವಿನ ಟಾಕ್ ವಾರ್
ಹರ್ಭಜನ್ ಸಿಂಗ್ ಜೊತೆಗೆ ಆಫ್ ದಿ ಫೀಲ್ಡ್ನಲ್ಲೂ ನಡೆದಿತ್ತು ಜಗಳ
ಶೋಯೆಬ್ ಅಖ್ತರ್ ಹಾಗೂ ಹರ್ಭಜನ್ ಸಿಂಗ್ ನಡುವೆ 2010ರ ಏಷ್ಯಾಕಪ್ ಟೂರ್ನಿಯಲ್ಲಿ ನಡೆದ ಸ್ಲೆಡ್ಜಿಂಗ್ ವಾರ್ ನಿಮಗೂ ಗೊತ್ತು. ಆದ್ರೆ, ಆನ್ಫೀಲ್ಡ್ನ ವಾರ್ ಬಳಿಕ ಆಫ್ ದ ಫೀಲ್ಡ್ನಲ್ಲಿ ಏನ್ ನಡೀತು ಅಂತಾ ಗೊತ್ತಾ.? ಆ ಇಂಟರೆಸ್ಟಿಂಗ್ ಕಹಾನಿಯೇ ಇಲ್ಲಿದೆ.
ಭಾರತ – ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಇಡೀ ವಿಶ್ವವೇ ಕಾದು ಕುಳಿತಿರುತ್ತೆ. ರನ್ ಸುರಿಮಳೆ, ಬೌಂಡಿರಿ-ಸಿಕ್ಸರ್ ಬೊರ್ಗೆರತ, ವಿಕೆಟ್ ಬೇಟೆಯ ಜೊತೆಗೆ ಸ್ಲೆಡ್ಜಿಂಗ್ ವಾರ್ ಈ ಪಂದ್ಯದ ಕ್ಕಿಕ್ಕನ್ನ ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯುತ್ತೆ. ಇತಿಹಾಸವನ್ನ ಕೆದಕಿದ್ರೆ, ಹಲವು ಸ್ಲೆಡ್ಜಿಂಗ್ ವಾರ್ಗಳು ನೆನಪಿಗೆ ಬರುತ್ತೆ. ಅದ್ರಲ್ಲಿ ಒಂದು ಹರ್ಭಜನ್ ಸಿಂಗ್ VS ಶೋಯೆಬ್ ಅಖ್ತರ್ ಫೈಟ್..!
ಇಬ್ಬರ ನಡುವೆ ಮಾತಿನ ಯುದ್ಧ
2010 ಏಷ್ಯಾಕಪ್ ಮುಖಾಮುಖಿಯಲ್ಲಿ 268 ರನ್ಗಳ ಟಾರ್ಗೆಟ್ ಚೇಸ್ ಮಾಡ್ತಿದ್ದ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. 8ನೇ ಕ್ರಮಾಂಕದಲ್ಲಿ ಹರ್ಭಜನ್ ಸಿಂಗ್ ಕಣಕ್ಕಿಳಿದಾಗ ಭಾರತದ ಗೆಲುವಿಗೆ 5 ಓವರ್ಗಳಲ್ಲಿ 49 ರನ್ ಬೇಕಿದ್ವು. ಕ್ರಿಸ್ಗೆ ಬಂದ ಬೆನ್ನಲ್ಲೇ ಅಖ್ತರ್ ಬೌಲಿಂಗ್ನಲ್ಲಿ ಹರ್ಭಜನ್ ಸಿಕ್ಸರ್ ಸಿಡಿಸಿದ್ರು. ಇದ್ರಿಂದ ಸಿಟ್ಟಾದ ಅಖ್ತರ್, ಆ ಬಳಿಕ ಬೌನ್ಸರ್ ಹಾಕಿ, ಗುರಾಯಿಸ್ತಾ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ರು. ಇದು ಹರ್ಭಜನ್ರನ್ನ ಕೆರಳಿಸಿತ್ತು. ಆದ್ರೂ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಭಜ್ಜಿ, ಕೊನೆಯ ಓವರ್ನ 5ನೇ ಎಸೆತದಲ್ಲಿ, ಸಿಕ್ಸರ್ ಸಿಡಿಸಿ ರಣ ರೋಚಕ ಗೆಲುವಿಗೆ ಕಾರಣರಾದ್ರು. ಇಷ್ಟೇ ಅಲ್ಲ, ಗೆದ್ದ ಬಳಿಕ ಅಖ್ತರ್ರೆಡೆಗೆ ಗುರಾಯಿಸಿ ಸಂಭ್ರಮಿಸಿದ್ರು. ಇದರಿಂದಾಗಿ ಇಬ್ಬರ ನಡುವೆ ಮಾತಿನ ಯುದ್ಧವೂ ನಡೆಯಿತು. ಅಲ್ಲಿಗೆ ಎಲ್ಲಾ ಮುಗಿಯಲಿಲ್ಲ.
ಹರ್ಭಜನ್ ಎಸ್ಕೆಪ್
ಆನ್ಫೀಲ್ಡ್ನಲ್ಲಾದ ಮುಖಭಂಗವನ್ನ ಮನಸ್ಸಿನಲ್ಲಿಟ್ಟುಕೊಂಡಿದ್ದ ಅಖ್ತರ್, ಪಂದ್ಯ ಮುಗಿದ ಬಳಿಕ ಹರ್ಭಜನ್ಗೆ ಹೊಡೆಯಲು ಹೋಟೆಲ್ ರೂಮ್ಗೆ ಹುಡುಕಿಕೊಂಡು ಹೋಗಿದ್ರಂತೆ. ಯಾವಾಗಲೂ ನಮ್ಮ ಜೊತೆ ತಿಂತಾನೆ. ನಮ್ಮ ಜೊತೆಗೆ ಇರ್ತಾನೆ. ಆದ್ರೆ, ಆನ್ಫೀಲ್ಡ್ನಲ್ಲಿ ನಮ್ಮೊಂದಿಗೆ ಮಿಸ್ಬಿಹೆವ್ ಮಾಡ್ತಾನೆ ಅಂತಾ ಅಖ್ತರ್ ಕೋಪಗೊಂಡಿದ್ದರಂತೆ. ಆದರೆ, ಅಖ್ತರ್ ಬರ್ತಾರೆ ಅನ್ನೋದನ್ನ ಮೊದಲೇ ತಿಳಿದಿದ್ದ ಹರ್ಭಜನ್ ಅದಾಗಲೇ ರೂಮ್ನಿಂದ ಕಾಲ್ಕಿತ್ತು ಎಸ್ಕೆಪ್ ಆಗಿದ್ರಂತೆ! ಈ ಕಥೆಯನ್ನ ಸ್ವತಃ ಅಖ್ತರ್ ರಿವೀಲ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ