newsfirstkannada.com

ರೋಹಿತ್​ ಬಳಿಕ ಸಂಜು ಸ್ಯಾಮ್ಸನ್​ ಟೀಮ್​ ಇಂಡಿಯಾದ ಕ್ಯಾಪ್ಟನ್.. ಏನಿದು ಟ್ವಿಸ್ಟ್​​?

Share :

Published April 23, 2024 at 4:10pm

Update April 23, 2024 at 4:16pm

  ಇಂಡಿಯನ್​​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ನಡೆಯಲಿದೆ ಟಿ20 ವಿಶ್ವಕಪ್​​

  ಟಿ20 ವಿಶ್ವಕಪ್​​ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ರೋಹಿತ್​ ಶರ್ಮಾ!

  ರೋಹಿತ್​ ಶರ್ಮಾ ಬಳಿಕ ಟೀಮ್​ ಇಂಡಿಯಾದ ಕ್ಯಾಪ್ಟನ್​ ಯಾರು ಗೊತ್ತಾ?

ಟೀಮ್​ ಇಂಡಿಯಾದ ದಿಗ್ಗಜ ಹರ್ಭಜನ್​ ಸಿಂಗ್​. ಇವರು ಭಾರತಕ್ಕಾಗಿ ಹಲವು ಅದ್ಭುತ ಇನ್ನಿಂಗ್ಸ್​ ಆಡಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರೋ ಭಜ್ಜಿ ಈಗ ಕಾಮೆಂಟರಿ ಮೂಲಕ ಭಾರತ ತಂಡಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಐಪಿಎಲ್​​ ಬೆನ್ನಲ್ಲೇ ಟಿ20 ವಿಶ್ವಕಪ್​ ನಡೆಯಲಿದ್ದು, ಈ ಮಧ್ಯೆ ರೋಹಿತ್​ ಶರ್ಮಾ ಬಳಿಕ ಟೀಮ್​ ಇಂಡಿಯಾದ ಕ್ಯಾಪ್ಟನ್​ ಯಾರು? ಎಂಬ ವಿಚಾರವನ್ನು ಹರ್ಭಜನ್​ ಸಿಂಗ್ ಮತ್ತೆ ಮುನ್ನಲೆಗೆ ತಂದಿದ್ದಾರೆ.

ರೋಹಿತ್​ ಶರ್ಮಾ ಬಳಿಕ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಅಥವಾ ಜಸ್ಪ್ರೀತ್ ಬುಮ್ರಾ ಭಾರತ ತಂಡದ ಕ್ಯಾಪ್ಟನ್​ ಎಂಬ ಚರ್ಚೆ ನಡೆಯುತ್ತಿತ್ತು. ಅಷ್ಟೇ ಅಲ್ಲದೇ ಸುರೇಶ್​ ರೈನಾ ಕೂಡ ಭಾರತ ಕ್ರಿಕೆಟ್​ ತಂಡದ 24ರ ಹರೆಯದ ಶುಭ್ಮನ್ ಗಿಲ್ ರೋಹಿತ್​ ಬಳಿಕ ನಾಯಕನಾಗಬಹುದು ಎಂದಿದ್ದರು. ಈ ಹೊತ್ತಲ್ಲೇ ಹರ್ಭಜನ್​ ಸಿಂಗ್​ ಭಾರತ ತಂಡದ ನಾಯಕ ಈ ಪ್ಲೇಯರ್​ ಆಗಬೇಕು ಎಂದಿದ್ದಾರೆ.

ಇತ್ತೀಚೆಗೆ ಮುಂಬೈ ಇಂಡಿಯನ್ಸ್​​ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್​ ತಂಡವು ಗೆದ್ದು ಬೀಗಿತ್ತು. ಇದಕ್ಕೆ ಕಾರಣ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​​. ಈ ಬಗ್ಗೆ ಮಾತಾಡಿರೋ ಹರ್ಭಜನ್​ ಸಿಂಗ್​​, ಜೈಸ್ವಾಲ್​​ ಬ್ಯಾಟಿಂಗ್​ ಅದ್ಭುತ. ಸಂಜು ಸ್ಯಾಮ್ಸನ್​​ ಬಗ್ಗೆ ನಾವು ಮಾತಾಡೋ ಹಾಗೇ ಇಲ್ಲ. ಸಂಜು ಸ್ಯಾಮ್ಸನ್​​ ಟಿ20 ವಿಶ್ವಕಪ್​ಗಾಗಿ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟರ್​ ಆಗಬೇಕು. ಜತೆಗೆ ಇವರನ್ನು ರೋಹಿತ್​ ಶರ್ಮಾ ಬಳಿಕ ಭಾರತ ತಂಡದ ಕ್ಯಾಪ್ಟನ್ ಆಗಿ ಬೆಳೆಸಬೇಕು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​

ರೋಹಿತ್​ ಬಳಿಕ ಸಂಜು ಸ್ಯಾಮ್ಸನ್​ ಟೀಮ್​ ಇಂಡಿಯಾದ ಕ್ಯಾಪ್ಟನ್.. ಏನಿದು ಟ್ವಿಸ್ಟ್​​?

https://newsfirstlive.com/wp-content/uploads/2024/04/Sanju_Samson.jpg

Load More