newsfirstkannada.com

ಕಾಮೆಂಟರಿ ಮಾಡುವಾಗ ಅನುಷ್ಕಾ ಶರ್ಮಾ, ಅಥಿಯಾ ಶೆಟ್ಟಿ ಬಗ್ಗೆ ಕೆಟ್ಟದಾಗಿ ನಾಲಿಗೆ ಹರಿಬಿಟ್ಟ ಹರ್ಭಜನ್ ಸಿಂಗ್..!

Share :

Published November 20, 2023 at 1:59pm

Update November 20, 2023 at 2:01pm

    ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿರುದ್ಧ ಭಾರೀ ಆಕ್ರೋಶ

    ಅನುಷ್ಕಾ ಶರ್ಮಾ ಅಭಿಮಾನಿಗಳಿಂದ ಕ್ಷಮೆ ಕೇಳುವಂತೆ ಒತ್ತಾಯ

    ಒಟ್ಟಿಗೆ ಕೂತು ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ, ಅಥಿಯಾ

ಗುಜರಾತ್​ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ವಿಶ್ವಕಪ್ ಫೈನಲ್ ವೀಕ್ಷಣೆಗೆ ಸ್ಟಾರ್ ದಿಗ್ಗಜರ ದಂಡೇ ಬಂದಿತ್ತು. ಸಿನಿಮಾ ನಟ, ನಟಿಯರೂ, ಕ್ರಿಕೆಟ್ ಆಟಗಾರರ ಪತ್ನಿಯರೂ ಸೇರಿಂದತೆ ಗಣ್ಯರು ಪಂದ್ಯ ವೀಕ್ಷಣೆಗೆ ಬಂದಿದ್ದರು.

ಅದರಂತೆ ನಟಿ ಹಾಗೂ ಕಿಂಗ್ ವಿರಾಟ್ ಕೊಹ್ಲಿ ಅವರ ಪತ್ನಿಯೂ ಆಗಿರುವ ಅನುಷ್ಕಾ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಸಹ ಸ್ಟೇಡಿಯಂಗೆ ಬಂದು ಪಂದ್ಯವನ್ನು ವೀಕ್ಷಣೆ ಮಾಡ್ತಿದ್ದರು. ವಿಶೇಷ ಅಂದರೆ ಇವರಿಬ್ಬರು ಒಟ್ಟಿಗೆ ಕೂತು ಪಂದ್ಯವನ್ನು ನೋಡುತ್ತಿದ್ದರು.

ವೀಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಇವರಿಬ್ಬರು ಎಲ್ಲಾ ಸ್ಟಾರ್​ಗಳಂತೆಯೇ ಕ್ಯಾಮೆರಾ ಮನ್​ಗಳ ಕಣ್ಣಿಗೆ ಆಗಾಗ ಬೀಳುತ್ತಿದ್ದರು. ಅದು ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಅದನ್ನು ಗಮನಿಸಿದ ಸ್ಟಾರ್​​ ಸ್ಪೋರ್ಟ್ಸ್​ನ ಹಿಂದಿ ಕಾಮೆಂಟೆಟರ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​, ಅನುಷ್ಕಾ ಶರ್ಮಾ ಹಾಗೂ ಅಥಿಯಾ ಶೆಟ್ಟಿಗೆ ಅಗೌರವ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ಮೂಲಕ ಹರ್ಭಜನ್ ಸಿಂಗ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಂದ್ಯದ ವೇಳೆ ಅನುಷ್ಕಾ ಹಾಗೂ ಅಥಿಯಾ ಶೆಟ್ಟಿ ಮಾತನಾಡುತ್ತಿರೋದನ್ನು ಗಮನಿಸಿದ ಹರ್ಭಜನ್ ಸಿಂಗ್.. ಅವರು ಕ್ರಿಕೆಟ್ ಬಗ್ಗೆ ಮಾತಾಡ್ತಿದ್ದಾರೋ ಅಥವಾ ಸಿನಿಮಾ ಬಗ್ಗೆ ಮಾತಾಡ್ತಿದ್ದಾರೋ ಎಂದು ನಾನು ಯೋಚನೆ ಮಾಡ್ತಿದ್ದೇನೆ. ಏಕೆಂದರೆ ಅವರು (ಅನುಷ್ಕಾ, ಅಥಿಯಾ) ಕ್ರಿಕೆಟ್ ಬಗ್ಗೆ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದು ನನಗೆ ಗೊತ್ತಿಲ್ಲ ಅನ್ನೋ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಹರ್ಭಜನ್ ಸಿಂಗ್ ಮಾತು ಕೇಳುತ್ತಿದ್ದಂತೆಯೇ ಅನುಷ್ಕಾ ಶರ್ಮಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು. ಹೆಣ್ಮಕ್ಕಳಿಗೆ ಅಗೌರವ ತೋರಿಸಿದ ಭಜ್ಜಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಾಮೆಂಟರಿ ಮಾಡುವಾಗ ಅನುಷ್ಕಾ ಶರ್ಮಾ, ಅಥಿಯಾ ಶೆಟ್ಟಿ ಬಗ್ಗೆ ಕೆಟ್ಟದಾಗಿ ನಾಲಿಗೆ ಹರಿಬಿಟ್ಟ ಹರ್ಭಜನ್ ಸಿಂಗ್..!

https://newsfirstlive.com/wp-content/uploads/2023/11/HARBHAJN_SINGH.jpg

Load More